AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತವಾದ ತಕ್ಷಣ ತಂದೆ ಲಕ್ಷ್ಮಣ ಸವದಿಯನ್ನ ಸಂಪರ್ಕಿಸಿದ ಪುತ್ರ; ತಕ್ಷಣ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿದ ಸಚಿವ ಸವದಿ

ಚಿದಾನಂದ ಸವದಿ ಕೊಪ್ಪಳ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಕಳೆದ ಮೂರು ದಿನ‌ ಜಿಲ್ಲೆಯ ವಿವಿಧ ಕಡೆ ಪ್ರವಾಸ ಮಾಡಿದ್ದರು.

ಅಪಘಾತವಾದ ತಕ್ಷಣ ತಂದೆ ಲಕ್ಷ್ಮಣ ಸವದಿಯನ್ನ ಸಂಪರ್ಕಿಸಿದ ಪುತ್ರ; ತಕ್ಷಣ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿದ ಸಚಿವ ಸವದಿ
ಚಿದಾನಂದ ಸವದಿ
TV9 Web
| Edited By: |

Updated on:Jul 06, 2021 | 10:21 AM

Share

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲಸಂಗಮ ಕ್ರಾಸ್ ಬಳಿ ರಾ.ಹೆ.50ರಲ್ಲಿ ನಡೆದಿತ್ತು. ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಕಾರು ಅಪಘಾತದ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ರಾತ್ರಿ 10 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆ ಅಥಣಿಯ ಮನೆಗೆ ವಾಪಸ್ ಆಗಿದ್ದರಂತೆ. ಅಪಘಾತದ ಬಳಿಕ ತಂದೆ ಲಕ್ಷ್ಮಣ ಸವದಿ ಜೊತೆ ಸಂಪರ್ಕ ನಿರಂತರ ಸಂಪರ್ಕದಲ್ಲಿದ್ದರು. ಅಪಘಾತದ ಸುದ್ದಿ ಕೇಳಿ ಮಗನಿಗೆ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿ ಮಾತಾಡಿ ನಿನ್ನೆ ಸಂಜೆ ಅಥಣಿಯಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಚಿದಾನಂದ ಸವದಿ ಕೊಪ್ಪಳ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಕಳೆದ ಮೂರು ದಿನ‌ ಜಿಲ್ಲೆಯ ವಿವಿಧ ಕಡೆ ಪ್ರವಾಸ ಮಾಡಿದ್ದರು. ಚಿದಾನಂದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮನೆಗೆ ಭೇಟಿ ನೀಡಿ ಕೊಪ್ಪಳದಿಂದ‌ ಪ್ರವಾಸ ಮಗಿಸಿ ತೆರಳಿದ್ದ ವೇಳೆ ಅಪಘಾತ ನಡೆದಿದೆ.

ಕೂಡಲೆಪ್ಪ ಬೋಳಿ ಮರಣೋತ್ತರ ಪರೀಕ್ಷೆ ಅಂತ್ಯ ಚಿದಾನಂದ ಕಾರು ಅಪಘಾತದಲ್ಲಿ ಮೃತಪಟ್ಟ ಕೂಡಲೆಪ್ಪ ಬೋಳಿ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದೆ. ಬಾಗಲಕೋಟೆ ನಗರದಲ್ಲಿರುವ ಕುಮಾರೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಕೂಡಲೆಪ್ಪ ಕುಟುಂಬಸ್ಥರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಕೂಡಲೆಪ್ಪ ಹಸ್ತಾಂತರಿಸಲಾಗಿದ್ದು ಮೃತದೇಹ ಚಿಕ್ಕ ಹಂಡರಗಲ್ ಗ್ರಾಮಕ್ಕೆ ರವಾನಿಸಲಾಗಿದೆ.

ಆಕಸ್ಮಿಕವಾಗಿ ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತವಾಗಿದೆ ಮನೆ ದೇವರಾಣೆಗೂ ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಆಕಸ್ಮಿಕವಾಗಿ ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತವಾಗಿದೆ ಎಂದು ಟಿವಿ9ಗೆ ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಹೇಳಿಕೆ ನೀಡಿದ್ದಾರೆ. ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ. ಅಪಘಾತವಾಗಿರುವುದು ನಿಜ, ಸ್ಥಳದಲ್ಲಿ ಯಾರೂ ಇರಲಿಲ್ಲ. ಅಪಘಾತವಾದ ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ನಾನೇ ಆಸ್ಪತ್ರೆಗೆ ದಾಖಲಿಸಿದ್ದೆ. ದೇವರಾಣೆಗೂ ನಾನೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಮಾನವೀಯತೆ ದೃಷ್ಟಿಯಿಂದ ಮೃತನ ಕುಟುಂಬಕ್ಕೆ ನಾನು ಸಹಾಯವನ್ನು ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಹೇಳಿದ್ರು.

ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು 30 ಕಿಲೋಮೀಟರ್ ಮುಂದಿತ್ತು. ನನ್ನ ಕಾರನ್ನು ನನ್ನ ಚಾಲಕ ಚಲಾಯಿಸುತ್ತಿದ್ದ. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡುವ ವೇಳೆ ಜನರು ಬಂದಿದ್ದರು. ಸುಮಾರು 6 ಗಂಟೆಯ ವೇಳೆಗೆ ನನಗೆ ಕರೆ ಬಂದಿತ್ತು. ಕಾರು ಅಪಘಾತವಾಗಿರುವ ಬಗ್ಗೆ ನನ್ನ ಚಾಲಕ ಕರೆ ಮಾಡಿದ್ದ. ನಾನು, ನನ್ನ ಸ್ನೇಹಿತರು ಯಾರಿಗೂ ಬೆದರಿಕೆಯನ್ನ ಹಾಕಿಲ್ಲ. ಬೈಕ್ ಸವಾರ ಹೆಲ್ಮೆಟ್‌ನ್ನೂ ಧರಿಸಿರಲಿಲ್ಲ. ಘಟನೆಯ ಬಗ್ಗೆ ನಮಗೂ ನೋವಿದೆ ಎಂದರು.

ಚಿದಾನಂದ ಸವದಿ ಹೇಳುತ್ತಿರುವುದು ಸುಳ್ಳು ಚಿದಾನಂದ ಸವದಿ ಹೇಳುತ್ತಿರುವುದು ಸುಳ್ಳು. ಅವರು ಸ್ಥಳದಲ್ಲಿ ಏನು ಮಾಡಿದ್ರು ಎಂದು ಸ್ಥಳದಲ್ಲಿದ್ದವರು ಎಲ್ಲವನ್ನೂ ನೋಡಿದ್ದಾರೆ ಎಂದು ಮೃತ ಕೂಡಲೆಪ್ಪ ಬೋಳಿ ಸಂಬಂಧಿ ಸಿದ್ದಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ರಸ್ತೆ ಪಕ್ಕವೇ 10-15 ಅಡಿ ದೂರದಲ್ಲಿ ಓರ್ವ ರೈತನಿದ್ದ. ಅವರು ಚಿದಾನಂದ ಸವದಿ ಮಾಡಿದ್ದೆಲ್ಲವನ್ನೂ ಹೇಳಿದ್ದಾರೆ. ಘಟನೆ ವಿಡಿಯೋ ಮಾಡ್ತಿದ್ದವನ ಮೊಬೈಲ್ ಕಸಿದಿದ್ದಾರೆ. ಚಿದಾನಂದ ಸವದಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರೆ. ಆಸ್ಪತ್ರೆಯಲ್ಲಿ ಇರಬೇಕಿತ್ತು, ನಮ್ಮ ಜತೆ ಮಾತಾಡಬೇಕಿತ್ತು. ಚಿದಾನಂದ ಸವದಿ ಘಟನೆಯನ್ನು ತಿರುಚಿ ಹೇಳುತ್ತಿದ್ದಾರೆ. ಸಾಂತ್ವನ ಹೇಳುವ ಬದಲು ಅವರು ಸುಳ್ಳು ಹೇಳುತ್ತಿದ್ದಾರೆ. ರಕ್ಷಣೆ ಮಾಡಿರುವವರು ಪರಾರಿ ಆಗಿರುವುದು ಏಕೆ? ಪ್ರಕರಣವನ್ನು ಮುಚ್ಚಿಹಾಕುವ ಎಲ್ಲ ಪ್ರಯತ್ನ ನಡೆದಿದೆ. ಪೊಲೀಸರು ಇದುವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ಈ ಪರಿಸ್ಥಿತಿ ಅವರ ಅಪ್ಪನಿಗೆ ಆಗಿದ್ದರೆ ಕಷ್ಟ ತಿಳಿಯುತ್ತಿತ್ತು ಎಂದು ಮೃತ ಕೂಡಲೆಪ್ಪ ಬೋಳಿ ಸಂಬಂಧಿ ಸಿದ್ದಪ್ಪ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: DCM Laxman Savadi Son: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು

Published On - 9:20 am, Tue, 6 July 21