ಮೊಹರಂ ಹಬ್ಬ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ಹೀಗಿದೆ

ಶನಿವಾರ ಮೊಹರಂ ಹಬ್ಬ ಆಚರಣೆ ಹಿನ್ನಲೆ ಬೆಂಗಳೂರು ನಗರದಲ್ಲಿ ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. 

ಮೊಹರಂ ಹಬ್ಬ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ಹೀಗಿದೆ
ಪ್ರಾತಿನಿಧಿಕ ಚಿತ್ರ
Edited By:

Updated on: Jul 28, 2023 | 10:39 PM

ಬೆಂಗಳೂರು ಜುಲೈ 28: ಶನಿವಾರ ಮೊಹರಂ ಹಬ್ಬ (Muharram 2023) ಆಚರಣೆ ಹಿನ್ನಲೆ ನಗರದಲ್ಲಿ ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಬ್ರಿಗೇಡ್ ರಸ್ತೆಯ ಮೂಲಕ ಹೊಸೂರು ರಸ್ತೆಯ ಕಡೆಗೆ ವೆಲ್ಲಾರಾ ಜಂಕ್ಷನ್ ಮುಖಾಂತರ ತೆರಳುವ ವಾಹನ ಸವಾರರು ರಿಚ್ಮಂಡ್ ರಸ್ತೆಯ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ಸರ್ಕಲ್​ ಲಾಂಗ್ ಫೋರ್ಡ್ ರಸ್ತೆ, ಸಿಎಂಪಿ ಜಂಕ್ಷನ್‌ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಹೊಸೂರು ರಸ್ತೆಯ ಆಡುಗೋಡಿ ಕಡೆಯಿಂದ ಬರುವ ಸವಾರರು ಸಿಮೆಂಟ್ರ ಕ್ರಾಸ್, ಬರ್ಲ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ಸರ್ಕಲ್, ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಸಂಚರಿಸುವುದು.

ಇದನ್ನೂ ಓದಿ:  Bangalore Chennai Expressway: ಶೀಘ್ರ ಸಿದ್ಧವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ; ದೂರ, ಸಮಯ, ಇತರ ಮಾಹಿತಿ ಇಲ್ಲಿದೆ

ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ಧಯ್ಯ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:58 pm, Fri, 28 July 23