Milk Price Hike: ವಿದ್ಯುತ್​ ಆಯ್ತು ಈಗ ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ?

|

Updated on: Jun 08, 2023 | 8:14 AM

ಹಾಲಿನ ದರ ಪರಿಷ್ಕರಿಸುವಂತೆ ಬಮೂಲ್ ಪಟ್ಟು ಹಿಡಿದಿದ್ದು ಲೀಟರ್​ ಹಾಲಿನ ಮಾರಾಟದ ದರದ ಮೇಲೆ ₹5 ಏರಿಕೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.

Milk Price Hike: ವಿದ್ಯುತ್​ ಆಯ್ತು ಈಗ ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ?
ಹಾಲು
Follow us on

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ(Congress) ಆಡಳಿತಕ್ಕೆ ಬರುತ್ತಿದ್ದಂತೆ ದಿಢೀರನೇ ವಿದ್ಯುತ್‌ ದರ(Electricity Hike) ಏರಿಕೆ ಮಾಡಿ ಜನರಿಗೆ ಶಾಕ್ ಕೊಟ್ಟಿತ್ತು. ಇದೀಗಾ ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ(Milk Price Hike). ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಮುಂದಾಗಿದ್ದ ಹಾಲು ಒಕ್ಕೂಟಕ್ಕೆ ಸಿಎಂ ಸಿದ್ದರಾಮಯ್ಯ(Siddaramaiah) ಸೂಚನೆ ನೀಡಿದ್ದ ಮೇರೆಗೆ ಹಾಲು ಒಕ್ಕೂಟ ತನ್ನ ನಿರ್ಧಾರ ಬದಲಾಯಿಸಿ ಹಾಲಿನ ಪ್ರೋತ್ಸಾಹ ಧನ ಮುಂದುವರೆಸಲು ಮುಂದಾಗಿದೆ. ಆದರೆ ಈಗ ಹಾಲು ಒಕ್ಕೂಟ ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಮುಂದಾಗಿದೆ.

ಹಾಲು ಒಕ್ಕೂಟಗಳು ನಷ್ಟದ ಕಾರಣ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸೋಕೆ ಮುಂದಾಗಿದ್ದವು. ಆದ್ರೆ ಇದಕ್ಕೆ ವಿರೋಧ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ಧನ ಕಡಿತ ಮಾಡದಂತೆ ಸೂಚನೆ ನೀಡಿದ್ದರು. ಹೀಗಾಗಿ ಕಡಿತಗೊಳಿಸಿದ ದರವನ್ನು ಮತ್ತೆ ರೈತರಿಗೆ ನೀಡಲು ಒಕ್ಕೂಟಗಳು ಮುಂದಾಗಿವೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ.

ಇದನ್ನೂ ಓದಿ: Summer Health Tips: ಬೇಸಿಗೆಯಲ್ಲಿ ಅರಿಶಿನ ಹಾಲು ಕುಡಿಯುವುದು ಸುರಕ್ಷಿತವೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ

ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಪಟ್ಟು ಹಿಡಿದಿವೆ. ಲೀಟರ್ ಹಾಲಿನ ದರದ ಮೇಲೆ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಬಮೂಲ್​ಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪೂರೈಕೆ ಆಗುವ ಹಾಲಿನ ಪ್ರಮಾಣ ಕಡಿಮೆ ಆಗಿತ್ತು. ಹೀಗಾಗಿ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಿ ರೈತರಿಗೆ 3 ರೂಪಾಯಿ ಪ್ರೋತ್ಸಾಹ ಧನ ನೀಡಿದ್ದೇವು. ಅದು ಬಮೂಲ್ ಗೆ ಮಾರ್ಚ್ ತಿಂಗಳವರೆಗೆ ಬಂದಿದ್ದ 10 ಕೋಟಿ ಲಾಭದಲ್ಲಿ ಕೊಟ್ಟಿದ್ದು. ಇದ್ರಿಂದ ರೈತರಿಗೆ ಲೀಟರ್ ಗೆ 31 ರೂ ಇದ್ದ ಹಣವನ್ನ 34 ರೂ.ಗೆ ಏರಿಸಿದ್ವೀ. ಜೂನ್ ವರೆಗೆ ಮಾತ್ರ ಅಂದ್ರೆ ಎರಡು ತಿಂಗಳು ಮಾತ್ರ ಪ್ರೋತ್ಸಾಹ ಧನ ನೀಡಬೇಕು ಅಂತ ಮೊದಲೆ ತೀರ್ಮಾನಿಸಿದ್ವೀ. ಸರ್ಕಾರದ ಪ್ರೋತ್ಸಾಹ ಧನದ ಜೊತೆಗೆ ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗಿತ್ತು. ನಂತ್ರ ಮೊನ್ನೆ ಪ್ರೋತ್ಸಾಹ ದರ ವಾಪಸ್ಸು ತೆಗೆದುಕೊಳ್ಳಲು ಮುಂದಾಗಿದ್ವೀ. ಆದ್ರೆ ಸರ್ಕಾರ ನಾವು ನೀಡಿದ್ದ ಆದೇಶವನ್ನ ವಾಪಸ್ಸು ಪಡೆಯುವಂತೆ ತಿಳಿಸಿದೆ. ಇದರನ್ವಯ ನಾವು ರೈತರಿಗೆ ಕೊಡುವ ಪ್ರೋತ್ಸಾಹ ದರ ಮುಂದುವರೆಸುತ್ತೇವೆ. ಆದರ ಬದಲಿಗೆ ಮಾರಾಟವಾಗುವ ಪ್ರತಿ ಲೀಟರ್ ಮೇಲೆ 5 ರೂ ಹೆಚ್ಚಿಸಬೇಕು. ರಾಜ್ಯದ 15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀ. 39 ರೂಪಾಯಿ ಇದೆ. ಇದ್ರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಕೊಡುತ್ತಿದ್ದೇವೆ. ಮಾರಾಟಗಾರರಿಗೆ ಪ್ರತಿ ಲೀ.ಗೆ 2 ರೂ ಕಮೀಷನ್ ಕೊಡಬೇಕು. ಮಧ್ಯ ಅಂತರ ಕೇವಲ 1.50 ಪೈಸೆ ಇದೆ. ಇಷ್ಟು ಲಾಭದಿಂದ ನಾವು ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಪ್ರತಿದಿನ ಬೆಂಗಳೂರಿಗೆ 13 ಲಕ್ಷ ಲೀ ಹಾಲು ಮಾರಾಟ ಮಾಡುತ್ತಿದ್ದೇವೆ. ಪ್ರತಿದಿನ 15 ರಿಂದ 16 ಲಕ್ಷ ಪ್ರತಿನಿತ್ಯ ನಷ್ಟವಾಗುತ್ತೆ. ಪ್ರತಿ ಲೀ ಗೆ ಮಾರಾಟ ದರದ ಮೇಲೆ 5 ರುಪಾಯಿ ಹೆಚ್ಚಳ ಮಾಡಲು ಅವಕಾಶ ಕೊಡಬೇಕು. ಹೆಚ್ಚಳ ಮಾಡದಿದ್ರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ. ಬೇರೆ ರಾಜ್ಯಗಳಲ್ಲಿ ಪ್ರತಿ ಲೀ. ಹಾಲಿನ ದರ 51 ರೂಪಾಯಿ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಹಾಲಿದ ದರ ಪರಿಷ್ಕರಣೆ ಮಾಡಿಲ್ಲ. ಈ ಬಾರಿ ಹಾಲಿನ ದರ ಪರಿಷ್ಕರಣೆ ಆಗಲೇಬೇಕು. ಈ ವಾರ ಸಿಎಂ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ರೆಡಿಯಾಗಿದ್ದೇವೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ