AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರಲ್ಲಿ​ ಕೆಸರು ನೀರು: ನಮಗೆ ಕಾವೇರಿ ನೀರು ಕೊಡಿ ಎಂದ ನಿವಾಸಿಗಳು

ಬೆಂಗಳೂರಿನ ಕನಕಪುರ ತಲಘಟ್ಟಪುರದ ನ್ಯಾಯಾಂಗ ಬಡಾವಣೆಯ ಶೋಭಾ ಅರೆನಾ ಅಪಾರ್ಟ್‌ಮೆಂಟ್​ನಲ್ಲಿ ಕಲುಷಿತ ಕೆಸರು ಮಿಶ್ರಿತ ನೀರು ಬಂರುತ್ತಿದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಧನಂಜಯ್ ಪದ್ಮನಾಭಾಚಾರ ಎಂಬ ನಿವಾಸಿಯೊಬ್ಬರು ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ಗೆ ಟ್ಯಾಗ್​ ಮಾಡಿದ್ದಾರೆ. ನಮಗೆ ಕಾವೇರಿ ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರಲ್ಲಿ​ ಕೆಸರು ನೀರು: ನಮಗೆ ಕಾವೇರಿ ನೀರು ಕೊಡಿ ಎಂದ ನಿವಾಸಿಗಳು
ಕೆಸರು ನೀರು
Shivaraj
| Edited By: |

Updated on: Feb 08, 2024 | 5:02 PM

Share

ಬೆಂಗಳೂರು, ಫೆಬ್ರವರಿ 8: ನಗರದ ತಲಘಟ್ಟಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಅಡುಗೆ ಕೋಣೆಯಲ್ಲಿ ಕುಡಿಯುವ ನೀರಿನ (water) ನಲ್ಲಿಯಲ್ಲಿ ಕೆಸರು ನೀರು ಬಂದಿರುವಂತಹ ಘಟನೆ ನಡೆದಿದ್ದು, ಈ ಕುರಿತು ನಿವಾಸಿಗಳು ಟ್ವಿಟರ್​​ನಲ್ಲಿ ವಿಡಿಯೋ, ಫೋಟೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ ವಿಡಿಯೋ ಶೇರ್ ಮಾಡಲಾಗಿದೆ. ಕನಕಪುರ ತಲಘಟ್ಟಪುರದ ನ್ಯಾಯಾಂಗ ಬಡಾವಣೆಯ ಶೋಭಾ ಅರೆನಾ ಅಪಾರ್ಟ್‌ಮೆಂಟ್​ನಲ್ಲಿ ಕಲುಷಿತ ಕೆಸರು ಮಿಶ್ರಿತ ನೀರು ಬಂದಿದೆ. ಅಪಾರ್ಮೆಂಟ್​​ನ‌ ಇತರೆ ನಿವಾಸಿಗಳ ಮನೆಯಲ್ಲಿಯೂ ಕೆಸರು ನೀರು ಬಂದಿದೆ. ಹೀಗಾಗಿ ನಿವಾಸಿಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಪೊಲೀಸರು ಸೇರಿ ಹಲವರಿಗೆ ಟ್ಯಾಗ್​ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ದಯವಿಟ್ಟು ನಮಗೆ ಕಾವೇರಿ ನೀರು ಕೊಡಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ನಿನ್ನೆ ಶೇರ್ ಮಾಡಿರುವ ವಿಡಿಯೋವನ್ನು ಸುಮಾರು 2 ಲಕ್ಷದ 51 ಸಾವಿರ ಜನರು ವಿಕ್ಷಣೆ ಮಾಡಿದ್ದಾರೆ.

ನಲ್ಲಿಯಲ್ಲಿ ಕೆಸರು ನೀರು

‘ಶೋಭಾ ಅರೆನಾ ಅಪಾರ್ಟ್ಮೆಂಟ್​​ನಲ್ಲಿ ಕುಡಿಯಲು ನಾವು ಪಡೆಯುತ್ತಿರುವ ನೀರಿನ ಗುಣಮಟ್ಟವನ್ನು ದಯವಿಟ್ಟು ನೋಡಿ. ದಯವಿಟ್ಟು ನ್ಯಾಯಾಂಗ ಬಡಾವಣೆ, ತಲಘಟ್ಟಪುರ, ಕನಕಪುರ ಮುಖ್ಯರಸ್ತೆಗಳಲ್ಲಿ ನಮಗೆ ಕಾವೇರಿ ನೀರು ಕೊಡಿ’ ಎಂದು ಅಪಾರ್ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ ಟ್ವೀಟ್ ಮಾಡಿದ್ದಾರೆ.

ಧನಂಜಯ್ ಪದ್ಮನಾಭಾಚಾರ ಟ್ವೀಟ್

ಬೇಸಿಗೆಗೂ ಮುನ್ನ ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಕುಸಿಯುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

24 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತ

ವಿಜಯಪುರ: ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಧಿಕಾರಿಗಳ ಪ್ರಕಾರ ನಗರದ 35 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ನಿತ್ಯ 24 ಗಂಟೆ ನೀರು ಪೂರೈಕೆ ಮಾಡಲಾಗಿತ್ತು. ಅದಕ್ಕಾಗಿ ಶುಲ್ಕವನ್ನೂ ಸಹ ಪಡೆಯಲಾಗಿತ್ತು. ಆದರೆ ನಗರದಲ್ಲಿ ಹೆಸರಿಗಷ್ಟೇ 24 ಗಂಟೆ ನೀರು ಪೂರೈಕೆ ಯೋಜನೆಯಾಗಿದೆ. ಇಷ್ಟೇ ಅಲ್ಲಾ ಇನ್ನುಳಿದ 23 ವಾರ್ಡ್ ಗಳಲ್ಲಿ ನಿತ್ಯ 2 ಗಂಟೆ ನೀರು ಬಿಡಲಾಗುತ್ತಿತ್ತು.

ಇದನ್ನೂ ಓದಿ: ಅಂತರ್ಜಲ ಮಟ್ಟ ಕುಸಿತ: ಬೆಂಗಳೂರಿನ ಈ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ

ಇದೀಗ ಅದಕ್ಕೂ ಸಹ ಕೊಕ್ಕೆ ಬಿದ್ದಿದೆ. ನಿತ್ಯ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ವಾರ್ಡ್ ಗಳಲ್ಲಿ ಹಾಗೂ ನಿತ್ಯ 2 ಗಂಟೆಗಳ ಕಾಲ ನೀರು ಪೂರೈಕೆ ಮಾಡುವ ವಾರ್ಡ್ ಗಳಲ್ಲಿ ಇದೀಗ ಬರೋಬ್ಬರಿ 10 ರಿಂದ 15 ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ. ಇದು ನಗರ ವಾಸಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!