ಬೆಂಗಳೂರಿನ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಯ್ತು ಮತ್ತೆಂದೂ ಮೆದುಳಿನ ಗಡ್ಡೆ ಮರುಕಳಿಸದಂತೆ ಮಾಡುವ ವಿಶಿಷ್ಟ ಚಿಕಿತ್ಸೆ!

ಇಂಟ್ರಾ ಆಪರೇಟಿವ್‌ ರೇಡಿಯೇಶನ್‌ ಥೆರಪಿ (IORT) ವಿಧಾನದ ಮೂಲಕ ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭಾರತದಲ್ಲೇ ಇದೊಂದು ಅಪರೂಪದ ಪ್ರಕ್ರಿಯೆಯಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.

ಬೆಂಗಳೂರಿನ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಯ್ತು ಮತ್ತೆಂದೂ ಮೆದುಳಿನ ಗಡ್ಡೆ ಮರುಕಳಿಸದಂತೆ ಮಾಡುವ ವಿಶಿಷ್ಟ ಚಿಕಿತ್ಸೆ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jun 07, 2023 | 9:45 PM

ಬೆಂಗಳೂರು: ಇಂಟ್ರಾ ಆಪರೇಟಿವ್‌ ರೇಡಿಯೇಶನ್‌ ಥೆರಪಿ (IORT) ವಿಧಾನದ ಮೂಲಕ ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭಾರತದಲ್ಲೇ ಇದೊಂದು ಅಪರೂಪದ ಪ್ರಕ್ರಿಯೆಯಾಗಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಈ ಥೆರಪಿಯ ವಿಶೇಷತೆ ಎಂದರೆ, ಮತ್ತೆಂದೂ ಮೆದುಳಿನ ಗಡ್ಡೆ ಮರುಕಳಿಸದೇ ಇರುವ ರೀತಿಯಲ್ಲಿ ಬಲಿಷ್ಠ ವಿಕಿರಣಗಳ ಮೂಲಕ ಗಡ್ಡೆಯನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಲಾಗುತ್ತದೆ.

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ ರಾಜಕುಮಾರ್ ದೇಶಪಾಂಡೆ, ಸಾಮಾನ್ಯವಾಗಿ ಮೆದುಳಿನ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಆದರೆ, ಗ್ರೇಡ್ 4 ಗ್ಲಿಯೊಬ್ಲಾಸ್ಟೊಮಾ ಎಂಬ ಗಡ್ಡೆಯು ಎಷ್ಟು ಬಾರಿ ತೆಗೆದರೂ ಪುನಃ ಬೆಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಶಾಶ್ವತವಾಗಿ ಹೋಗಲಾಡಿಸಲು ಯಾವುದೇ ವಿಧಾನವಿರಲಿಲ್ಲ. ಆದರೀಗ, ಭಾರತದಲ್ಲಿ ಇಂಟ್ರಾ ಆಪರೇಟಿವ್‌ ರೇಡಿಯೇಶನ್‌ ಥೆರಪಿ (IORT) ಪರಿಚಯಿಸಲಾಗಿದ್ದು, ಈ ಥೆರಪಿಯಿಂದ ಮೆದುಳಿನ ಗಡ್ಡೆಯ ಮೇಲೆ ನೇರವಾಗಿ ವಿಕಿರಣ ಬಿಡುವ ಮೂಲಕ ಶಾಶ್ವತ ಪರಿಹಾರ ನೀಡಬಹುದು ಎಂದು ತಿಳಿಸಿದರು.

41 ವರ್ಷದ ವ್ಯಕ್ತಿಯು ಕೆಲ ತಿಂಗಳಿನಿಂದ ಕುತ್ತಿಗೆ ನೋವು, ತಲೆ ನೋವಿನಿಂದ ಬಳಲುತ್ತಿದ್ದರು. ಜೊತೆಗೆ, ಮೆದುಳಿನ ಬಲ ಭಾಗದಲ್ಲಿ ಹಠಾತ್‌ ನೋವು ಕಾಣಿಸಿಕೊಂಡಿತ್ತು. ಜೊತೆಗೆ, ಎಡಭಾಗದ ದೈಹಿಕ ಚಟುವಟಿಕೆಯಲ್ಲಿ ಪಾರ್ಶ್ವವಾಯುವಿನ ಲಕ್ಷಣಗಳನ್ನೂ ಹೊಂದಿದ್ದರು. ಇವರ ಲಕ್ಷಣಗಳನ್ನು ಗಮನಿಸಿ, ಮೊದಲಿಗೆ ಮೆದುಳಿನ ಎಂಆರ್‌ಐ ಸ್ಕ್ಯಾನ್‌ ಮಾಡಲಾಯಿತು. ಇದರಿಂದ ರೋಗಿಗೆ ಬಲ ಮೆದುಳಿನ ಭಾಗದಲ್ಲಿ ಮೆದುಳಿನ ಗೆಡ್ಡೆ (ಗ್ರೇಡ್ 4 ಗ್ಲಿಯೊಬ್ಲಾಸ್ಟೊಮಾ) ವೇಗವಾಗಿ ಬೆಳೆಯುತ್ತಿರುವುದು ಗಮನಕ್ಕೆ ಬಂದಿತ್ತು. ಇದು ಸರಿಸುಮಾರು 5 ಸೆಮೀ ಗಾತ್ರದಷ್ಟು ದೊಡ್ಡದಾಗಿ ಗಡ್ಡೆ ಬೆಳೆದು, ಅಪಾಯಕಾರಿ ಹಂತಕ್ಕೆ ತಲುಪಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: World Brain Tumor Day 2023: ಬ್ರೈನ್‌ ಟ್ಯೂಮರ್​ಗೆ ಕಾರಣವೇನು? ಇದರ ಲಕ್ಷಣಗಳು? ಇಲ್ಲಿದೆ ಮಾಹಿತಿ

ಮೊದಲಿಗೆ ಮೆದುಳಿನ ಗೆಡ್ಡೆಯನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಈ ಶಸ್ತ್ರಚಿಕಿತ್ಸೆಯಿಂದ ಗಡ್ಡೆ ಹೋಗುತ್ತದೆಯಾದರೂ, ಕೆಲ ವರ್ಷದಲ್ಲಿಯೇ ಗಡ್ಡೆ ಮರುಕಳಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಪುನಃ ಬಾರದಂತೆ ಶಾಶ್ವತವಾಗಿ ಗಡ್ಡೆಯನ್ನು ತೆಗೆದು ಹಾಕಲು ಈ ಥೆರಪಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ವ್ಯಕ್ತಿಗೂ ಸಹ ಮತ್ತೊಮ್ಮೆ ಗಡ್ಡೆ ಬೆಳೆಯುವ ಅಪಾಯ ಕಂಡು ಬಂದಿತು. ಹೀಗಾಗಿ ಅವರಿಗೆ ಮೊಲದ ಬಾರಿಗೆ ಇಂಟ್ರಾಆಪರೇಟಿವ್ ರೇಡಿಯೇಷನ್ ಥೆರಪಿ (ಐಒಆರ್‌ಟಿ) ಬಳಸಿ, ನೇರವಾಗಿ ಗಡ್ಡೆಗೆ ಈ ವಿಕಿರಣವನ್ನು ಬಿಡುವ ಮೂಲಕ ಗಡ್ಡೆ ಬೆಳೆಯದಂತೆ ಶಮನ ಮಾಡಲಾಯಿತು. ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ರೋಗಿಯ ಎಂದಿನ ಸ್ಥಿತಿಗೆ ಮರುಕಳಿಸಿದರು ಎಂದು ವಿವರಣೆ ನೀಡಿದರು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Wed, 7 June 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ