ಪಟಾಕಿ ದುರಂತಗಳು: ಕೊರೊನಾ ಮುಂಚೆಗಿಂತ ಈಗ ಕಣ್ಣಿಗೆ ಹಾನಿ ಮಾಡುಕೊಂಡಿರುವವರ ಸಂಖ್ಯೆ ಹೆಚ್ಚು, 6 ಜನರ ಗುಡ್ಡೆ ಸೀಳಿದೆ!

| Updated By: ಆಯೇಷಾ ಬಾನು

Updated on: Oct 27, 2022 | 2:28 PM

ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಕೇಸ್ ಗಳು ದಾಖಲಾಗಿವೆ ಎಂದು ಡಾ. ಭುಜಂಗಶೆಟ್ಟಿ ಅವರು ತಿಳಿಸಿದ್ದಾರೆ.

ಪಟಾಕಿ ದುರಂತಗಳು: ಕೊರೊನಾ ಮುಂಚೆಗಿಂತ ಈಗ ಕಣ್ಣಿಗೆ ಹಾನಿ ಮಾಡುಕೊಂಡಿರುವವರ ಸಂಖ್ಯೆ ಹೆಚ್ಚು, 6 ಜನರ ಗುಡ್ಡೆ ಸೀಳಿದೆ!
ಪಟಾಕಿಗಳು (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಅಜ್ಞಾನದ ಅಂಧಕಾರ ಅಳಿಸಿ ಭರವಸೆಯ ಬೆಳಕಿನಡೆಗೆ ನಡೆಸುವ ಹಬ್ಬ ದೀಪಾವಳಿ. ಆದ್ರೆ ಇಂತಹ ಬೆಳಕಿನ ಹಬ್ಬದ ಸಮಯದಲ್ಲೇ ಅನೇಕರು ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಳ್ಳುತ್ತಾರೆ, ಕಣ್ಣು ಕಳೆದುಕೊಳ್ಳುತ್ತಾರೆ. ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿದು ಅನೇಕರು ಗಾಯಗೊಂಡಿದ್ದಾರೆ. ಈ ಬಗ್ಗೆ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಭುಜಂಗಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಈ ಬಾರಿ ಗಾಯಗೊಂಡವರ ಮಾಹಿತಿ ನೀಡಿದ್ದಾರೆ.

ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಕೇಸ್ ಗಳು ದಾಖಲಾಗಿವೆ ಎಂದು ಡಾ. ಭುಜಂಗಶೆಟ್ಟಿ ಅವರು ತಿಳಿಸಿದ್ದಾರೆ. 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನರು ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣನ್ನು ಹಾಕಲು ಸಾಧ್ಯವಿಲ್ಲ. ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದಲ್ಲೂ ಒಡಕು; ಅಧ್ಯಕ್ಷೆ ಸ್ಥಾನದಿಂದ ಪುಷ್ಪಾ ಅಮರನಾಥರನ್ನು ಕೆಳಗಿಳಿಸುವಂತೆ ಕಾರ್ಯಕರ್ತೆಯರ ಪ್ರತಿಭಟನೆ!

50 ಜನರ ಪೈಕಿ 38 ಜನರು ಪುರುಷರು, 12 ಜನ ಮಹಿಳೆಯರು. 26 ಜನರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 26 ಜನರು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಪಟಾಕಿ ಸಿಡಿಸದೆ ಹಾನಿಗೊಳಗಾದವರ ಸಂಖ್ಯೆ 24. ಇವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಹಚ್ಚಿದ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಪಟಾಕಿಯಿಂದ ಕೇವಲ ಕಣ್ಣಿಗೆ ಮಾತ್ರವಲ್ಲ, ಮನುಷ್ಯರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಪರಿಸರ ಮಾಲಿನ್ಯಕ್ಕೂ ಈ ಪಟಾಕಿ ಕಾರಣವಾಗಿದೆ. ಪೋಷಕರು ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರಯಿಡಬೇಕು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು ಎಂದು ಭುಜಂಗ ಶೆಟ್ಟಿ ಅವರು ಸುದ್ದಿಗೋಷ್ಠಿ ವೇಳೆ ಸಲಹೆ ನೀಡಿದರು.

ಇನ್ನು ನಗರದ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿಗಳಿಂದ ಗಾಯಗೊಂಡ 27 ಪ್ರಕರಣಗಳು ವರದಿಯಾಗಿವೆ. ಗಾಯಗೊಂಡವರಲ್ಲಿ 14 ಮಂದಿ ವಯಸ್ಕರು ಮತ್ತು 13 ಮಂದಿ ಮಕ್ಕಳಿದ್ದಾರೆ. 27 ಜನರಲ್ಲಿ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಏಳು ಜನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಂದು ಆರ್‌ಎಂಒ ವಿದ್ಯಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:06 pm, Thu, 27 October 22