ಹಸಿವು ಮತ್ತು ತಾಯಿ ಕಷ್ಟ ನೋಡಲಾಗದೇ ಮಗ ಆತ್ಮಹತ್ಯೆ: ಕೇಸ್​​​​ಗೆ ಬಿಗ್ ಟ್ವಿಸ್ಟ್ ಕೊಟ್ಟ ನಿಜವಾದ ತಾಯಿ

ಹಸಿವು ಹಾಗೂ ತಾಯಿಯ ಕಷ್ಟವನ್ನು ನೋಡಲಾಗದೆ ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಡಂಬರಮತ್ತುರಿನಲ್ಲಿ ಟಿವಿ 9 ಗೆ ಹೇಳಿಕೆ ನೀಡಿದ ನಿಜವಾದ ತಾಯಿ ನಿಲಮ್ಮ, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಹಸಿವು ಮತ್ತು ತಾಯಿ ಕಷ್ಟ ನೋಡಲಾಗದೇ ಮಗ ಆತ್ಮಹತ್ಯೆ: ಕೇಸ್​​​​ಗೆ ಬಿಗ್ ಟ್ವಿಸ್ಟ್ ಕೊಟ್ಟ ನಿಜವಾದ ತಾಯಿ
ತಾಯಿ ನಿಲಮ್ಮ, ಮೃತ ಮಗ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 07, 2024 | 9:56 PM

ಹಾವೇರಿ, ಫೆಬ್ರವರಿ 7: ಬೆಳಗಾವಿ (Belagavi) ಜಿಲ್ಲೆ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದ ಹಸಿವು ಮತ್ತು ತಾಯಿ (Mother) ಕಷ್ಟ ನೋಡಲಾರದೆ ಮಗ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಡಂಬರಮತ್ತುರಿನಲ್ಲಿ ಟಿವಿ 9 ಜೊತೆ ಮಾತನಾಡಿದ ತಾಯಿ, ಸುಳ್ಳು ಸುದ್ದಿ ಎಂದಿದ್ದಾರೆ. ತಾಯಿ ನಿಲಮ್ಮ ಮಗನ ನೆನದು ಕಣ್ಣೀರು ಹಾಕಿದ್ದಾರೆ. ಅನೈತಿಕ ಸಂಬಂಧವೇ ಮಗನ ಸಾವಿಗೆ ಕಾರಣ. ನನ್ನ ಮಗನಿಗೆ ತಾಯಿ ವಯಸ್ಸಿನ ಹೆಂಗಸಿನ ಜೊತೆ ಅನೈತಿಕ ಸಂಬಂಧ ಇತ್ತು. ಅವಳಿಗೆ ಮದುವೆಯಾಗಿ ಮಕ್ಕಳ್ಳಿದ್ದರೂ ನನ್ನ ಮಗನನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಳು ಎಂದು ತಿಳಿಸಿದ್ದಾರೆ.

ಪದೇ ಪದೇ ನಮ್ಮ ಊರಿಗೆ ಬಂದು ತೊಂದರೆ ಕೊಡುತ್ತಿದ್ದಳು. ಹೀಗಾಗಿ ನಾವು ನೀವು ಎಲ್ಲಿಯಾದರು ಇರಿ ಚೆನ್ನಾಗಿ ಇರುವಂತೆ ಹೇಳಿದ್ದೆವು. ನಿತ್ಯ ಆ ಹೆಂಗಸು ಮದ್ಯಪಾನ ಮಾಡುತ್ತಿದ್ದಳು. ಅವಳಿಗೆ ಮದ್ಯ ತಂದು ಕೊಡದಿದ್ದರೆ ಗಲಾಟೆ ಮಾಡುತ್ತಿದ್ದಳು. ಅವಳಿಗೆ ತಕ್ಕ ಶಿಕ್ಷಿಯಾಗಬೇಕು ಎಂದು ನೊಂದ ತಾಯಿ ಟಿವಿ9 ಗೆ ಹೇಳಿದ್ದಾರೆ.

ತಾಯಿಯ ಹಸಿವಿನ ಪರದಾಟ ನೋಡಲಾರದೇ ಆತ್ಮಹತ್ಯೆ ಎಂಬುದು ಸುಳ್ಳು: ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್

ಬೆಳಗಾವಿ ಜಿಲ್ಲೆಯ ನಂದಗಡ ಠಾಣೆ ಪೊಲೀಸರಿಂದ ಸತ್ಯಾಂಶ ಬಯಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ತಾಯಿಯ ಹಸಿವಿನ ಪರದಾಟ ನೋಡಲಾರದೇ ಆತ್ಮಹತ್ಯೆ ಎಂಬುದು ಸುಳ್ಳು. ಆತ್ಮಹತ್ಯೆ ಮಾಡಿಕೊಂಡ ಬಸವರಾಜ್ ಮತ್ತು ಮಹಿಳೆ ತಾಯಿ, ಮಗ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Belagavi: ತಾಯಿಯ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆ ಎಂಬುವುದು ಸುಳ್ಳು: ಪೊಲೀಸರಿಂದ ಸತ್ಯಾಂಶ ಬಯಲು

ಮೃತ ಬಸವರಾಜ್ ಮತ್ತು ಶಾಂತವ್ವ 14 ವರ್ಷಗಳಿಂದ ಜೊತೆಗಿದ್ದರು. ಕೂಲಿಗಾಗಿ ಗೋವಾ, ಬೆಂಗಳೂರು ಸೇರಿ ಹಲವೆಡೆ ಜೊತೆಯಾಗಿ ಓಡಾಟ ಮಾಡಿದ್ದಾರೆ. ಗೋವಾದಿಂದ ಹಿಂದಿರುಗುವಾಗ ಬಸವರಾಜ್, ಮಹಿಳೆ ಪಾನಮತ್ತರಾಗಿದ್ದರು. ವಾಂತಿ ಮಾಡಿದ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ರೈಲಿನಿಂದ ಕೆಳಗಿಳಿಸಿದ್ದರು.  ಶಾಂತವ್ವಳನ್ನು ಅಳ್ನಾವರ ರೈಲು ನಿಲ್ದಾಣದಲ್ಲಿ ಬಿಟ್ಟ ಬಸವರಾಜ್​ ಲಿಂಗನಮಠ ಗ್ರಾಮದ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ: ಬೆಳಗಾವಿ: ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ

ಬಸವರಾಜ್​ನ ಆತ್ಮಹತ್ಯೆಗೆ ಈವರೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಮೃತ ಬಸವರಾಜ್​ ಪೋಷಕರನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವ ಮೊದಲೇ ತಾಯಿ, ಮಗನೆಂದು ನಿರ್ಧಾರ ಹಿನ್ನೆಲೆ ಖಾನಾಪುರ ಮೂಲದ ಎನ್‌ಜಿಒಗೆ ನಿನ್ನೆ ನೋಟಿಸ್ ಕೊಡಲಾಗಿದೆ‌. ಅನುಮಾನಾಸ್ಪದ ವಿಚಾರದಲ್ಲಿ ತಾವೇ ತೀರ್ಮಾನಕ್ಕೆ ಬರುವುದು ತಪ್ಪು. ಬಸವರಾಜ್​ ಆತ್ಮಹತ್ಯೆ ವಿಚಾರದಲ್ಲಿ ಮಹಿಳೆ ಪಾತ್ರದ ಬಗ್ಗೆಯೂ ತನಿಖೆ‌‌ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 pm, Wed, 7 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ