ಹ್ಯಾರಿಸ್ ಸಿಎಂ, ಪುತ್ರ ನಲಪಾಡ್ ಡಿಸಿಎಂ ಆಗಬೇಕು: ಬಿಜೆಪಿ ಶಾಸಕ ಮುನಿರತ್ನ ವ್ಯಂಗ್ಯ

ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಅವರು ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬ್ರಾಂಡ್ ಬೆಂಗಳೂರು, ಶಾಸಕ ಶಿವಗಂಗಾ ಹೇಳಿಕೆ, ಬೆಳಗಾವಿ ಕಾಂಗ್ರೆಸ್ ರಾಜಕೀಯ, ವಿದ್ಯುತ್ ಸಮಸ್ಯೆ ಬಗ್ಗೆ ಹೆಚ್​ಡಿ ಕುಮಾಸ್ವಾಮಿ ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅರ್ಜೆಂಟ್ ಆಗಿ ಹ್ಯಾರಿಸ್​ರನ್ನು ಸಿಎಂ ಮಾಡಿದ್ರೆ ಒಳ್ಳೆಯ ಹೆಸರು ಬರುತ್ತೆ. ಎನ್​.ಎ.ಹ್ಯಾರಿಸ್ ಸಿಎಂ ಆಗಬೇಕು, ಪುತ್ರ ನಲಪಾಡ್ ಡಿಸಿಎಂ ಆಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಹ್ಯಾರಿಸ್ ಸಿಎಂ, ಪುತ್ರ ನಲಪಾಡ್ ಡಿಸಿಎಂ ಆಗಬೇಕು: ಬಿಜೆಪಿ ಶಾಸಕ ಮುನಿರತ್ನ ವ್ಯಂಗ್ಯ
ನಲಪಾಡ್, ಹ್ಯಾರಿಸ್ , ಮುನಿರತ್ನ
Follow us
ಕಿರಣ್​ ಹನಿಯಡ್ಕ
| Updated By: ಆಯೇಷಾ ಬಾನು

Updated on: Oct 22, 2023 | 1:47 PM

ಬೆಂಗಳೂರು, ಅ.22: ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಲು ಬೆಂಬಲಿಸುತ್ತೇವೆ ಎಂದು ಶಿವಗಂಗಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಆರ್​.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ (MLA Munirathna) ಪ್ರತಿಕ್ರಿಯೆ ನೀಡಿದ್ದು ವ್ಯಂಗ್ಯವಾಡಿದ್ದಾರೆ. ಡಿ.ಕೆ.ಶಿವಕುಮಾರ ಸ್ವಲ್ಪ ನಿಧಾನಕ್ಕೆ ಮುಖ್ಯಮಂತ್ರಿ ಆಗಬಹುದೇನೋ. ಅರ್ಜೆಂಟ್ ಆಗಿ ಹ್ಯಾರಿಸ್​ರನ್ನು ಸಿಎಂ ಮಾಡಿದ್ರೆ ಒಳ್ಳೆಯ ಹೆಸರು ಬರುತ್ತೆ. ಎನ್​.ಎ.ಹ್ಯಾರಿಸ್ ಸಿಎಂ ಆಗಬೇಕು, ಪುತ್ರ ನಲಪಾಡ್ ಡಿಸಿಎಂ ಆಗಬೇಕು ಎಂದು ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.

ಹೊಸ 70 ಕಾಂಗ್ರೆಸ್ ಶಾಸಕರು ಡಿಕೆ ಶಿವಕುಮಾರ್ ಅವರು ಸಿಎಂ ಆಗಲು ಬೆಂಬಲಿಸುತ್ತೇವೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಮುನಿರತ್ನ, ಅವರ ಬೆಂಬಲಕ್ಕೆ ಇದ್ದೇವೆ, ಇವರ ಬೆಂಬಲಕ್ಕೆ ಇದ್ದೇವೆಂದು ಯಾಕೆ ಬೇಕು? ಕಾಂಗ್ರೆಸ್​ ಪಕ್ಷ ಒಂದೇ ತಾನೇ? ಎಂದ ಬಿಜೆಪಿ ಶಾಸಕ ಮುನಿರತ್ನ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್​​ನ 70 ಶಾಸಕರು ಡಿ.ಕೆ.ಶಿವಕುಮಾರ್ ಪರ ಇದ್ದಾರೆ ಅಂದರೆ ಉಳಿದ ಕಾಂಗ್ರೆಸ್ ಶಾಸಕರೆಲ್ಲಾ ಸಿದ್ದರಾಮಯ್ಯ ಪರ ಇದ್ದಾರೆ ಅಂತಾಯ್ತು. ಅಲ್ಲಿಗೆ ಎರಡು ಕಾಂಗ್ರೆಸ್ ಇದೆ ಅಂತ ಆಯ್ತಲ್ಲಾ? ಎಂದು ಶಾಸಕ ಮುನಿರತ್ನ ನಾಯ್ಡು ಪ್ರಶ್ನೆ ಮಾಡಿದರು.

ಇನ್ನು ಇದೇ ವೇಳೆ ಡಿಕೆಗೆ ಸಿಎಂ ಆಗುವ ಅರ್ಹತೆ ಇದೆ ಎಂದು ಹ್ಯಾರಿಸ್ ನೀಡಿದ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಶಾಸಕ ಮುನಿರತ್ನ, ಡಿ.ಕೆ.ಶಿವಕುಮಾರ ಸ್ವಲ್ಪ ನಿಧಾನಕ್ಕೆ ಮುಖ್ಯಮಂತ್ರಿ ಆಗಬಹುದೇನೋ. ಅರ್ಜೆಂಟ್ ಆಗಿ ಹ್ಯಾರಿಸ್​ರನ್ನು ಸಿಎಂ ಮಾಡಿದ್ರೆ ಒಳ್ಳೆಯ ಹೆಸರು ಬರುತ್ತೆ. ಎನ್​.ಎ.ಹ್ಯಾರಿಸ್ ಸಿಎಂ ಆಗಬೇಕು, ಪುತ್ರ ನಲಪಾಡ್ ಡಿಸಿಎಂ ಆಗಬೇಕು ಎಂದು ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ದೂರವಾಣಿ ಮೂಲಕ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಕಾಂಗ್ರೆಸ್​ ಪಕ್ಷದಲ್ಲಿ 103 ಜನಕ್ಕೆ ನಿಜವಾದ ಬರಗಾಲ ಬಂದಿದೆ

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಬೆಳವಣಿಗೆ ವಿಚಾರವಾಗಿ ಮಾತನಾಡಿದ ಶಾಸಕ ಮುನಿರತ್ನ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೌನ ಮುರಿದಿದ್ದಾರೆ. ಈಗ ಇನ್ನೊಬ್ಬ ಸಚಿವರು ಮೌನಕ್ಕೆ ಶರಣಾಗುತ್ತಾರಾ ಎಂದು ನೋಡಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಕ್ಕೆ ಲೋಕಸಭಾ ಚುನಾವಣೆ ಟಿಕೆಟ್ ಸಿಗುತ್ತೆ ಅನಿಸುತ್ತೆ. ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ವೀಕ್ ಆಗುತ್ತಿದ್ದಾರೆ. 20 ಜನರ ಜತೆ ಹೋಗಲು ಬಸ್ ರೆಡಿ ಮಾಡಿದ್ದರಲ್ಲೇ ಗೊತ್ತಾಗ್ತಿದೆ. ಹಿಂದೆ ರಮೇಶ್ ಜಾರಕಿಹೊಳಿ ಇದ್ದಾಗ ನೀನಾ ನಾನಾ ಅಂತಾ ಇತ್ತು. ಈಗ ಅದು ರಿವರ್ಸ್ ಆಗಿ ನಾನಾ ನೀನಾ ಅಂತಾ ಆಗಿದೆ. ಈಗ ಸಚಿವ ಸತೀಶ್​ ಜಾರಕಿಹೊಳಿ ಚಿಕ್ಕವರಾಗಿ ಕಾಣುತ್ತಿದ್ದಾರೆ. ಸಿಕ್ಕ‌ ಸಿಕ್ಕಿದವರೆನ್ನೆಲ್ಲ ಸೇರಿಸಿಕೊಂಡು ಕಾಂಗ್ರೆಸ್ಸಿಗರಿಗೆ ಧಕ್ಕೆ ಆಗ್ತಿದೆ. ಮೂಲ ಕಾಂಗ್ರೆಸ್ಸಿಗರು ನೊಂದಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ 103 ಜನಕ್ಕೆ ನಿಜವಾದ ಬರಗಾಲ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಮುನಿರತ್ನ ಲೇವಡಿ ಮಾಡಿದರು.

ಟನಲ್, ಬ್ರಾಂಡ್ ಬೆಂಗಳೂರು ಎಲ್ಲಾ ಪಕ್ಕಕ್ಕಿಟ್ಟು ಮಾತಾಡುತ್ತೇನೆ. ಬೆಂಗಳೂರನ್ನು ನೀವು ಏನೂ ಮಾಡದಿದ್ದರೂ ಪರವಾಗಿಲ್ಲ. 20 ಕಿ.ಮೀ. ಸಿಗ್ನಲ್ ಫ್ರೀ ಮಾಡಿ ಸಾಕು. ಟ್ರ್ಯಾಕ್ಟರ್, ಗೂಡ್ಸ್ ವೆಹಿಕಲ್ ಗಳ ಜೊತೆ ಏರ್ ಪೋರ್ಟ್ ಗೆ ಕನೆಕ್ಟಿಂಗ್ ರೋಡ್ ಕೊಡುತ್ತಿದ್ದೇವೆ. 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಟ್ಟರೆ ಬ್ರ್ಯಾಂಡ್ ಬೆಂಗಳೂರಿಗೆ ದುಡ್ಡೆಲ್ಲಿದೆ?. ಬೆಂಗಳೂರಿನಲ್ಲಿ ದುಡಿಯುವ ದುಡ್ಡೆಲ್ಲಾ ಇಡೀ ರಾಜ್ಯಕ್ಕೆ ಹಂಚಿಕೊಂಡು‌ ಕುಳಿತಿದ್ದಾರೆ. ಬೆಂಗಳೂರಿನಲ್ಲಿ ಮುಂದೆ ಗುಂಡಿ ಮುಚ್ಚಲೂ ದುಡ್ಡಿಲ್ಲ. ದುಡ್ಡು ಇಲ್ಲದೇ ಇರುವುದಕ್ಕೆ ನಮ್ಮ ಕ್ಷೇತ್ರದ ದುಡ್ಡು ಎತ್ತಿ ಕಾಂಗ್ರೆಸ್ ಕ್ಷೇತ್ರಗಳಿಗೆ ಹಂಚಿದ್ದಾರೆ. ಬರೀ ಬೆಂಗಳೂರಿನವರು ಮಾತ್ರ ಶಾಸಕರಾ?ಉಳಿದವರು ಶಾಸಕರಲ್ವಾ? ಅವರೇನು‌ ಮಾಡಬೇಕು? ಬರೀ ಬೆಂಗಳೂರಿನ ಶಾಸಕರಿಗೇ ದುಡ್ಡು ಕೊಡುವುದು ತಪ್ಪು ಎಂದು ಮುನಿರತ್ನ ಆಕ್ರೋಶ ಹೊರ ಹಾಕಿದ್ದಾರೆ.

ವಿದ್ಯುತ್ ಕೃತಕ ಅಭಾವ ಸೃಷ್ಟಿ ಕುರಿತು ಜೆಡಿಎಸ್ ಆರೋಪ ಸತ್ಯ ಅನ್ನಿಸುತ್ತಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಮಾತ್ರ ಹೇಗೆ ಕರೆಂಟ್ ಇತ್ತು? ಈ ಸರ್ಕಾರದಲ್ಲಿ ಯಾಕೆ ಕರೆಂಟ್ ಇಲ್ಲ? ಈ ಸರ್ಕಾರ ಬಂದ ಕೂಡಲೇ ಕರೆಂಟ್ ಇಲ್ಲ. ಈಗ ಖರೀದಿ ಮಾಡಬೇಕಾದರೆ ಅವರ ಜೊತೆ ಮಾತಾಡಬೇಕು. ಕುಮಾರಸ್ವಾಮಿ ಸರಿಯಾಗಿಯೇ ಹೇಳಿದ್ದಾರೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓಲದು ಇದರ ಮೇಲೆ ಕ್ಲಿಕ್ ಮಾಡಿ