ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ದಿಢೀರ್ ದೆಹಲಿಯತ್ತ ಮುರುಗೇಶ್ ನಿರಾಣಿ ಪ್ರಯಾಣ ಬೆಳೆಸಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರವಾಸ ರದ್ದುಗೊಳಿಸಿ ದೆಹಲಿಗೆ ತೆರಳಿದ್ದಾರೆ. ನಿನ್ನೆ ಚಿತ್ರದುರ್ಗ ಜಿಲ್ಲಾ ಕಾರ್ಯಕ್ರಮದಲ್ಲಿದ್ದಾಗ ದೆಹಲಿಗೆ ಆಗಮಿಸುವಂತೆ ಸಚಿವ ನಿರಾಣಿಗೆ ವರಿಷ್ಠರ ಕರೆ ಬಂದಿದೆ.
ಬಿಜೆಪಿ ವರಷ್ಠರಿಂದ ಬುಲಾವ್ ಹಿನ್ನೆಲೆಯಲ್ಲಿ ದಿಢೀರ್ ದೆಹಲಿಗೆ ದೌಡು. ಇಂದು ಬೆಳಗ್ಗೆ 11 ಗಂಟೆಗೆ ಮುರುಗೇಶ್ ನಿರಾಣಿ ವಿಮಾನ ಹತ್ತಲಿದ್ದಾರೆ. ವರಿಷ್ಠರ ಭೇಟಿ ಬಳಿಕ ಇಂದು ರಾತ್ರಿಯೇ ವಾಪಸ್ ಆಗುವ ಸಾಧ್ಯತೆ ಇದೆ.