ಬೆಂಗಳೂರು: ಮದನ್ ಹತ್ಯೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಮಹೇಶ್, ನವೀನ್ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಬೆಂಗಳೂರಿನ ಜಯನಗರ ಪಿಐ ಸುದರ್ಶನ್, ಎಸಿಪಿ ಶ್ರೀನಿವಾಸ್‌ರಿಂದ ಆರೋಪಿಗಳ ಕಾಲಿಗೆ ತಲಘಟ್ಟಪುರ ಬಳಿಯ ತುರಹಳ್ಳಿ ಫಾರೆಸ್ಟ್‌ನಲ್ಲಿ ಗುಂಡಿನ ದಾಳಿ ನಡೆದಿದೆ.
ನಿನ್ನೆ ಕೋರ್ಟ್ ಬಳಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿಗಳಾದ ಮಹೇಶ್, ನವೀನ್ PSI ಚಂದನ್, ASI ಲಕ್ಷ್ಮಣ್ ಆಚಾರ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದರು. ಶರಣಾಗುವಂತೆ ಸೂಚಿಸಿದರೂ ಕೇಳದೆ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿದೆ. PSI ಚಂದನ್, ASI ಲಕ್ಷ್ಮಣ್ ಆಚಾರ್ ಕೈಗೆ ಗಾಯಗಳಾಗಿವೆ. ಹಾಗೂ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿನ್ನೆಲೆ ಸಿದ್ದಾಪುರ ಕಿಂಗ್ ಪಟ್ಟಕ್ಕಾಗಿ ಮದನ್ ಕೊಲೆ ಮಾಡಲಾಗಿತ್ತು. ಹತ್ಯೆಯಾಗಿರೊ ಶಾಂತಿನಗರ ಲಿಂಗನ ಶಿಷ್ಯನಾಗಿದ್ದ ಮಹೇಶ. ಬದುಕಿದ್ದಾಗಲೇ ಮಹೇಶ್@ಸಿದ್ದಾಪುರನ ಕಿಂಗ್ ಮಾಡ್ತಿನಿ ಎಂದು ಲಿಂಗ ಹೇಳುತ್ತಿದ್ದ. ಇದೇ ಕಾರಣಕ್ಕೆ 2020 ರಲ್ಲಿ ಲಿಂಗನನ್ನು ಸಿದ್ದಾಪುರ ನಾಗ &ಟೀಂ ಕೊಲೆ ಮಾಡಿದ್ದರು. ಸದ್ಯ ಸಿದ್ದಾಪುರ ನಾಗ ಜೈಲಿನಲ್ಲಿದ್ದಾನೆ. ಇದೇ ಕೊಲೆ ರಿವೆಂಜ್ ಗಾಗಿ ನಾಗನಿಗೆ ಸ್ಪಾಟ್ ಫಿಕ್ಸ್ ಮಾಡಲು ಮಹೇಶ್ & ಟೀಂ ಸ್ಕೆಚ್ ರೆಡಿ ಮಾಡಿದ್ದರು.
ಈ ವಿಷಯ ಲೀಕ್ ಆಗಿ, ಮಹೇಶ್ ಹತ್ಯೆಗೆ ನಾಗ ಜೈಲಲ್ಲಿದ್ದುಕೊಂಡೇ ಹುಡುಗರನ್ನು ರೆಡಿ ಮಾಡಿದ್ದ. ಹೀಗಾಗಿ ಜೈಲು ಸೇರೋದು ಸೇಫ್ ಅಂತ ಡಿಸೈಡ್ ಮಾಡಿದ್ದರು. ಜೈಲು ಸೇರಲು ಕೊಲೆ ಮಾಡಿಯೇ ಹೋಗ್ಬೇಕು ಅಂತ ನಾಗನಿಗೆ ಫೈನಾನ್ಸ್ ಮಾಡ್ತಿದ್ದ ಮೃತ ಮದನ್ಗೆ ಮುಹೂರ್ತ ಫಿಕ್ಸ್ ಮಾಡಿದ್ದ. ಬಳಿಕ ಮದನ್ ಕೊಲೆಗೆ ಲಿಂಗ ಶಿಷ್ಯಂದಿರಾದ ಎಸ್.ಆರ್ ನಗರ ಗಿರಿ, ಪ್ರಕಾಶ್ ಸಾಥ್ ನೀಡಿದ್ದರು. ಸದ್ಯ ಎಸ್ಕೇಪ್ ಆಗಿರೊ 3 ಜನ ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ. ಮಹೇಶ್ ಈ ಹಿಂದೆ ಕೂಡ ಹಲವು ಕೇಸ್ನಲ್ಲಿ ಜೈಲು ಸೇರಿದ್ದ.
ಟಿ.ದಾಸರಹಳ್ಳಿ ಫ್ಲೈಓವರ್‌ನಲ್ಲಿ ಅಪಘಾತ ಬೆಂಗಳೂರಿನ ಟಿ.ದಾಸರಹಳ್ಳಿ ಫ್ಲೈಓವರ್‌ನಲ್ಲಿ ಎರಡು ಲಾರಿ, ಎರಡು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಫ್ಲೈಓವರ್‌ನಲ್ಲಿ ನಿಂತಿದ್ದ ಮಳೆ ನೀರಿನಿಂದ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪಘಾತದಿಂದ ಕಿಲೋಮೀಟರ್‌ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಫ್ಲೈಓವರ್ ಮೇಲೆ ನಿಂತಿರುವ ನೀರು ಹೊರಹಾಕಲು ಯತ್ನ ನಡೆಯುತ್ತಿದೆ. ಫ್ಲೈಓವರ್‌ನ್ನು ಸರಿಯಾಗಿ ನಿರ್ವಹಿಸದ 8ನೇ ಮೈಲಿಯ ABR ಟೋಲ್ ಕಂಪನಿಯ ನಿರ್ಲಕ್ಷ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಸವಾರರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: 2 ದಿನಗಳ ಕಾರ್ಯಾಚರಣೆ ಬಳಿಕ 3 ಆನೆಗಳನ್ನು ಕಾಡಿಗೆ ಕಳಿಸಿದ ಮೈಸೂರು ಅರಣ್ಯ ಸಿಬ್ಬಂದಿ