ನಾಗರಬಾವಿಯಲ್ಲಿ ಬಾರ್ ಓಪನ್ ಆಗಿ ಎರಡೇ ದಿನವಾಯ್ತು! ಸ್ಥಳೀಯರಿಂದ ಪ್ರತಿಭಟನೆ, ಬಾರ್​ಗೆ ಬೀಗಮುದ್ರೆ ಆಗ್ರಹಿಸಿ ಧರಣಿ

| Updated By: ಆಯೇಷಾ ಬಾನು

Updated on: Jan 18, 2023 | 12:43 PM

2 ದಿನದ ಹಿಂದಷ್ಟೇ ಓಪನ್ ಆಗಿರುವ ಬಾರ್​​ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬಾರ್ ಬಾಗಿಲು ತೆಗೆಯುವ ಮುನ್ನವೇ ಸ್ಥಳೀಯರು ಬಾರ್ ಮುಂದೆ ಜಮಾವಣೆಗೊಂಡಿದ್ದಾರೆ.

ನಾಗರಬಾವಿಯಲ್ಲಿ ಬಾರ್ ಓಪನ್ ಆಗಿ ಎರಡೇ ದಿನವಾಯ್ತು! ಸ್ಥಳೀಯರಿಂದ ಪ್ರತಿಭಟನೆ, ಬಾರ್​ಗೆ ಬೀಗಮುದ್ರೆ ಆಗ್ರಹಿಸಿ ಧರಣಿ
ಬಾರ್​ಗೆ ಬೀಗಮುದ್ರೆ ಆಗ್ರಹಿಸಿ ಧರಣಿ
Follow us on

ಬೆಂಗಳೂರು: ನಗರದ ನಾಗರಬಾವಿ ವೃತ್ತದ ಮೆಟ್ರೋ ಲೇಔಟ್​ ಬಳಿಯಿರುವ ನೂತನ ಬಾರ್ ಮುಂದೆ ಏರಿಯಾ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. 2 ದಿನದ ಹಿಂದಷ್ಟೇ ಓಪನ್ ಆಗಿರುವ ಬಾರ್​​ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬಾರ್ ಬಾಗಿಲು ತೆಗೆಯುವ ಮುನ್ನವೇ ಸ್ಥಳೀಯರು ಬಾರ್ ಮುಂದೆ ಜಮಾವಣೆಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸರಿಂದ ಭದ್ರತೆ ನಿಯೋಜಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಬಾರ್​ ಮುಚ್ಚಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ಬಾರ್ ಮಾಲೀಕರ ಜೊತೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಹಣದ ಹೊಳೆ ಹರಿಸಿದ್ದಕ್ಕೆ ನಮ್ಮ ವಿರೋಧವಿದ್ದರೂ ಅನುನತಿ ನೀಡಿದ್ದಾರೆ. ಬಿಬಿಎಂಪಿ, ಅಬಕಾರಿ ಇಲಾಖೆ, ಪೊಲೀಸರಿಗೆ ದೂರು ನೀಡಿದ್ರೂ ಕ್ರಮ ವಹಿಸಿಲ್ಲ. ಈಗಾಗ್ಲೇ ಈ ಏರಿಯಾದಲ್ಲಿ ಬಹಳಷ್ಟು ಬಾರ್​ಗಳಿವೆ. ಈಗ ಓಪನ್ ಮಾಡಿರುವ ಬಾರ್ & ಲಾಡ್ಜ್ ನ ಸುತ್ತ ಶಾಲೆಗಳು, ದೇವಸ್ಥಾನಗಳಿವೆ. ಅಬಕಾರಿ ಇಲಾಖೆ ಅನುಮತಿ ವಾಪಾಸ್ ಪಡೆಯಬೇಕು. ಬಾರ್ ಗೆ ಬೀಗ ಹಾಕಿ ಸೀಲ್ ಹಾಕುವವರೆಗೂ ನಾವು ಸುಮ್ಮನಿರೊಲ್ಲ. ಪ್ರಭಾವ ಬಳಸಿ ಬಾರ್ ಓಪನ್ ಮಾಡಿದ್ದಾರೆಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಗಂಡ, ಮಕ್ಕಳು ದುಡಿದ ಹಣವನ್ನೆಲ್ಲಾ ಬಾರ್​ಗೆ ಸುರಿಯುತ್ತಿದ್ದಾರೆ. ಹೆಂಡತಿ, ಮಕ್ಕಳು, ಅಕ್ಕ ತಂಗಿಯರು ಬೀದಿ ಪಾಲಾಗುತ್ತಿದ್ದಾರೆ. ಹೀಗಾಗಿ ನಮ್ಮ ಏರಿಯಾದಲ್ಲಿ ಬಾರ್​ ಬಾಗಿಲು ತೆರೆಯುವುದೇ ಬೇಡ. ನೂತನ ಬಾರ್​ಗೆ ಬೀಗಮುದ್ರೆ ಹಾಕುವವರೆಗೆ ಧರಣಿ ಹಿಂಪಡೆಯಲ್ಲ ಎಂದು ಸ್ಥಳೀಯರು ಖಡಕ್​ ಆಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ