ಬೆಂಗಳೂರು: ಏರೋ ಇಂಡಿಯಾದಲ್ಲಿ, ಬೆಮಲ್ (ಭಾರತ್ ಅರ್ಥ ಮೂವರ್ಸ್ ಕಂಪನಿ)ಯ ಮಾನವ ರಹಿತ ಮೆಟ್ರೋ ಕಾರ್ (ರೈಲು) (metro cars) ಗಮನ ಸೆಳೆಯಿತು. ಡ್ರೈವರ್ ಇಲ್ಲದ ಮೆಟ್ರೋ ರೈಲು ಇದಾಗಿದ್ದು, ಬೆಂಗಳೂರಿನ ಬೆಮೆಲ್ ಉತ್ಪಾದನಾ ಘಟಕದಲ್ಲಿ ಸಿದ್ಧವಾಗುತ್ತಿದೆ. ಈ ರೈಲು ಮುಂದಿನ ಪೀಳಿಗೆಗೆ ಸಾಕಷ್ಟು ಅನುಕೂಲಕರವಾಗಲಿದೆ. ಏರೋ ಇಂಡಿಯಾ (Aero indian)ದಲ್ಲಿ ಪ್ರದರ್ಶದಲ್ಲಿದ್ದ ಚಾಲಕ ರಹಿತ ಮೆಟ್ರೋ ಮಾದರಿಯು ಈಗಾಗಲೇ ಮುಂಬೈನ ಎರಡು ಲೈನ್‌ಗಳಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿದೆ.
ನಗರದಲ್ಲಿ 318 ಮೆಟ್ರೋ ಕಾರ್ಗಳು ಬೇರೆ ಬೇರೆ ಲೈನ್‌ಗಳಲ್ಲಿ ಸಂಚರಿಸಲಿವೆ. 2, 2ಎ ಮತ್ತು 2ಬ ಹಂತಗಳಲ್ಲಿ ಮೆಟ್ರೋ ರೈಲುಗಳು ಸಂಚರಿಲಿವೆ. ಬಿಎಂಆರ್ಸಿಎಲ್ ಈಗಾಗಲೆ ಟೆಂಡರ್ ನೀಡಿದ್ದು, ಇದರ ತಯಾರಕರೇ 15 ವರ್ಷಗಳ ಕಾಲ ಇದರ ನಿರ್ವಣೆಯನ್ನು ಮಾಡಬೇಕೆಂದು ಮೆಟ್ರೋ ರೈಲ್ನ್ಯೂಸ್ ವರದಿ ಮಾಡಿದೆ.
ಚಾಲಕ ಇರದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದರೆ. ರೈಲಿನ ಸಂಚಾರವನ್ನು ಅಪರೇಷನ್ ಕಂಟ್ರೋಲ್ ಸೆಂಟರ್‌ನಲ್ಲಿ ನಿಗಾ ವಹಿಸಲಾಗುತ್ತದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಬಹುದು.
ಚಾಲಕ ರಹಿತ ಮೆಟ್ರೋ ರೈಲಿನ ಪ್ರತಿ ಬೋಗಿಯಲ್ಲಿ 380 ಜನ ಪ್ರಯಾಣ ಮಾಡಬಹುದಾಗಿದೆ. . ಬೆಮೆಲ್ 3 ಮತ್ತು 6 ಬೋಗಿ ಎರಡು ಮಾದರಿಯಲ್ಲಿ ಮೆಟ್ರೋ ಕಾರ್‌ಗಳನ್ನು ತಯಾರಿಸುತ್ತದೆ.
ಬೆಮೆಲ್ ಅಭಿವೃದ್ಧಿ ಪಡಿಸಿದರುವ ಚಾಲಕ ಇಲ್ಲದ ಮೆಟ್ರೋ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ಈ ಬೋಗಿಗಳ ರೈಲು ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ.
ಚಾಲಕ ರಹಿತ ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಹಳಿ ಅಥವಾ ಮಾರ್ಗದಲ್ಲಿ ಓಡಾಟ ನಡೆಸುವುದಿಲ್ಲ. ಚಾಲಕ ರಹಿತ ಮೆಟ್ರೋ ರೈಲಿಗೆ ಅಗತ್ಯವಿರುವ ತಂತ್ರಜ್ಞಾನದಲ್ಲಿ ಹಳಿ ಸೇರಿದಂತೆ ಮೊದಲಾದ ವ್ಯವಸ್ಥೆ ಮಾಡಬೇಕಿದೆ. ಈ ಮೆಟ್ರೋ ಬೋಗಿಯು ನಮ್ಮ ಮೆಟ್ರೋ ಬೋಗಿಗಿಂತ ದೊಡ್ಡಗಾಗಿದೆ.
ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ರೈಲನ್ನು ಪ್ರಧಾನಿ ಮೋದಿ ಡಿಸೆಂಬರ್ 28 2020 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ದೆಹಲಿಯ ಮ್ಯಾಗ್ನೆಟಾ ಲೈನ್‌ನ ಚಾಲಕ ರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 am, Wed, 15 February 23