ನ್ಯಾಷನಲ್ ಲಾ ಸ್ಕೂಲ್ನಲ್ಲಿ ಕಾನೂನು ಓದಿದ ದಾವಣಗೆರೆಯ ಅವಿನಾಶ್ ಮೊದಲ ಅಟೆಂಪ್ಟಿನಲ್ಲೇ ಐಎಎಸ್ ಪಾಸ್! UPSC ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಸಾಧನೆ ಏನು?

| Updated By: ಆಯೇಷಾ ಬಾನು

Updated on: May 30, 2022 | 6:04 PM

ದಾವಣಗೆರೆ ಬಸ್ ಸ್ಟಾಪ್‌ ಮುಂದೆ ಅವಿನಾಶ್ ತಂದೆಯವರ ಹೋಟೆಲ್ ಇದೆ. ಅವಿನಾಶ್ ತಮ್ಮ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಲಾ ಮಾಡಿಕೊಂಡ ಅವಿನಾಶ್ ಅವರಿಗೆ ಈಗ 24 ವರ್ಷ ವಯಸ್ಸು.

ನ್ಯಾಷನಲ್ ಲಾ ಸ್ಕೂಲ್ನಲ್ಲಿ ಕಾನೂನು ಓದಿದ ದಾವಣಗೆರೆಯ ಅವಿನಾಶ್ ಮೊದಲ ಅಟೆಂಪ್ಟಿನಲ್ಲೇ ಐಎಎಸ್ ಪಾಸ್! UPSC ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಸಾಧನೆ ಏನು?
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶ್ರುತಿ ಶರ್ಮಾಗೆ ಪ್ರಥಮ ಱಂಕ್, ಅಂಕಿತಾ ಅಗರ್ವಾಲ್ ದ್ವಿತೀಯ ಱಂಕ್, ಗಾಮಿನಿ ಸಿಂಗ್ಲಾ ತೃತೀಯ ಱಂಕ್ ಪಡೆದಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯದ 24 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ದಾವಣಗೆರೆ ಮೂಲದ ಅವಿನಾಶ್ 31ನೇ ಱಂಕ್ ಗಳಿಸಿದ್ದಾರೆ. ಕನ್ನಡಿಗ ಬೆನಕ ಪ್ರಸಾದ್ 92ನೇ ಱಂಕ್ ಗಳಿಸಿ ರಾಜ್ಯದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

UPSC ಪರೀಕ್ಷೆಯಲ್ಲಿ ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ
ಅವಿನಾಶ್.ವಿ 31ನೇ ಱಂಕ್, ಬೆನಕ ಪ್ರಸಾದ್ 92ನೇ ಱಂಕ್, ನಿಖಿಲ್ ಬಸವರಾಜ್ ಪಾಟೀಲ್ 139ನೇ ಱಂಕ್, ಮೆಲ್ವನ್ 118ನೇ ಱಂಕ್, ವಿನಯ್ ಕುಮಾರ್ 151ನೇ ಱಂಕ್, ಚಿತ್ರಾಂಜನ್ 155ನೇ ಱಂಕ್, ಅಪೂರ್ವ ಬಸೂರ್ 191ನೇ ಱಂಕ್, ಮನೋಜ್ ಹೆಗ್ಡೆ 213ನೇ ಱಂಕ್, ಮಂಜುನಾಥ್ 219ನೇ ಱಂಕ್, ರಾಜೇಶ್ ಪೊನ್ನಪ್ಪ 222ನೇ ಱಂಕ್, ಕಲ್ಪಶ್ರೀ 291ನೇ ಱಂಕ್, ದೀಪಕ್ 311ನೇ ಱಂಕ್, ಹರ್ಷವರ್ಧನ್ 318ನೇ ಱಂಕ್, ಗಜಾನನ ಬಾಳೆ 319ನೇ ಱಂಕ್, ವಿನಯ್ ಕುಮಾರ್ ಡಿ.ಹೆಚ್. 352ನೇ ಱಂಕ್, ಕ್ಯೂಮರ್ ಉದ್ದೀನ್ ಖಾನ್ 414ನೇ ಱಂಕ್, ಮೇಘನಾ 425ನೇ ಱಂಕ್, ಚೇತನ್ ಕೆ 532ನೇ ಱಂಕ್, ರವಿನಂದನ್ 455ನೇ ಱಂಕ್, ಸವಿತಾ 479ನೇ ಱಂಕ್, ಮೊಹ್ಮದ್ ಷರೀಫ್ 479ನೇ ಱಂಕ್, ಸಚಿನ್ 682ನೇ ಱಂಕ್, ಪ್ರಶಾಂತ್ ಕುಮಾರ್ 641ನೇ ಱಂಕ್, ರಾಘವೇಂದ್ರ 649ನೇ ಱಂಕ್ ಪಡೆದಿದ್ದಾರೆ. ಇದನ್ನೂ ಓದಿ: Relationship: ತಾವೇ ಇಷ್ಟಪಟ್ಟು ಪಡೆದ ಪ್ರೀತಿಯಿಂದ ದೂರವಾಗೋದೇಕೆ? ಸಂಬಂಧ ಉಳಿಸಿಕೊಳ್ಳೋದು ಹೇಗೆ?

ಜನತಾ ಹೋಟೆಲ್ ಮಾಲೀಕರ ಪುತ್ರ ಯುಪಿಎಸ್ಸಿಯಲ್ಲಿ ರ್ಯಾಂಕ್
ದಾವಣಗೆರೆ ಜನತಾ ಹೋಟೆಲ್ ಮಾಲೀಕರ ಪುತ್ರ ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಯುಪಿಎಸ್ಸಿ ಱಂಕಿಂಗ್ನಲ್ಲಿ 31ನೇ ಸ್ಥಾನ ಪಡೆದ ಅವಿನಾಶ್ ರಾಜ್ಯದಲ್ಲಿ ಟಾಪರ್. ಹೋಟೆಲ್ ಮಾಲೀಕನ ಪುತ್ರನಾಗಿ ಯುಪಿಎಸ್ಸಿ ಱಂಕ್ ಪಡೆದು ಸಾಧನೆ ಮಾಡಿದ್ದಾರೆ. ಅದರಲ್ಲೂ ಅವಿನಾಶ್ ತಮ್ಮ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಲಾ ಮಾಡಿಕೊಂಡ ಅವಿನಾಶ್ ಅವರಿಗೆ ಈಗ 24 ವರ್ಷ ವಯಸ್ಸು. ದಾವಣಗೆರೆ ಬಸ್ ಸ್ಟಾಪ್‌ ಮುಂದೆ ಅವಿನಾಶ್ ತಂದೆಯವರ ಹೋಟೆಲ್ ಇದೆ. ಅವಿನಾಶ್ ಅಕ್ಕ ಎಂಬಿಬಿಎಸ್ ಮಾಡಿದ್ದಾರೆ. ಅವಿನಾಶ್ ಅವರಿಗೆ ಇಂಡಿಯನ್ ಫಾರಿನ್ ಸರ್ವಿಸ್ ಮಾಡುವ ಆಸೆ ಇದೆಯಂತೆ.

92ನೇ ಸ್ಥಾನ ಪಡೆದ ಬೆನಕಾ ಪ್ರಸಾದ್
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದ ಬೆನಕಾ ಪ್ರಸಾದ್, ಆಲ್ ಇಂಡಿಯಾ ಐಎಎಸ್ ಱಂಕ್ನಲ್ಲಿ 92ನೇ ಸ್ಥಾನ ಪಡೆದು ಟಾಪರ್ ಆಗಿದ್ದಾರೆ. ನಿವೃತ್ತ ಉಪನ್ಯಾಸಕ ದಿ.ಜಯಣ್ಣ , ಪಂಕಜಾ ದಂಪತಿಯ ಪುತ್ರ ಬೆನಕಾ ಪ್ರಸಾದ್ ಮೂರನೇ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಮುಗಿಸಿ ವೈದ್ಯಾಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆಯಲ್ಲಿಯೇ ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವ ಬೆನಕಾ, ಐಎಎಸ್ ಪಾಸ್ ಆಗಬೇಕು ಅನ್ನೋದು ತಂದೆಯ ಕನಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಿರಂತರ ಅಭ್ಯಾಸ ಮಾಡ್ತಾ ಇದ್ದೆ. ತಂದೆಯ ಕನಸು ಈಡೇರಿಸಿದ್ದು ತುಂಬಾ ಖುಷಿಯಾಗಿದೆ. ನಾಲ್ಕು ವರ್ಷಗಳ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನಾನು ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದು ಕುಟುಂಬಕ್ಕೆ ಸಂತೋಷ ತಂದಿದೆ. ಶಾಲಾ ದಿನಗಳಿಂದಲೂ ಜಿಲ್ಲಾಧಿಕಾರಿಯಾಗಬೇಕು ಅನ್ನೊ ಕನಸು ಇತ್ತು. ವೈದ್ಯಾಧಿಕಾರಿ ಕೆಲಸದ ಜೊತೆ ನಿರಂತರ ಅಭ್ಯಸ ಮಾಡ್ತಾ ಇದ್ದೆ. ಒಂದು ಟೈಮ್ ಟೇಬಲ್ ಅನುಸಾರವಾಗಿ ಪ್ರತಿದಿನ ಅಭ್ಯಸ ಮಾಡ್ತಿದ್ದೆ. ಐಎಎಸ್ ಪಾಸ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

2020ರಲ್ಲಿ ಕೆಪಿಎಸ್ಸಿಯಲ್ಲಿ ಆರನೇ ರ್ಯಾಂಕ್ ಪಡೆದಿದ್ದರು. ಸದ್ಯ ಬೆಂಗಳೂರಿನ ಮಾಗಡಿಯಲ್ಲಿ ವೈದ್ಯಾದಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ UPSC ಪಾಸಾಗುವ ಗುರಿಹೊಂದಿದ್ದ ಬೆನಕ ಪ್ರಸಾದ್ 26ನೇ ವಯಸ್ಸಿಗೆ ಗುರಿ ತಲುಪಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಐಎಎಸ್ ಪರೀಕ್ಷೆಯಲ್ಲಿ ಕೊಡಗಿನ ಅಭ್ಯರ್ಥಿಗೆ 222 ನೇ ರಾಂಕ್
ನೆಲಜಿ ಮೂಲದ ಮುಂಡಂಡ ರಾಜೇಶ್ ಪೊನ್ನಪ್ಪ 222 ನೇ ರಾಂಕ್ ಪಡೆದಿದ್ದಾರೆ. ಕುಟುಂಬದೊಂದಿಗೆ ಬೆಂಗಳೂರಿನಲ್ಲಿ‌ ನೆಲೆಸಿರೋ ರಾಜೇಶ್ ಕಳೆದ‌ ಎರಡು ವರ್ಷಗಳಿಂದ ಐಎಎಸ್ ಗಾಗಿ ತಯಾರಿ ನಡೆಸಿದ್ದರು. ಮೆಕಾನಿಕಲ್‌ ಎಂಜಿನಿಯರಿಂಗ್ ಪದವೀಧರರಾಗಿರುವ ರಾಜೇಶ್ ಯುಪಿಎಸ್ಸಿಯಲ್ಲಿ ಐಪಿಎಸ್ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಮನೋಜ್ ರಾಮನಾಥ ಹೆಗಡೆಗೆ 213 ನೇ ರಾಂಕ್
ಶಿರಸಿ ಲೈಯನ್ ಸ್ಕೂಲ್‌ನಲ್ಲಿ ಎಸ್ಎಸ್ಎಲ್ಸಿ ಓದಿದ್ದ ಮನೋಜ್ ರಾಮನಾಥ ಹೆಗಡೆ ಐಎಎಸ್ ಪಾಸಾಗಿದ್ದಾರೆ. ಮನೋಜ್ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಆಟಗಾರ. ಮನೋಜ್ ಅವರು ಬಿಎಸ್‌ಸಿ ಅಗ್ರಿಕಲ್ಚರ್ ಪದವಿದರರು. ಇದನ್ನೂ ಓದಿ: IPL 2022: ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್: ಒಂದೇ ದಿನ…ಇಬ್ಬರದ್ದು ಒಂದೇ ಕಥೆ

ವಿಜಯಪುರ ಜಿಲ್ಲೆಯ ಯುವತಿಗೆ 479 ರಾಂಕ್
ವಿಜಯಪುರ ಜಿಲ್ಲೆಯ ಸಿದ್ದಾರೂಢ ನಗರದ ಸವಿತಾ ಸಿದ್ದಪ್ಪ ಗೋಟ್ಯಾಳ 479 ರಾಂಕ್ ಪಡೆದಿದ್ದಾರೆ. ಹೀಗಾಗಿ ಸವಿತಾರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಸವಿತಾ ತಂದೆ ತಾಯಿ ಪರಸ್ಪರ ಸಿಹಿ ತಿನ್ನಿಸಿ ಮಗಳ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಸದ್ಯ ಸವಿತಾ ಬೆಂಗಳೂರಿನಲ್ಲಿದ್ದಾರೆ. ಸವಿತಾ 2019ರ ಯುಪಿಎಸ್ಸಿ ಪರೀಕ್ಷೆಯಲ್ಲಿ 626 ನೇ ರ್ಯಾಂಕ್ ಪಡೆದಿದ್ದರು.

ಸದ್ಯ ಸವಿತಾ ಬೆಂಗಳೂರಿನಲ್ಲಿ ಸಿಸಿಓ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2019ರ ಯುಪಿಎಸ್ಸಿಯಲ್ಲಿ 626 ನೇ ರ್ಯಾಂಕ್ ಪಡೆದು ಕೇಂದ್ರ ಸರ್ಕಾರದ ಇಂಡಿಯನ್ ಪಿ ಆ್ಯಂಡ ಟಿ ಅಕೌಂಟ್ಸ್ ಆ್ಯಂಡ್ ಫೈನಾನ್ಸ್ ಸರ್ವೀಸ್ ಸೇವೆಗೆ ತರಬೇತಿ ಪಡೆಯುತ್ತಿದ್ದಾರೆ. ಇದರ ಮಧ್ಯೆ 2021 ರ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಸವಿತಾ 479 ನೇ ರಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಸವಿತಾ ಹಿರಿಯ ಸಹೋದರಿ ಅಶ್ವಿನಿ ಗೋಟ್ಯಾಳ ಕೂಡ ಐಪಿಎಸ್ ಅಧಿಕಾರಿ. 2016ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಶ್ವಿನಿ ಗೋಟ್ಯಾಳ 625 ನೇ ರಾಂಕ್ ಪಡೆದಿದ್ದರು. ಸದ್ಯ ಅಶ್ವಿನಿ ಪಂಜಾಬಿನ‌ ಚಂಡೀಗಡದಲ್ಲಿ ಎಸ್ಎಸ್ಪಿ ಗ್ರೇಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಸಹೋದರ ಕಾರ್ತಿಕ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಸವಿತಾ ಸಿದ್ದಪ್ಪ

ಎರಡು ಕಣ್ಣು ಕಾಣಿಸದ ಕೆಟಿ ಮೇಘನಾ 425ನೇ ರಾಂಕ್  
ಪಿರಿಯಾಪಟ್ಟಣದ ಕುಡುಕೂರು ನಿವಾಸಿ ಕೆಟಿ ಮೇಘನಾ ಯುಪಿಎಸ್ಸಿ ಪರೀಕ್ಷೆಯಲ್ಲಿ 425ನೇ ರಾಂಕ್ ಪಡೆದಿದ್ದಾರೆ. ಮೇಘನಾಗೆ ಎರಡು ಕಣ್ಣು ಕಾಣಿಸುವುದಿಲ್ಲ. ಸದ್ಯ ಬೆಂಗಳೂರಿನ ಕೆಜೆ ಹಳ್ಳಿಯಲ್ಲಿಯಲ್ಲಿ ಸಹಾಯಕ ಖಜಾನೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 465 ರಾಂಕ್ ಪಡೆದಿದ್ದ ಮೇಘನಾ ಈಗ ಮತ್ತೆ 425ನೇ ರಾಂಕ್ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕುಟುಂಬದ ಜೊತೆ ನೆಲೆಸಿದ್ದಾರೆ.

250ನೇ ಸ್ಥಾನ ಪಡೆದ ಸಾಹಿತ್ಯ 
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ದೇಶದಲ್ಲಿ 250ನೇ ಸ್ಥಾನ, ರಾಜ್ಯಕ್ಕೆ 10 ರಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿ 2016ರಿಂದ ಐಎಎಸ್ ತರಬೇತಿ ಪಡೆಯುತ್ತಿದ್ದ ಸಾಹಿತ್ಯ. ಆರು ವರ್ಷಗಳ ನಿರಂತರ ಪರಿಶ್ರಮದಿಂದ ಪರೀಕ್ಷೆ ಪಾಸ್ ಮಾಡಿದ್ದಾರೆ. ಮಗಳ ಸಾಧನೆಗೆ ಸಿಹಿ ತಿನ್ನಿಸಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಐದು ಬಾರಿ ಪರೀಕ್ಷೆ ಬರೆದಿದ್ದು ಈ ಸಾರಿ ಪಾಸ್ ಆಗಿರುವುದು ಖುಷಿಯಾಗ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮೊದಲ ಆಧ್ಯತೆ ನೀಡುತ್ತೇನೆ. ಕುಟುಂಬಸ್ಥರಿಗೆ ಮತ್ತು ಕಲಿಸಿದ ಗುರುಗಳಿಗೆ ಧನ್ಯವಾದ ಎಂದು ಸಾಹಿತ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ

ಮೊದಲ ಅಟೆಂಪ್ಟ್ ನಲ್ಲಿ ಯುಪಿಎಸ್​ಸಿ ಪಾಸಾದ ಶಿವಮೊಗ್ಗದ ಯುವಕ
ಶಿವಮೊಗ್ಗದ ಡಾ. ಪ್ರಶಾಂತ್ ಕುಮಾರ್ ಬಿ.ಓ ಅವರು ಮೊದಲ ಅಟೆಂಪ್ಟ್ ನಲ್ಲಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಇವರಿಗೆ 641ನೇ ರಾಂಕ್ ಬಂದಿದೆ. ಶಿವಮೊಗ್ಗದ ಎಲ್​ಬಿಎಸ್ ನಗರದ ನಿವಾಸಿಯಾಗಿರುವ ಡಾ ಪ್ರಶಾಂತ್ ಯಾವುದೇ ಕೋಚಿಂಗ್ ಗೆ ಹೋಗದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಮಾಡಿದ್ದಾರೆ. 2020 ರಲ್ಲಿ ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಡಾ. ಪ್ರಶಾಂತ್
ಶಿವಮೊಗ್ಗದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಬಿ‌. ಓಂಕಾರಪ್ಪ ಹಾಗೂ ರೇಖಾ ದಂಪತಿಯ ಪುತ್ರ.

Published On - 5:46 pm, Mon, 30 May 22