ಹಣದ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಅಮಾನವೀಯ ಕೃತ್ಯ: ಯುವಕನನ್ನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದ ಐವರ ಬಂಧನ

ಸಾಲ ಪಡೆದು ವಾಪಸ್ ನೀಡದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಐವರು ವ್ಯಕ್ತಿಗಳು ಸೇರಿಕೊಂಡು ಮನಸ್ಸೋಇಚ್ಛೆ ಥಳಿಸಿರುವಂತಹ ಅಮಾನವೀಯ ಕೃತ್ಯ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಪುರ ರಸ್ತೆಯ ಪ್ಲಾಂಟೇಶನ್​ನಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟಿದ್ದ ಐವರನ್ನು ಸದ್ಯ ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಣದ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಅಮಾನವೀಯ ಕೃತ್ಯ: ಯುವಕನನ್ನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದ ಐವರ ಬಂಧನ
ಬಂಧಿತರು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Feb 08, 2024 | 3:16 PM

ಚಿಕ್ಕಮಗಳೂರು, ಫೆಬ್ರವರಿ 8: ಹಣದ ವಿಚಾರಕ್ಕೆ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದ (beating) ಐವರು ಜನರನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಪುರ ರಸ್ತೆಯ ಪ್ಲಾಂಟೇಶನ್​ನಲ್ಲಿ ಘಟನೆ ನಡೆದಿದೆ. ಕೊಪ್ಪ ಸಮೀಪದ ಕರ್ಕೇಶ್ವರ ಗ್ರಾಮದ ಸತೀಶ್ ಮೇಲೆ ಹಲ್ಲೆ ಮಾಡಲಾಗಿದೆ. ಮಹೇಶ್, ವಿಠಲ್, ಸಿರಿಲ್, ಸುನೀಲ್​ ಮತ್ತು ಮಂಜು ಬಂಧಿತರು. ಸಾಲ ಪಡೆದು ವಾಪಸ್ ನೀಡದ ಯುವಕನಿಗೆ ಈ ಐವರು ಸೇರಿಕೊಂಡು ಮನಸ್ಸೋಇಚ್ಛೆ ಥಳಿಸಿದ್ದಾರೆ. ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಮದ್ಯಪಾನ ಮಾಡುತ್ತ ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ಜೊತೆಗೆ ಹಲ್ಲೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿತ್ತು. ಗಂಭೀರವಾಗಿ ಗಾಯಗೊಂಡ ಸತೀಶ್​​ನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂಡ ರಚನೆ ಮಾಡಿದ್ದ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಸದ್ಯ  ಐವರನ್ನು ಬಂಧಿಸಿದ್ದಾರೆ.

ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಲಾರಿ: ಚಾಲಕ ಸಾವು

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕೋಡಿಹೊಸೂರು ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ಯಾಮಣ್ಣನಕೆರೆಗೆ ಲಾರಿ ಉರುಳಿ ಬಿದ್ದ ಪರಿಣಾಮ ಚಾಲಕ ವಿನೋದ್ ಕುಮಾರ್(29) ದುರ್ಮರಣ ಹೊಂದಿದ್ದಾರೆ. ತಿರುವಿನಲ್ಲಿ ನಾಮಫಲಕ ಅಳವಡಿಸಿದ ಹಿನ್ನೆಲೆ ದುರ್ಘಟನೆ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಾವೇರಿ‌ ನದಿಯಲ್ಲಿ ಈಜಲು‌ ಹೋಗಿ ಯುವಕ ಸಾವು

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿಯ ಕಾವೇರಿ‌ ನದಿಯಲ್ಲಿ ಈಜಲು‌ ಹೋಗಿ ಯುವಕನೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನಾಯಂಡಹಳ್ಳಿ ಮೂಲದ ವಿಶ್ವಾಸ್(27) ಮೃತ ಯುವಕ.

ಇದನ್ನೂ ಓದಿ: ಬೆಂಗಳೂರು ಜೋಡಿ ಕೊಲೆ ಪ್ರಕರಣ; ಹತ್ಯೆಗೆ ಕಾರಣ ಬಾಯ್ಬಿಟ್ಟ ಆರೋಪಿ

ಸ್ನೇಹಿತರೊಂದಿಗೆ ಮುತ್ತತ್ತಿಯ ಮುತ್ತೇತ್ತರಾಯನ ದರ್ಶನಕ್ಕೆ ಬಂದಿದ್ದ ವಿಶ್ವಾಸ್, ದೇವರ ದರ್ಶನಕ್ಕೂ ಮೊದಲು ಕಾವೇರಿ ನದಿಯಲ್ಲಿ ಈಜಲು ಹೋಗಿ, ಈಜು ಬಾರದೇ ಸಾವನ್ನಪ್ಪಿದ್ದಾನೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ನೇರಿನ ಸೆಳೆತಕ್ಕೆ ಸಿಲುಕಿ ಪ್ರವಾಸಿಗ ಸಾವು

ಕೊಡಗು: ಜಲಪಾತಕ್ಕೆ ಈಜಲೆಂದು ನೀರಿಗಿಳಿದ ಪ್ರವಾಸಿಯೊಬ್ಬ ನೇರಿನ ಸೆಳೆತಕ್ಕೆ ಸಿಲುಕಿ ಮುಳಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇಲಾವರ ಜಲಪಾತದಲ್ಲಿ ಸಂಭವಿಸಿತ್ತು. ಕೇರಳ ರಾಜ್ಯದ ಮಟ್ಟನೂರು ನಿವಾಸಿ ರಶೀದ್ (27) ಮೃತ ಯುವಕ. ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಮಟ್ಟನೂರಿನಿಂದ ಕೊಡಗು ಪ್ರವಾಸಕ್ಕೆ ಆಗಮಿಸಿದ್ದರು. ಬೆಳಗ್ಗೆ ಚೇಲಾವರ ಜಲಪಾತಕ್ಕೆ ತೆರಳಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪುಷ್ಪ ಸಿನಿಮಾ ಸ್ಟೈಲಲ್ಲಿ ರಕ್ತಚಂದನ ಸಾಗಿಸುತಿದ್ದ ಗ್ಯಾಂಗ್ ಸೆರೆ

ಈ ಸಂದರ್ಭ ರಶೀದ್ ಈಜಲೆಂದು ನೀರಿಗಿಳಿದಿದ್ದಾನೆ. ಆದರೆ ಈಜು ಬಾರದ ರಶೀದ್ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಲಾಯಿತಾದರೂ ರಶೀದ್​ನನ್ನು ಉಳಿಸಲಾಗಿಲ್ಲ. ಸ್ಥಳೀಯ ಈಜುಪಟುಗಳು ಹಾಗೂ ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದರು. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.