ಆಮ್ ಆದ್ಮಿ ಪಕ್ಷದಿಂದ ರಸ್ತೆ ಗುಂಡಿಗಳ ಹಬ್ಬ ಅಭಿಯಾನ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಸಿವಿ ರಾಮನ್ ನಗರದ ಗಲ್ಲಿ ಗಲ್ಲಿ ರಸ್ತೆಯಲ್ಲೂ ಗುಂಡಿಗಳಿಗೆ ಹೂ, ಕಾಯಿ ಒಡೆದು, ದೀಪ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಆಮ್ ಆದ್ಮಿ ಪಕ್ಷದಿಂದ ರಸ್ತೆ ಗುಂಡಿಗಳ ಹಬ್ಬ ಅಭಿಯಾನ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ (Aam Aadmi Party) ರಸ್ತೆ ಗುಂಡಿಗಳ ಹಬ್ಬ ಅಭಿಯಾನ ನಡೆಯುತ್ತಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಯುತ್ತಿದೆ. ರಸ್ತೆ ಗುಂಡಿಗೆ ಹೂವು, ಕಾಯಿ ಒಡೆದು, ದೀಪ ಹಚ್ಚಿ ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಧರಣಿ ನಿರತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಜೀವ ತೆಗೆಯುವಷ್ಟು ರಸ್ತೆ ಗುಂಡಿಗಳು ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಸಿವಿ ರಾಮನ್ ನಗರದ ಗಲ್ಲಿ ಗಲ್ಲಿ ರಸ್ತೆಯಲ್ಲೂ ಗುಂಡಿಗಳಿಗೆ ಹೂ, ಕಾಯಿ ಒಡೆದು, ದೀಪ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ವಾಟಾಳ್ ನಾಗಾರಾಜ್ರಿಂದ ಜಾಗಟೆ ಪ್ರತಿಭಟನೆ
ಮೈಸೂರು: ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಒತ್ತಾಯಿಸಿ ವಾಟಾಳ್ ನಾಗಾರಾಜ್ ಜಾಗಟೆ ಪ್ರತಿಭಟನೆ ನಡೆಸಿದ್ದಾರೆ. ಜಾಗಟೆ ಬಾರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

Kidney Transplant: ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ!

ಜೀವಿತಾವಧಿಯಲ್ಲಿ ಕೂಡಿಟ್ಟ 65 ಸಾವಿರ ರೂ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿಗೆ ದೃಷ್ಟಿ ವಿಕಲಚೇತನ ಮನವಿ

Click on your DTH Provider to Add TV9 Kannada