AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರವಾಣಿ ಮೂಲಕ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಮೊಣಕಾಲು ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಬೊಮ್ಮಾಯಿ ಅವರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

ದೂರವಾಣಿ ಮೂಲಕ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ
ಕಿರಣ್​ ಹನಿಯಡ್ಕ
| Edited By: ವಿವೇಕ ಬಿರಾದಾರ|

Updated on:Oct 28, 2023 | 2:55 PM

Share

ಬೆಂಗಳೂರು ಅ.22: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬಹಳ ದಿನಗಳಿಂದ ಮಂಡಿನೋವಿನ ಬಾಧೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಗುಣಮುಖರಾಗಲೆಂದು ಹಾರೈಸಿದ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರೂ ಆದ ಶ್ರೀ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗ: ಬಸವರಾಜ ಬೊಮ್ಮಾಯಿ

ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಬೊಮ್ಮಾಯಿಯವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಅವರೊಂದಿಗೆ ಗೃಹ ಸಚಿವ ಜಿ ಪರಮೇಶ್ವರ್ ಸಹ ಇದ್ದರು.

ಹಲವು ದಿನಗಳಿಂದ ಮಂಡಿನೋವು ನೋವಿನಿಂದ ಬಳಲುತ್ತಿದ್ದ ಬೊಮ್ಮಾಯಿ

ಕೆಲ ವರ್ಷಗಳಿಂದ ಬೊಮ್ಮಾಯಿಯವರು ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದರು. ನಡೆದಾಡುವಾಗ ಸಮಸ್ಯೆ ಎದುರಿಸುತ್ತಿದ್ದರು. ಆದರೂ ಸಹ ಅವರು ಕುಂಟುತ್ತಾ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊನೆಗೆ ನೋವು ಹೆಚ್ಚಾಗಿದ್ದರಿಂದ ಅವರು ಸಿಎಂ ಸ್ಥಾನದಲ್ಲಿರುವಾಗಲೇ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಒಂದು ವೇಳೆ ಆಪರೇಷನ್ ಮಾಡಿಸಿಕೊಂಡರೇ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತೆ ಎಂದು ಆಪರೇಷನ್​ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಬದಲಿಗೆ ಬಸವರಾಜ ಬೊಮ್ಮಾಯಿ ಅವರು ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಮೈಸೂರಿನ ಮೂಲದ ಖ್ಯಾತ ನಾಟಿ ವೈದ್ಯ ಲೋಕೇಶ್ ಟೇಕ್​ ಅವರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಮೊಣಕಾಲು ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯರು ಬೊಮ್ಮಾಯಿ ಅವರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಅವರು ಸದ್ಯಕ್ಕೆ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:39 pm, Sun, 22 October 23

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ದೊಡ್ಡ ಹೊಟೇಲ್‌ಗಳಲ್ಲಿ ಸಭೆ, ಬಗೆ ಬಗೆಯ ಆಮಿಷಕ್ಕೆ ಮಾರು ಹೋದಿರಾ ಜೋಕೆ!
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!