Namma Metro: ಮೆಟ್ರೋ ಸುರಂಗ ಮಾರ್ಗ ಕೊರೆದು ವರ್ಷಕ್ಕೆ 8 ದಿನ ಬಾಕಿ ಇರುವಾಗಲೇ ಹೊರಬಂದ ಟಿಬಿಎಂ ಭದ್ರ
Namma Metro Pink line: ಬೆಂಗಳೂರು ನಮ್ಮ ಮೆಟ್ರೋ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ವೆಂಕಟೇಶಪುರದಿಂದ ಕೆಜಿ ಹಳ್ಳಿ ನಡುವೆ ನಮ್ಮ ಮೆಟ್ರೋ ಸುರಂಗವನ್ನು ಯಶಸ್ವಿಯಾಗಿ ಕೊರೆದು ಹೊರ ಬಂದಿದೆ. ಬರೋಬ್ಬರಿ 1,186 ಮೀಟರ್ ಉದ್ದದ ಸುರಂಗ ಕೊರೆದು ಒಂದು ವರ್ಷಕ್ಕೆ ಕೇವಲ 8 ದಿನಗಳು ಬಾಕಿ ಇರುವಾಗಲೇ ಭದ್ರ ಹೊರಬಂದಿದೆ. ಹಾಗಾದ್ರೆ, ಇದು ಯಾವ ಮಾರ್ಗ? ಎಷ್ಟು ಕಾಮಗಾರಿ ಪೂರ್ಣಗೊಂಡಿದೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಫೆಬ್ರವರಿ 08): ಬೆಂಗಳೂರು ನಮ್ಮ ಮೆಟ್ರೋ (Bengaluru namma metro) ಬನ್ನೇರುಘಟ್ಟ ರಸ್ತೆಯ ಕಾಳೇನಅಗ್ರಹಾರ ನಡುವಿನ ಗುಲಾಬಿ ಮಾರ್ಗದಲ್ಲಿ (Metro pink line) ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಹೌದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ‘ಭದ್ರಾ’ ಹೆಸರಿನ ಟನಲ್ ಬೋರಿಂಗ್ ಮೆಷಿನ್ (TBM) ಸದ್ಯ ಪ್ರಸ್ತುತ ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ (ಕಾಡುಗೊಂಡನಹಳ್ಳಿ) ಬರೋಬ್ಬರಿ 1,186 ಮೀಟರ್ ಉದ್ದದ ಸುರಂಗ ಕೊರೆದು ಹೊರಬಂದಿದೆ. ಒಂದು ವರ್ಷಕ್ಕೆ ಎಂಟು ದಿನಗಳು ಬಾಕಿ ಇರುವಾಗಲೇ ಇಂದು ಟಿಬಿಎಂ ಭದ್ರ ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರ ಬಂದಿದ್ದು, ಸ್ಥಳದಲ್ಲಿ ಮೆಟ್ರೋ ನೌಕರರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಬರಮಾಡಿಕೊಂಡರು.
19,120 ಮೀಟರ್ ಸುರಂಗ ಮಾರ್ಗ ಪೂರ್ಣ
ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿ ನಿಲ್ದಾಣದ ವರೆಗಿನ ಸುರಂಗ ಮಾರ್ಗ ಕೊರೆಯಲು ಟಿಬಿಎಂ ಭದ್ರ 2023ರ ಫೆಬ್ರವರಿ 16ರಂದು ಕಾಮಗಾರಿ ಆರಂಭಿಸಿತ್ತು. ಇಂದು ಅಂದರೆ ಒಂದು ವರ್ಷಕ್ಕೆ ಕೇವಲ 8 ದಿನಗಳು ಬಾಕಿ ಇರುವಾಗಲೇ ಭದ್ರ, 1,185 ಮೀಟರ್ ಸುರಂಗ ಕೊರೆದು ಆಚೆ ಬಂದಿದೆ. ಈ ಮೂಲಕ 20,992 ಮೀಟರ್ ಸುರಂಗ ಮಾರ್ಗದ ಪೈಕಿ 19,120 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಂತಾಗಿದೆ.
ಇದನ್ನೂ ಓದಿ: Namma Metro: ಬಂದೇಬಿಡ್ತು ಬೆಂಗಳೂರಿನ ಮೊದಲ ಚಾಲಕ ರಹಿತ ರೈಲು, ಚೀನಾದಿಂದ ಚೆನ್ನೈಗೆ ಬಂದಿದೆ
ಹಂತ-2 ಯೋಜನೆಯ ಅಡಿಯಲ್ಲಿ ರೀಚ್-6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗಾವಾರದವರೆಗೆ ಒಟ್ಟು 21.26 ಕಿಲೋ ಉದ್ದವಿದೆ. ಈ ರೀಚ್- 6 ಮಾರ್ಗ 18 ನಿಲ್ದಾಣಗಳನ್ನ ಹೊಂದಿದ್ದು, ರೀಚ್-6 ಮಾರ್ಗ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಿರ್ಮಾಣ ಹಂತದಲ್ಲಿರುವ ಕೆಜಿ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ‘ಭದ್ರಾ’ ಟಿಬಿಎಂ (ಟನಲ್ ಬೋರಿಂಗ್ ಮಷಿನ್ ) ಹೊರ ಬರುವ ಕಾರ್ಯಕ್ರಮವನ್ನು ಇಂದು ವೀಕ್ಷಿಸಿದೆ. ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ 1,186 ಮೀಟರ್ ಉದ್ದದ ಸುರಂಗ ಕೊರೆಯುವ ಕಾರ್ಯ ಯಶಸ್ವಿಯಾಗಿ ಮುಗಿದಿದೆ.… pic.twitter.com/zWNPhWLEvZ
— DK Shivakumar (@DKShivakumar) February 8, 2024
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಇನ್ನು ಭದ್ರವನ್ನು ಬರಮಾಡಿಕೊಂಡ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜನರು ಆದಷ್ಟು ಮೆಟ್ರೋ ಬಳಸಬೇಕು ಎನ್ನುವುದು ಸರ್ಕಾರದ ಬಯಕೆ. ಅದಕ್ಕೆ ಹೆಚ್ಚು ಒತ್ತು ಕೊಟ್ಟು ಮೆಟ್ರೋ ಸುರಂಗ ಕಾಮಗಾರಿ ನಡೀತಿದೆ. ಕೆ.ಜಿ.ಹಳ್ಳಿ ಮೆಟ್ರೋ ಸ್ಟೇಷನ್ನಲ್ಲಿ ಟಿಬಿಎಂ ಭದ್ರ ಓಪನ್ ಮಾಡಿದ್ದು, ನಾಗವಾರದವರೆಗೆ 1.18 ಕಿಲೋ ಮೀಟರ್ ಸುರಂಗ ಕೊರೆಯಲಾಗಿದೆ. 13.76 ಕಿಲೋ ಮೀಟರ್ ಪಿಂಕ್ ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದರು ಹೇಳಿದರು.
ಕೊಟ್ಟಿಗೆರೆ-ನಾಗವಾರವರೆಗೆ ನೂತನವಾಗಿ ಪಿಂಕ್ ಮಾರ್ಗ ಕಲ್ಪಿಸಲಾಗುತ್ತಿದೆ. ಒಟ್ಟು 4 ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣಗಳು ಇವೆ. 2025ಕ್ಕೆ 4 ಮೆಟ್ರೋ ನಿಲ್ದಾಣಗಳು ಉದ್ಘಾಟನೆ ಆಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಮಾಡುತ್ತೇವೆ. ದೆಹಲಿ ಸೇರಿದಂತೆ ಹಲವೆಡೆ ಪರಿಶೀಲನೆ ಮಾಡಿದ್ದೇನೆ. ಬೇರೆಡೆಗಿಂತ ಇಲ್ಲಿ ಸ್ಟ್ಯಾಂಡರ್ಡ್ ಕ್ವಾಲಿಟಿ ಮೆಂಟೈನ್ ಮಾಡಲಾಗುತ್ತಿದೆ. ನಗರದಲ್ಲಿ ಅನೇಕ ಸುರಂಗ ಮಾರ್ಗ ಕೊರೆಯಲು ಕಾರ್ಯ ರೂಪಿಸಲಾಗಿದೆ. ಸುರಂಗ ಮಾರ್ಗ ಕೊರೆಯುವುದರಿಂದ ಆಗುವ ಎಫೆಕ್ಟ್ ಬಗ್ಗೆಯೂ ಚರ್ಚೆಗಳು ನಡೆಸಿದ್ದು, ಅದಕ್ಕಾಗಿಯೇ ಟನಲ್ ಕೊರೆಯುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ