ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದಲ್ಲೂ ಒಡಕು; ಅಧ್ಯಕ್ಷೆ ಸ್ಥಾನದಿಂದ ಪುಷ್ಪಾ ಅಮರನಾಥರನ್ನು ಕೆಳಗಿಳಿಸುವಂತೆ ಕಾರ್ಯಕರ್ತೆಯರ ಪ್ರತಿಭಟನೆ!
ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬೆಂಗಳೂರಲ್ಲಿಂದು ತಮ್ಮ ಅಧ್ಯಕ್ಷೆ ಪುಷ್ಪಾ ಅಮರನಾಥ ವಿರುದ್ಧ ಪ್ರತಿಭಟನೆ ನಡೆಸಿ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಬೆಂಗಳೂರು: ಭಾರತ ಜೋಡೋ ಯಾತ್ರೆ ಅಂಗವಾಗಿ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿದ್ದಾಗ ಭಾರಿ ಐಕ್ಯತೆ ಮತ್ತು ಸಮಗ್ರತೆ ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಅವರು ಅತ್ತ ತೆಲಂಗಾಣ ಪ್ರವೇಶಿಸುತ್ತಿದ್ದಂತೆಯೇ ತಮ್ಮಲ್ಲಿನ ಒಳಜಗಳಗಳನ್ನು ಬಯಲಿಗೆ ತರುತ್ತಿದ್ದಾರೆ. ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬೆಂಗಳೂರಲ್ಲಿಂದು ತಮ್ಮ ಅಧ್ಯಕ್ಷೆ ಪುಷ್ಪಾ ಅಮರನಾಥ (Pushpa Amarnath) ವಿರುದ್ಧ ಪ್ರತಿಭಟನೆ ನಡೆಸಿ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಚುನಾವಣೆ ಮುಗಿಯುವವರೆಗೆ ಯಾವುದೇ ಪದಾಧಿಕಾರಿಯನ್ನು ಬದಲಾಯಿಸುವುದು ಬೇಡ ಅಂತ ಸೂಚನೆ ನೀಡಿದ್ದರೂ 13 ಜಿಲ್ಲಾ ಘಟಕಗಳ ಅಧ್ಯಕ್ಷೆಯರನ್ನು ಬದಲಾಯಿಸಿದ್ದಾರೆ, ಯಾರಿಗೂ ಅವರು ಗೌರವ ನೀಡುವುದಿಲ್ಲ, ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದರು.
Latest Videos