ಬೆಂಗಳೂರು: ಬೆಂಗಳೂರಿನ ಯಾರಬ್ ನಗರದಲ್ಲಿ ಮಹಿಳೆಯ ಬರ್ಬರ ಹತ್ಯೆಯಾಗಿದೆ. ಅಫ್ರೀನ್ ಖಾನಂ(28) ಹತ್ಯೆಗೀಡಾದ ಮಹಿಳೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊಲೆ ಮಾಡಿ ಮನೆಗೆ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದಾನೆ. ಪತಿ ಬಂದು ಮನೆಯ ಬೀಗ ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಿತರೇ ಅಫ್ರೀನ್ ಖಾನಂ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ಸಂಜೆ ಚೂಪಾದ ಕಂಬಿಯಿಂದ ಅಫ್ರೀನ್ ಖಾನಂ ಹತ್ಯೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ರಾತ್ರಿ ಗಂಡ ಮನೆಗೆ ಬಂದು ಬೀಗ ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಿತ ವ್ಯಕ್ತಿಯಿಂದಲೇ ಕೊಲೆಯಾಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಅಫ್ರೀನ್ ಖಾನಂಗೆ ಇಬ್ಬರು ಮಕ್ಕಳಿದ್ದರು. ಪತಿ ಟಿಂಬರ್ ಯಾರ್ಡ್ ನಲ್ಲಿ ಕೆಲಸ ಮಾಡ್ತಿದ್ದು, ನಿನ್ನೆ ಮನೆಯಲ್ಲಿರಲಿಲ್ಲ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮೃತ ಆಫ್ರೀನ್ ಪತಿ ಲಾಲುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಪತಿಯೇ ಹತ್ಯೆ ಮಾಡಿದ್ದಾನೆ ಅನ್ನೋ ಅನುಮಾನ ಹುಟ್ಟಿಕೊಂಡಿದ್ದು ಪತಿಯನ್ನು ಅರೆಸ್ಟ್ ಮಾಡಲಾಗಿದೆ. ಮೊದಲಿಗೆ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಬಳಿಕ ಯಾರಿಗೂ ಅನುಮಾನ ಬಾರದೆ ಇರಲಿ ಅಂತ ಹಾಸಿಗೆಗೆ ಬೆಂಕಿಯಿಟ್ಚು ಎಸ್ಕೇಪ್ ಆಗಿದ್ದಾನೆ. ಬೆಂಕಿ ಇಟ್ಟ ಪರಿಣಾಮ ಮನೆಯ ತುಂಬೆಲ್ಲಾ ಹೊಗೆ ದಟ್ಟವಾಗಿ ಆವರಿಸಿಕೊಂಡಿದ್ದು ಅಕ್ಕಪಕ್ಕದ ನಿವಾಸಿಗಳು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳೀಯರು ಮನೆಯ ಬಾಗಿಲು ಒಡೆಯುವಾಗ ಸೆಂಟರ್ ಡೋರ್ ಲಾಕ್ ಆಗಿತ್ತು. ಸೆಂಟರ್ ಡೋರ್ ಲಾಕ್ ಆಗಿರೋದ್ರಿಂದ ಮನೆಯ ಒಳಗಿಂದ ಯಾರಾದ್ರು ಲಾಕ್ ಮಾಡಬೇಕು. ಅಥವಾ ಮನೆಯ ಕೀ ನಲ್ಲಿ ಹೊರಗಡೆಯಿಂದ ಯಾರಾದ್ರು ಲಾಕ್ ಮಾಡಬೇಕು. ಮನೆಯೊಳಗೆ ಮಹಿಳೆ ಕೊಲೆಯಾಗಿರೋದರಿಂದ ಆಕೆಯೇ ಡೋರ್ ಲಾಕ್ ಮಾಡಿಕೊಂಡಿರೋದು ಅಸಾಧ್ಯ. ಹೀಗಾಗಿ ಮನೆಯ ಕೀ ಯಿಂದಲ್ಲೇ ಹೊರಗಡೆಯಿಂದ ಲಾಕ್ ಮಾಡಿರೋದು ಕನ್ಫರ್ಮ್ ಆಗಿದೆ. ಮನೆಯ ಮಾಲೀಕ ಮೃತ ಮಹಿಳೆ ಹಾಗೂ ಆಕೆಯ ಪತಿಗೆ ಕೊಟ್ಟಿದ್ದು ಒಂದೇ ಕೀ. ಹೀಗಾಗಿ ಪತಿಯ ಮೇಲೆ ಅನುಮಾನ ಬಂದಿದ್ದು ಆತನನ್ನು ಅರೆಸ್ಟ್ ಮಾಡಿ ತನಿಖೆ ನಡೆಸಲಾಗುತ್ತಿದೆ.
ಪಾರಿವಾಳ ಹಾರಿಬಿಟ್ಟು ಕಳ್ಳತನ ಮಾಡುತ್ತಿದ್ದವರು ಅರೆಸ್ಟ್
ಪಾರಿವಾಳ ಹಾರಿಬಿಟ್ಟು ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರಿನ ಚನ್ನಮ್ಮನಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖರ್ತನಾಕ್ ಕಳ್ಳ ಬ್ಯಾಡ್ ನಾಗನ ಬಂಧಿತ ಆರೋಪಿ. ಕಳವಿಗೂ ಮುನ್ನ ಐಷಾರಾಮಿ ಡೂಪ್ಲೆಕ್ಸ್ ಮನೆ ಹುಡುಕ್ತಿದ್ದ ಆರೋಪಿ ನಂತರ ಮನೆ ಮೇಲೆ ಪಾರಿವಾಳ ಹಾರಿಸ್ತಿದ್ದ. ಮನೆ ಮೇಲೆ ಪಾರಿವಾಳ ಕೂತಿದೆ ಎಂದು ಮನೆಗೆ ಎಂಟ್ರಿಕೊಡ್ತಿದ್ದ. ಮನೆಯೊಳಗಿಂದ ಬಾಲ್ಕನಿ ಟೆರೇಸ್ಗೆ ಬರುವಷ್ಟರಲ್ಲಿ ಮನೆಯನ್ನೆಲ್ಲ ಕಣ್ಣಲ್ಲೇ ಸ್ಕ್ಯಾನ್ ಮಾಡಿಕೊಳ್ಳುತ್ತಿದ್ದ. ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾತ್ರಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ.3 ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು ಆರೋಪಿಯಿಂದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Vijayapura Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ; ಮನೆಯಿಂದ ಹೊರ ಓಡಿ ಬಂದ ಜನತೆ
Published On - 11:33 am, Wed, 20 October 21