ಬೆಂಗಳೂರು, ಫೆಬ್ರವರಿ 8: ನಗರದ ತಲಘಟ್ಟಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಅಡುಗೆ ಕೋಣೆಯಲ್ಲಿ ಕುಡಿಯುವ ನೀರಿನ (water) ನಲ್ಲಿಯಲ್ಲಿ ಕೆಸರು ನೀರು ಬಂದಿರುವಂತಹ ಘಟನೆ ನಡೆದಿದ್ದು, ಈ ಕುರಿತು ನಿವಾಸಿಗಳು ಟ್ವಿಟರ್ನಲ್ಲಿ ವಿಡಿಯೋ, ಫೋಟೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ ವಿಡಿಯೋ ಶೇರ್ ಮಾಡಲಾಗಿದೆ. ಕನಕಪುರ ತಲಘಟ್ಟಪುರದ ನ್ಯಾಯಾಂಗ ಬಡಾವಣೆಯ ಶೋಭಾ ಅರೆನಾ ಅಪಾರ್ಟ್ಮೆಂಟ್ನಲ್ಲಿ ಕಲುಷಿತ ಕೆಸರು ಮಿಶ್ರಿತ ನೀರು ಬಂದಿದೆ. ಅಪಾರ್ಮೆಂಟ್ನ ಇತರೆ ನಿವಾಸಿಗಳ ಮನೆಯಲ್ಲಿಯೂ ಕೆಸರು ನೀರು ಬಂದಿದೆ. ಹೀಗಾಗಿ ನಿವಾಸಿಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಪೊಲೀಸರು ಸೇರಿ ಹಲವರಿಗೆ ಟ್ಯಾಗ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ದಯವಿಟ್ಟು ನಮಗೆ ಕಾವೇರಿ ನೀರು ಕೊಡಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ನಿನ್ನೆ ಶೇರ್ ಮಾಡಿರುವ ವಿಡಿಯೋವನ್ನು ಸುಮಾರು 2 ಲಕ್ಷದ 51 ಸಾವಿರ ಜನರು ವಿಕ್ಷಣೆ ಮಾಡಿದ್ದಾರೆ.
‘ಶೋಭಾ ಅರೆನಾ ಅಪಾರ್ಟ್ಮೆಂಟ್ನಲ್ಲಿ ಕುಡಿಯಲು ನಾವು ಪಡೆಯುತ್ತಿರುವ ನೀರಿನ ಗುಣಮಟ್ಟವನ್ನು ದಯವಿಟ್ಟು ನೋಡಿ. ದಯವಿಟ್ಟು ನ್ಯಾಯಾಂಗ ಬಡಾವಣೆ, ತಲಘಟ್ಟಪುರ, ಕನಕಪುರ ಮುಖ್ಯರಸ್ತೆಗಳಲ್ಲಿ ನಮಗೆ ಕಾವೇರಿ ನೀರು ಕೊಡಿ’ ಎಂದು ಅಪಾರ್ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ ಟ್ವೀಟ್ ಮಾಡಿದ್ದಾರೆ.
Dear @CMofKarnataka, @DKShivakumar, @BBMPCOMM, Please see the quality of water we are getting in Sobha Arena Apartment for Drinking. Please give us Cauvery Water at Judicial Layout, Thalagattapura, Kanakapura Main Road. @KA_HomeBuyers @chairmanbwssb @BlrCityPolice @SobhaLtd pic.twitter.com/rn8yUzSuWz
— Dhananjaya Padmanabhachar (@Dhananjaya_Bdvt) February 7, 2024
ಬೇಸಿಗೆಗೂ ಮುನ್ನ ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಕುಸಿಯುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ವಿಜಯಪುರ: ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಧಿಕಾರಿಗಳ ಪ್ರಕಾರ ನಗರದ 35 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ನಿತ್ಯ 24 ಗಂಟೆ ನೀರು ಪೂರೈಕೆ ಮಾಡಲಾಗಿತ್ತು. ಅದಕ್ಕಾಗಿ ಶುಲ್ಕವನ್ನೂ ಸಹ ಪಡೆಯಲಾಗಿತ್ತು. ಆದರೆ ನಗರದಲ್ಲಿ ಹೆಸರಿಗಷ್ಟೇ 24 ಗಂಟೆ ನೀರು ಪೂರೈಕೆ ಯೋಜನೆಯಾಗಿದೆ. ಇಷ್ಟೇ ಅಲ್ಲಾ ಇನ್ನುಳಿದ 23 ವಾರ್ಡ್ ಗಳಲ್ಲಿ ನಿತ್ಯ 2 ಗಂಟೆ ನೀರು ಬಿಡಲಾಗುತ್ತಿತ್ತು.
ಇದನ್ನೂ ಓದಿ: ಅಂತರ್ಜಲ ಮಟ್ಟ ಕುಸಿತ: ಬೆಂಗಳೂರಿನ ಈ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ
ಇದೀಗ ಅದಕ್ಕೂ ಸಹ ಕೊಕ್ಕೆ ಬಿದ್ದಿದೆ. ನಿತ್ಯ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ವಾರ್ಡ್ ಗಳಲ್ಲಿ ಹಾಗೂ ನಿತ್ಯ 2 ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ವಾರ್ಡ್ ಗಳಲ್ಲಿ ಇದೀಗ ಬರೋಬ್ಬರಿ 10 ರಿಂದ 15 ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ. ಇದು ನಗರ ವಾಸಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.