ಬೆಂಗಳೂರಿನಲ್ಲಿ ಜೋಡಿ ಕೊಲೆ ಪ್ರಕರಣ: ತನಿಖೆ ವೇಳೆ ಎರಡು ಸತ್ಯಾಂಶ ಬೆಳಕಿಗೆ
ಬೆಂಗಳೂರಿನ ಕುಂಬಾರಪೇಟೆಯ ಹರಿ ಅಂಗಡಿ ಮಳಿಗೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹತ್ಯೆಗೆ ಎರಡು ಅಂಶಗಳೇ ಕಾರಣ ಎನ್ನುವ ವಿಚಾರ ತಿಳಿದುಬಂದಿದೆ. ಸದ್ಯ, ಪ್ರಕರಣದಲ್ಲಿ ಒಬ್ಬ ಆರೋಪಿಯ ಸುಳಿವು ಸಿಕ್ಕಿದ್ದು, ಕೃತ್ಯಕ್ಕೆ ಇತರರ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು, ಫೆ.8: ನಗರದ ಕುಂಬಾರಪೇಟೆಯ ಹರಿ ಅಂಗಡಿ ಮಳಿಗೆಯಲ್ಲಿ ನಡೆದ ಡಬಲ್ ಮರ್ಡರ್ (Double Murder) ಪ್ರಕರಣ ಸಂಬಂಧ ತನಿಖೆ ವೇಳೆ ಹತ್ಯೆಗೆ ಎರಡು ಕಾರಣಗಳು ತಿಳಿದುಬಂದಿದೆ. ನ್ಯಾಯಾಲಯದಲ್ಲಿದ್ದ ಕಟ್ಟಡದ ಕೇಸ್ ಎದುರಾಳಿಯ ಪರವಾಗಿ ಆದೇಶ ಹೊರಬಿದ್ದ ಕೋಪ ಹಾಗೂ ಕೊಲೆಯಾಗಿರುವ ವ್ಯಕ್ತಿಯ ಮಾತನ್ನು ಕೇಳಿ ಪತ್ನಿ ತನ್ನನ್ನು ತೊರೆದಿದ್ದಾಳೆ ಎಂದು ಕೋಪಗೊಂಡಿದ್ದ ಆರೋಪಿತನು ಎದುರಾಳಿಯನ್ನು ಕೊಲ್ಲಲು ಹೋಗಿ ಇಬ್ಬರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಯಾದ ಸುರೇಶ್ ಹಾಗೂ ಸಂಬಂಧಿಕನಾಗಿರುವ ಆರೋಪಿತ ಬದ್ರಿಯ ನಡುವೆ ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹವಿತ್ತು. ನ್ಯಾಯಾಲಯದಲ್ಲಿ ಕೇಸ್ ಸಹ ಇತ್ತು. ಕೇಸ್ ಮೃತನ ಪರವಾಗಿ ಆಗಿದ್ದ ಕಾರಣ ಬದ್ರಿ ಕೋಪ ಗೊಂಡಿದ್ದನು. ಆದಾದ ಮೇಲು ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಸಿಆರ್ಪಿಸಿ 107 ಅನ್ವಯ ಬಾಂಡ್ ಬರೆಸಿಕೊಂಡಿದ್ದ ಪೊಲೀಸರು ಇಬ್ಬರಿಗೂ ವಾರ್ನ್ ಮಾಡಿದ್ದರು. ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
ಬದ್ರಿಯನ್ನು ತೊರೆದ ಪತ್ನಿ
ಈ ನಡುವೆ ಅರೋಪಿತ ಬದ್ರಿಯನ್ನು ಪತ್ನಿ ತೊರೆದಿದ್ದಾಳೆ. ಸುರೇಶ್ ಮಾತು ಕೇಳಿಯೇ ಆಕೆ ತನ್ನನ್ನು ಬಿಟ್ಟು ಡೈವರ್ಸ್ ಪಡೆಯುವ ಹಂತಕ್ಕೆ ಹೋಗಲು ಕುಟುಂಬದ ಸುರೇಶ್ ಕಾರಣ ಎಂದು ಬದ್ರಿ ಬಾವಿಸಿದ್ದಾನೆ. ಸಂಸಾರ ಹಾಳು ಮಾಡಿದ್ದ ಹಾಗೂ ಕಟ್ಟಡವನ್ನು ನೀಡಿಲ್ಲಾ ಎಂದು ಕೋಪ ಬದ್ರಿಗಿತ್ತು.
ಇದನ್ನೂ ಓದಿ: ಹಸಿವು ಮತ್ತು ತಾಯಿ ಕಷ್ಟ ನೋಡಲಾಗದೇ ಮಗ ಆತ್ಮಹತ್ಯೆ: ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟ ನಿಜವಾದ ತಾಯಿ
ಇನ್ನೊಂದೆಡೆ, ಪೊಲೀಸರಿಗೆ ಹೇಳಿಕೆ ನೀಡಿದ ಬದ್ರಿ ಪತ್ನಿ, ಈತ ಸರಿ ಇಲ್ಲದ ಕಾರಣ ತಾನು ಒಟ್ಟಿಗೆ ಇರುವುದಿಲ್ಲ ಎಂದಿದ್ದಾಳೆ. ಸದ್ಯ, ಪ್ರಕರಣ ಸಂಬಂಧ ಹಲಸೂರು ಗೇಟ್ ಠಾಣಾ ಪೊಲೀಸರಿಂ ತನಿಖೆ ಮುಂದುವರಿದಿದ್ದು, ಮೇಲ್ನೋಟಕ್ಕೆ ಕೊಲೆಯನ್ನು ಒಬ್ಬನೇ ಮಾಡಿರುವುದು ಕಂಡುಬಂದರೂ ಬೇರೆ ಯಾರಾದರು ಪ್ರೇರಣೆ ನೀಡಿದ್ದಾರೆಯೇ ಎಂಬ ವಿಚಾರವಾಗಿ ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ?
ಬೆಂಗಳೂರಿನ ಕುಂಬಾರಪೇಟೆಯ ಹರಿ ಅಂಗಡಿ ಮಳಿಗೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಸುರೇಶ್ ಮತ್ತು ಮಹೇಂದ್ರ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಹತ್ಯೆಯಾಗಿರುವ ಸುರೇಶ್ ಸಂಬಂಧಿ ಬದ್ರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಬದ್ರಿಯ ಟಾರ್ಗೆಟ್ ಇದ್ದಿದ್ದು ಮೃತ ಸುರೇಶ್ ಮಾತ್ರ. ಆದರೆ, ಬಿಡಿಸಲು ಹೋದ ಮಹೇಂದ್ರನನ್ನು ಕೂಡ ಕೊಲೆ ಮಾಡಿದ್ದನು. ಸುರೇಶ್ ಹಾಗೂ ಮಹೇಂದ್ರ ಇಬ್ಬರು ಸ್ನೇಹಿತರು, ಈ ಹಿನ್ನಲೆ ಸುರೇಶ್ ಭೇಟಿಗೆ ಮಹೇಂದ್ರ ಆಗಮಿಸಿದ್ದ. ಈ ವೇಳೆ ಸುರೇಶ್ ಮೇಲೆ ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಿದ ಹಂತಕ, ಬಿಡಿಸಲು ಹೋದ ಮಹೇಂದ್ರನ ಮೇಲೂ ಹಲ್ಲೆ ಮಾಡಿ ಇಬ್ಬರನ್ನು ಹತ್ಯೆಗೈದಿದ್ದನು. ಸುರೇಶ್ ಅಂಗಡಿ ಒಳಗೆ ಚೇರ್ ಮೇಲೆ ಶವವಾಗಿ ಬಿದ್ದಿದ್ದರೆ, ಇತ್ತ ಮಹೇಂದ್ರ ಅಂಗಡಿ ಹೊರಗೆ ನಿಲ್ಲಿಸಿದ್ದ ಗಾಡಿಯಲ್ಲಿ ಸಾವನ್ನಪ್ಪಿದ್ದನು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ