ಬೆಂಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ವಿದ್ಯಾರ್ಥಿನಿಯರ ಹೇಳಿಕೆಗೆ ಧರ್ಮಗುರುಗಳಿಂದಲೇ ಆಕ್ಷೇಪ ಕೇಳಿಬಂದಿದೆ. ಅವರ ವರ್ತನೆ ಸರಿ ಅಲ್ಲ, ಅವರಿಗೆ ಮಾರ್ಗದರ್ಶನ ಅಗತ್ಯವಿದೆ. ಸುದ್ದಿಗೋಷ್ಠಿಗೆ ಉತ್ತೇಜಿಸಿದ್ದು ಸರಿ ಅಲ್ಲವೆಂದು ಅಭಿಪ್ರಾಯ ಕೇಳಿಬಂದಿದೆ. ಹೈಕೋರ್ಟ್ ತೀರ್ಪಿನಿಂದ ಆತಂಕ ಪಡುವ ಅಗತ್ಯವಿಲ್ಲ. ಸಮವಸ್ತ್ರ ಇರುವಲ್ಲಷ್ಟೇ ಆದೇಶ ಪಾಲನೆ ಮಾಡಲು ಹೇಳಿದೆ. ಸುಪ್ರಿಂಕೋರ್ಟ್‌ಗೆ ಹೋಗಲು ಸಹ ನಮಗೆ ಅವಕಾಶ ಇದೆ. ಈಗಾಗಲೇ ಕಪಿಲ್ ಸಿಬಲ್ ಜೊತೆ ಮಾತನಾಡಲಾಗಿದೆ. ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿ ಆಗುವುದು ಬೇಡ. ಪ್ರಚೋದನೆ ನೀಡವವರನ್ನು ಸಮರ್ಥನೆ ಮಾಡುವುದು ಬೇಡ ಎಂದು ಎಲ್ಲಾ ನಾಯಕರಿಗೆ ಅಮಿರ್ ಎ ಶರಿಯಾತ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಿಜಾಬ್ ವಿಚಾರವಾಗಿ ನಿನ್ನೆ (ಮಾರ್ಚ್ 15) ಮುಖಂಡರು ಸಭೆ ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿಸದೆ. ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ನಾಯಕರು, ಮುಸ್ಲಿಂ ಧಾರ್ಮಿಕ ಮುಖಂಡರಿಂದ ಸಭೆ ನಡೆಸಲಾಗಿದೆ. ಅಮಿರ್ ಎ ಶರಿಯಾತ್‌ರ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಸಲಿಂ ಅಹ್ಮದ್, ಜಮೀರ್ ಅಹ್ಮದ್ ಖಾನ್, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್, ನಜೀರ್ ಅಹ್ಮದ್, ರೆಹಮಾನ್ ಖಾನ್, ಖನೀಜ್ ಫಾತಿಮಾ, ಇತರರು ಭಾಗಿ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ದಾವಣಗೆರೆ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮತ್ತೆ ಶುರವಾಗಿದೆ. ಕಾಲೇಜ್ ರಜೆ ಇದ್ದರೂ ನಾಲ್ವರು ವಿದ್ಯಾರ್ಥಿನಿಯರು ಕೆಲ ಪೋಸ್ಟರ್ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ನಗರದ ಸರ್ಕಾರಿ ಪದವಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೈಕೋರ್ಟ್ ತೀರ್ಪು ನಮ್ಮ ವಿರುದ್ಧ ಬಂದಿದೆ. ನಮಗೆ ಶಿಕ್ಷಣ ಎಷ್ಟು ಮುಖ್ಯ ಅಷ್ಟೆ ಧರ್ಮ ಕೂಡಾ. ಹೀಗಾಗಿ ನಾನು ಹಿಜಾಬ್ ತೆಗೆದು ಕಾಲೇಜಿಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಈ ಹಿಂದೆ ಶಬರಿಮಲೆಯಲ್ಲಿ ಕೆಲ ವಿಚಾರ ಚರ್ಚೆಗೆ ಬಂದಿದ್ದವು. ಆಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರ್ಮಿಕ ವಿಚಾರಗಳಲ್ಲಿ ಕೋರ್ಟ್ ಪ್ರವೇಶ ಮಾಡಬಾರದು ಎಂದು ಹೇಳಿದ್ದರು. ಈಗ ನಮ್ಮ ವಿಚಾರದಲ್ಲಿ ಅಮಿತ್ ಶಾ ಅವರು ಬೆಂಬಲ ನೀಡಲಿ. ಹೈಕೋರ್ಟ್ ತೀರ್ಪು ಬರುವ ತನಕ ಕಾಲೇಜಿನ ಮುಖ್ಯಸ್ಥರ ಮಾತು ಕೇಳಿ ಹಿಜಾಬ್ ತೆಗೆದು ಕೆಲ ಪರೀಕ್ಷೆಗಳಿಗೆ ಹಾಜರಾಗಿದ್ದೆವು. ಆದ್ರೆ ಹೈಕೋರ್ಟ್ ತೀರ್ಪು ನಮ್ಮ ವಿರುದ್ಧ ಬಂದಿದೆ. ಹೀಗಾಗಿ ನಾವು ಕಾಲೇಜಿಗೆ ಹಿಜಾಬ್ ಇಲ್ಲದೇ ಹೋಗಲ್ಲ. ಜೊತೆಗೆ ನಮಗೆ ಶಿಕ್ಷಣದಷ್ಟು ಧರ್ಮ ಕೂಡಾ ಮುಖ್ಯ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಇದನ್ನೂ ಓದಿ: ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ, ಮುಂದೆ ಇಡೀ ದೇಶದಲ್ಲಿ ಹಿಜಾಬ್ ರದ್ದಾಗಬಹುದು: ರಘುಪತಿ ಭಟ್