ಬೆಂಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (MP Kumaraswamy) ಗೆ ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣದಲ್ಲಿ (cheque bounce case) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಶಿಕ್ಷೆ ವಿಧಿಸಲಾಗಿದೆ. ಒಟ್ಟು 8 ಕೇಸ್ಗಳಲ್ಲಿ 1.38 ಕೋಟಿ ಹಣ ಪಾವತಿಸಬೇಕು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ನಗರದ ದಾಸರಹಳ್ಳಿ ಕ್ಷೇತ್ರದ ಕಾಮಗಾರಿಯಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಮಾಜಿ ಶಾಸಕ ಎಸ್. ಮುನಿರಾಜ್ ನಿನ್ನೆ ಆರೋಪಿಸಿದ್ದರು. ಸದ್ಯ ಈ ವಿಚಾರವಾಗಿ ತಮ್ಮ ವಿರುದ್ಧದ ಆರೋಪಕ್ಕೆ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ R.ಮಂಜುನಾಥ್ (R Manjunath) ಸ್ಪಷ್ಟನೆ ನೀಡಿದ್ದಾರೆ. ಇಂದು (ಫೆ. 12) ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ದಾಸರಹಳ್ಳಿ ಕ್ಷೇತ್ರದಲ್ಲಿ ಅಷ್ಟು ದೊಡ್ಡ ಮೊತ್ತದ ಕಾಮಗಾರಿಗಳೇ ನಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕ್ಷೇತ್ರದ ಕಾಮಗಾರಿ ಸಂಬಂಧ ಬಾಕಿ ಹಣವನ್ನೇ ಸರ್ಕಾರ ರಿಲೀಸ್ ಮಾಡ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: HDK ಸಿಎಂ ಆಗಿದ್ದಾಗ ದಾಸರಹಳ್ಳಿಗೆ 30 ಕೋಟಿ ರೂ. ಅನುದಾನ, ಶಾಸಕರು ಪರ್ಸೆಂಟೇಜ್ ತೆಗೆದುಕೊಂಡು ಬಿಲ್ ಮಾಡಿರುವ ಆರೋಪ
ದಾಸರಹಳ್ಳಿ ಕ್ಷೇತ್ರಕ್ಕೆ ಇನ್ನೂ 90 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಕ್ಷೇತ್ರಕ್ಕೆ ಬಾಕಿ ಅನುದಾನ ಬಿಡುಗಡೆ ಆಗದಂತೆ ಸಚಿವ ಅಶೋಕ್ ತಡೆದಿದ್ದಾರೆ. ಇದಕ್ಕೆ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕರ ಕೈವಾಡ ಇದೆ ಎಂದು ಮಾಜಿ ಶಾಸಕ ಮುನಿರಾಜು ಹೆಸರು ಹೇಳದೆ ಪರೋಕ್ಷವಾಗಿ ಆರೋಪಿಸಿದರು.
ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Mon, 13 February 23