ಸಿಎಂ 2ನೇ ಜನಸ್ಪಂದನಕ್ಕೆ ಬಂದ ಅರ್ಜಿಗಳು ಎಷ್ಟು? ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು..!
ಇಂದು ವಿಧಾನಸೌಧದ ಆವರಣದಲ್ಲೇ ಎರಡನೇ ಭಾರಿಗೆ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಜನರ ಬಳಿ ತೆರಳಿ ಖುದ್ದು ಅಹವಾಲು ಸ್ವೀಕರಿಸಿದ್ದಾರೆ. ಎರಡನೇ ಬಾರಿಯ ಜನಸ್ಪಂದನ ಕಾರ್ಯಕ್ರಮದಲ್ಲಿ 20 ಸಾವಿರ ಜನ ಭಾಗಿ ಆಗಿದ್ದಾರೆ. ಈ ಬಾರಿ ಒಟ್ಟು 11 ಸಾವಿರ ಅರ್ಜಿಗಳ ನೋಂದಣಿಯಾಗಿದೆ. ಕಳೆದ ಬಾರೀ 4,030 ಅರ್ಜಿಗಳ ಸ್ವೀಕರಿಸಿದ್ದು, ಈ ಪೈಕಿ 3,738 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ 8: ಕಳೆದ ಸೆಪ್ಟೆಂಬರ್‌ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ನಡೆಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಸಾವಿರಾರು ಜನರ ಅಹವಾಲು ಸ್ವೀಕರಿಸಿ ಪರಿಹರಿಸಿದ್ದರು. ಇಂದು ವಿಧಾನಸೌಧದ ಆವರಣದಲ್ಲೇ ರಾಜ್ಯಮಟ್ಟದ ಜನಸ್ಪಂದನ ನಡೆಸಿದ್ದು, ಈ ಬಾರಿಯ ಜನಸ್ಪಂದನಕ್ಕೆ ಜನಸಾಗರವೇ ಹರಿದುಬಂದಿದೆ. ಎರಡನೇ ಬಾರಿಯ ಜನಸ್ಪಂದನ ಕಾರ್ಯಕ್ರಮದಲ್ಲಿ 20 ಸಾವಿರ ಜನ ಭಾಗಿ ಆಗಿದ್ದಾರೆ. ಜನರ ಬಳಿ ತೆರಳಿ ಖುದ್ದು ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕರಿಸಿದ್ದಾರೆ. ಈ ಬಾರಿ ಒಟ್ಟು 11 ಸಾವಿರ ಅರ್ಜಿಗಳ ನೋಂದಣಿಯಾಗಿದೆ. ಕಳೆದ ಬಾರೀ 4,030 ಅರ್ಜಿಗಳ ಸ್ವೀಕರಿಸಿದ್ದು, ಈ ಪೈಕಿ 3,738 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಎರಡನೇ ಬಾರಿಯ ಜನಸ್ಪಂದನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ನಡೆಯಲಿದ್ದು, 10 ಸಾವಿರ ಜನರಕ್ಕೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರ್ಯಾಂಡ್ ಸ್ಟೆಪ್ ಮುಂಭಾಗ ಜರ್ಮನ್ ಟೆಂಟ್ ಹಾಕಲಾಗಿದೆ.
ಜನಸ್ಪಂದನದಲ್ಲಿ ಸುಮಾರು 20,000 ಜನರು ಭಾಗಿ: ಸಿಎಂ ಸಿದ್ದರಾಮಯ್ಯ
ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ 11,000 ಜನ ಭಾಗವಹಿಸಿದ್ದರು. ಅರ್ಜಿದಾರರ ಜೊತೆ ಅವರ ಸಂಬಂಧಿಕರು ಕೂಡ ಭಾಗವಹಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದಾರೆ. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬಂದಿದ್ದಾವೆ. ಕೆಲವು ಅರ್ಜಿಗಳನ್ನ ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಜನಸ್ಪಂದನ ಆರಂಭ; ಖುದ್ದು ಜನರ ಬಳಿ ತೆರಳಿ ಅಹವಾಲು ಸ್ವೀಕರಿಸುತ್ತಿರುವ ಸಿಎಂ
ನೂರಾರು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿ ಆದೇಶ ಮಾಡಿದ್ದೇವೆ. ಇಲಾಖೆ, ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಅರ್ಜಿ ಕೊಡಲಾಗಿದೆ. ಜಾಗೃತೆಯಿಂದ ಅಧಿಕಾರಿಗಳು ಅರ್ಜಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜನರ ಬಳಿ ಸಾಕಷ್ಟು ಸಮಸ್ಯೆಗಳಿವೆ, ಅದನ್ನು ಇತ್ಯರ್ಥ ಮಾಡಬೇಕು. ಈ ಹಿಂದೆ 98% ಅರ್ಜಿ ವಿಲೇವಾರಿ ಮಾಡಿದ್ದೇವೆ. ಕಾನೂನಿಗೆ ವಿರುದ್ಧವಾದ ಅರ್ಜಿಗಳು ಬಂದಿದ್ದರೇ ಹಿಂಬರಹ ಕೊಟ್ಟು ಇಂಥ ಕಾರಣದಿಂದ ಬಗೆಹರಿಸಲಾಗಲ್ಲ ಅಂತಾ ಅಧಿಕಾರಿಗಳು ತಿಳಿಸಬೇಕು. ಈಗಲೂ ಅದೇ ರೀತಿ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ
ಡಿಸಿಗಳು, ಜಿ.ಪಂ. ಸಿಇಒಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನೀವು ಕೆಲಸ ಮಾಡಿದ್ದರೆ ನಮಗೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆ ಆಗುತ್ತೆ. ಡಿಸಿ, ಸಿಇಒಗಳು ಕೆಲಸ ಮಾಡಿದರೆ ಆಡಳಿತ ಚುರುಕಾಗಿದೆ ಅಂದುಕೊಳ್ಳುತ್ತಾರೆ. ಆಡಳಿತ ಸಮಸ್ಯೆಯಿಂದ ಕೂಡಿರಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜನಸ್ಪಂದನಕ್ಕೆ ಹರಿದು ಬಂದ ಜನ ಸಾಗರ; ವರ್ಗಾವಣೆಗಾಗಿ ಕಣ್ಣೀರಿಟ್ಟ ಶಿಕ್ಷಕಿ
ನಿಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸುವುದಾದರೆ ಕೂಡಲೇ ಮಾಡಬೇಕು. ನಿರ್ಲಕ್ಷ್ಯ ತೋರಿಸಿದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Thu, 8 February 24