AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಯುವಕನಿಗೆ ಚಾಕು ಇರಿತ: ಮದ್ವೆ ಗಂಡು ಅರೆಸ್ಟ್​

ಮದುವೆ ಆಗುವ ಹುಡುಗಿ ಸ್ನೇಹಿತೆಯನ್ನು ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಕೋಳಿ ಅಂಗಡಿ ಯುವಕನಿಗೆ ವಾರ್ನ್ ಮಾಡುವುದಕ್ಕೆ ಹೋಗಿದ್ದ ಯುವಕ ಚಾಕುವಿನಿಂದ ಇರಿದಿರುವಂತಹ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. 

ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಯುವಕನಿಗೆ ಚಾಕು ಇರಿತ: ಮದ್ವೆ ಗಂಡು ಅರೆಸ್ಟ್​
ಪ್ರಾತಿನಿಧಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Edited By: |

Updated on: Feb 08, 2024 | 7:42 PM

Share

ಬೆಂಗಳೂರು, ಫೆಬ್ರವರಿ 8: ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಕೋಳಿ ಅಂಗಡಿ ಯುವಕನಿಗೆ ವಾರ್ನ್ ಮಾಡುವುದಕ್ಕೆ ಬಂದ ಸ್ನೇಹಿತ ಚಾಕುವಿನಿಂದ ಇರಿದಿರುವಂತಹ (stabbed) ಘಟನೆ ಮಾಗಡಿ ರಸ್ತೆಯಲ್ಲಿ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಸುದೀಪ್ ಎಂಬಾತನಿಂದ ವಿವೇಕ್ ರಾವ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ. ಇಬ್ಬರು ಒಂದೇ ಏರಿಯಾದ ಹುಡುಗರು. ಸುದೀಪ್​ಗೆ ಮದುವೆ ನಿಶ್ಚಯ ಆಗಿರುತ್ತೆ. ಅದೇ ಹುಡುಗಿ ಜೊತೆಗೆ ಆಟೋದಲ್ಲಿ ಸುದೀಪ್ ತೆರಳುತ್ತಿದ್ದ. ಸುದೀಪ್ ಮದುವೆ ಆಗುವ ಹುಡುಗಿ ಜೊತೆಗೆ ಆಕೆಯ ಸ್ನೇಹಿತೆ ಮಲ್ಲವ್ವ ಕೂಡ ಇದ್ದಳು. ಆಟೋದಲ್ಲಿ ಹೋಗುವಾಗ ಇಬ್ಬರು ಹುಡುಗಿಯರನ್ನ  ವಿವೇಕ್ ರಾವ್​ ರೇಗಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸುದೀಪ್ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ವಿವೇಕ್ ರಾವ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ಆರೋಪಿ ಬಂಧಿಸಿದ್ದಾರೆ.

ಗೂಡ್ಸ್​​ ವಾಹನ ಮತ್ತು ಕ್ರೂಸರ್​​ ಮಧ್ಯೆ ಡಿಕ್ಕಿ: ಮಹಿಳೆ ಸಾವು

ವಿಜಯಪುರ: ಗೂಡ್ಸ್​​ ವಾಹನ ಮತ್ತು ಕ್ರೂಸರ್​​ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ವಿಜಯಪುರ ತಾಲೂಕಿನ ಮಧಬಾವಿ ಕ್ರಾಸ್​​ ಬಳಿ ನಡೆದಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಸುನಂದಾ ಹಾದಿಮನಿ (40) ಮೃತರು.

ಇದನ್ನೂ ಓದಿ: ಲಾರಿ ಚಾಲಕನ ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ದಂಪತಿ ಅರೆಸ್ಟ್, ಹೇಗೆ?

ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

KKRTC ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಕಲಬುರಗಿ: ಕೆಕೆಆರ್​​ಟಿಸಿ ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಸ್‌ನಲ್ಲಿನ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ಕಲಬುರಗಿ ತಾಲೂಕಿನ ಶಹಬಾದ್ ಕ್ರಾಸ್ ಬಳಿ ನಡೆದಿದೆ. ಗಾಯಾಳನ್ನ ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಲಬುರಗಿ ಸಂಚಾರಿ ಠಾಣೆ-1 ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಸ್​​ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

ದಕ್ಷಿಣ ಕನ್ನಡ: ಬಸ್​​ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿ‌ ಎಂಬಲ್ಲಿ ಬಸ್​ನಿಂದ ಬಿದ್ದು ಗಾಯಗೊಂಡಿದ್ದ ರಾಧಾ(66) ಮೃತ ಮಹಿಳೆ.

ಇದನ್ನೂ ಓದಿ: ಹಣದ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಅಮಾನವೀಯ ಕೃತ್ಯ: ಯುವಕನನ್ನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದ ಐವರ ಬಂಧನ

ಬಾಗಿಲು ಬಳಿ ನಿಂತಿದ್ದಾಗ ಆಯತಪ್ಪಿ ಬಿದಿದ್ದಾರೆ. ಬಸ್ ಚಾಲಕ, ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ಕೋಟಿ ರೂಪಾಯಿ ಕಾರು ಖರೀದಿ ಮಾಡಿದ ಅರ್ಜುನ್ ಜನ್ಯ; ಇಲ್ಲಿದೆ ವಿಡಿಯೋ
ಕೋಟಿ ರೂಪಾಯಿ ಕಾರು ಖರೀದಿ ಮಾಡಿದ ಅರ್ಜುನ್ ಜನ್ಯ; ಇಲ್ಲಿದೆ ವಿಡಿಯೋ
ಮೊದಲ ಹೆಜ್ಜೆಯನ್ನಿಟ್ಟ ಮಗಳನ್ನು ಕಂಡು ಭಾವುಕಳಾದ ತಾಯಿ!
ಮೊದಲ ಹೆಜ್ಜೆಯನ್ನಿಟ್ಟ ಮಗಳನ್ನು ಕಂಡು ಭಾವುಕಳಾದ ತಾಯಿ!
ಸಿಎಂ ಕಿವಿಯಲ್ಲಿ ಮೋದಿ ಹೇಳಿದ್ದೇನು?: ಸಿದ್ದರಾಮಯ್ಯರಿಂದಲೇ ಸಿಕ್ತು ಉತ್ತರ
ಸಿಎಂ ಕಿವಿಯಲ್ಲಿ ಮೋದಿ ಹೇಳಿದ್ದೇನು?: ಸಿದ್ದರಾಮಯ್ಯರಿಂದಲೇ ಸಿಕ್ತು ಉತ್ತರ
"ಬ್ರೋ ಕೊನೆಗೂ ಪ್ರೀತಿ ಜಿಂಟಾ ಅಪ್ಪುಗೆ ಸಿಕ್ತು!"