ಬೆಂಗಳೂರು ಜೋಡಿ ಕೊಲೆ ಪ್ರಕರಣ; ಹತ್ಯೆಗೆ ಕಾರಣ ಬಾಯ್ಬಿಟ್ಟ ಆರೋಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ನಿನ್ನೆ ಬೆಂಗಳೂರಿನ ಕುಂಬಾರಪೇಟೆಯ(Kumbarpet) ಹರಿ ಅಂಗಡಿ ಮಳಿಗೆಯಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರ ಹತ್ಯೆ ಮಾಡಿದ್ದ. ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹತ್ಯೆಗೆ ನಿಖರ ಕಾರಣ ಆರೋಪಿ ಬಾಯ್ಬಿಟ್ಟಿದ್ದಾನೆ.

ಬೆಂಗಳೂರು ಜೋಡಿ ಕೊಲೆ ಪ್ರಕರಣ; ಹತ್ಯೆಗೆ ಕಾರಣ ಬಾಯ್ಬಿಟ್ಟ ಆರೋಪಿ
ಬೆಂಗಳೂರು ಜೋಡಿ ಕೊಲೆ ಆರೋಪಿ ಬದ್ರಿ
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 08, 2024 | 2:51 PM

ಬೆಂಗಳೂರು, ಫೆ.08: ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ(ಫೆ.07) ರಾತ್ರಿ 8.30 ರ ಸುಮಾರಿಗೆ ದುಷ್ಕರ್ಮಿಯೊಬ್ಬ ಇಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಬದ್ರಿ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ ಆತನನ್ನು ತಡರಾತ್ರಿವರೆಗೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತನ್ನ ಸಂಸಾರ ಹಾಳಾಗುವುದಕ್ಕೆ ಮೃತ ಸುರೇಶ್ ಕಾರಣವಾಗಿದ್ದ, ಈ ಹಿನ್ನಲೆ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಇನ್ನು ಈ ಪ್ರಕರಣದ ತನಿಖೆ ವೇಳೆ ಎರಡು ಅಂಶಗಳ ಬಗ್ಗೆ ಮಾಹಿತಿ ದೊರೆತಿದೆ.

ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹ ಇತ್ತು

ಹತ್ಯೆಯಾದ ಸುರೇಶ್​ ಹಾಗೂ ಆರೋಪಿ ಬದ್ರಿ ಜೊತೆ ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹ ಇತ್ತು. ಇತ್ತಿಚೇಗೆ ನ್ಯಾಯಾಲಯದಲ್ಲಿ ಕೇಸ್ ಮೃತನ ಪರವಾಗಿ ಆಗಿದ್ದ ಕಾರಣ ಅರೋಪಿ ಕೋಪಗೊಂಡಿದ್ದ. ಆದಾದ ಬಳಿಕ ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ CRPC 107 ಅನ್ವಯ ಬಾಂಡ್ ಬರೆಸಿಕೊಂಡ ಪೊಲೀಸರು, ಇಬ್ಬರಿಗೂ ವಾರ್ನ್ ಮಾಡಿದ್ದರು. ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಜೋಡಿ ಕೊಲೆ; ಚಾಕುವಿನಿಂದ ಇರಿದು ಬರ್ಬರ ಹತ್ಯೆ

ಅರೋಪಿ ಬದ್ರಿಯನ್ನ ಪತ್ನಿ ಬಿಟ್ಟಿದ್ದಳು

ಅರೋಪಿ ಬದ್ರಿ ಪತ್ನಿ ಸುರೇಶ್ ಮಾತು ಕೇಳಿ ನನ್ನನ್ನು ಬಿಟ್ಟಿದ್ದಾಳೆ. ಇದು ಡೈವರ್ಸ್ ಹಂತಕ್ಕೆ ಹೋಗಲು ಸುರೇಶ್​ನೇ ಕಾರಣ ಎನ್ನುವ ವಿಚಾರಕ್ಕೆ ಬದ್ರಿಗೆ ಕೋಪವಿತ್ತು. ಇನ್ನು ಆರೋಪಿ ಪತ್ನಿಯೇ ‘ನೀನು ಸರಿ ಇಲ್ಲ, ನಾನು ನಿನ್ನೊಟ್ಟಿಗೆ ಇರುವುದಿಲ್ಲ ಎಂದು ಪೊಲೀಸರ ಮುಂದೆಯೇ ಹೇಳಿ ಹೋಗಿದ್ದಳು. ಈ ಎಲ್ಲಾ ಕಾರಣಗಳಿಂದ ಬೇಸತ್ತು‌ ಕೊಲೆ‌ ಮಾಡಿದೆ ಎಂದು ಪೊಲೀಸರ ತನಿಖೆ ವೇಳೆ ಆರೋಪಿ  ಬಾಯ್ಬಿಟ್ಟಿದ್ದಾನೆ. ಸದ್ಯ ಪ್ರಾಥಮಿಕ ತನಿಖೆ ವೇಳೆ ಕೊಲೆಯನ್ನು ಒಬ್ಬನೇ ಬಂದು ಮಾಡಿರುವುದು ದೃಢಪಟ್ಟಿದೆ. ಆದ್ರೆ, ಕೊಲೆಗೆ ಬೇರೆ ಯಾರಾದರೂ ಪ್ರೇರಣೆ ನೀಡಿದ್ದಾರಾ ಎಂದು ಪರಿಶೀಲನೆ ಶುರುವಾಗಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Thu, 8 February 24