ಬೆಂಗಳೂರು: ದಿನ ನಿತ್ಯ ಬಳಕೆ ಮಾಡುವ ಹಾಗೂ ಅತ್ಯಂತ ಅನಿವಾರ್ಯವಾಗಿರೋ ವಸ್ತುಗಳ ದರವನ್ನು ಏರಿಕೆ ಮಾಡಲಾಗಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ(GST Council Meeting) ಆಹಾರ ಉತ್ಪನ್ನ ಸೇರಿ ಪ್ರಮುಖ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿತ್ತು. ಜುಲೈ 18ರ ಸೋಮವಾರದಿಂದ ವಸ್ತುಗಳ ಮೇಲೆ ಜಿಎಸ್ಟಿ(GST) ಜಾರಿಯಾಗಿದ್ದು, ಇದ್ರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ. ಇನ್ನು ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್ಟಿ ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಪ್ಯಾಕ್ ಮಾಡಿದ ಆಹಾರ ವಸ್ತುಗಳ ಮೇಲೆ GST ಹಾಕಲಾಗಿದೆ. ಆದ್ರೆ ಹಾಲಿನ ಮೇಲೆ ಯಾವುದೇ ಜಿಎಸ್ಟಿ ಹಾಕಿಲ್ಲ. ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ 5% ಜಿಎಸ್ಟಿ ಇದೆ. ಅದನ್ನು ಕ್ಲೇಮ್ ಮಾಡಲು ಅವಕಾಶವಿದೆ ಎಂದಿದ್ದರು. ಆದ್ರೆ ಈಗ ಕೆಎಂಎಫ್(KMF) ನೂತನ ದರ ಜಾರಿ ಮಾಡಿದೆ.
5% ಜಿಎಸ್ಟಿ ಸೇರಿಸಿ ಕೆಎಂಎಫ್ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ. ಇಂದಿನ ದರದಲ್ಲಿ ಕೊಂಚ ದರ ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್.ಟಿ, (ಸರಕು ಮತ್ತು ಸೇವಾ ತೆರಿಗೆ) ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾರಿಗೆ ಬರುವಂತೆ ‘ನಂದಿನಿ’ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೊಟ್ಟಣಗಳ ಮಾರಾಟ ದರವನ್ನು ಪರಿಷ್ಕರಿಸಿದ್ದು, ಅದನ್ನು ಹಿಂಪಡೆದು ಗ್ರಾಹಕರ ಹಿತ ದೃಷ್ಟಿಯಿಂದ ದರಗಳನ್ನು ಮತ್ತೊಮ್ಮೆ ಮರುಪರಿಷ್ಕರಣೆ ಮಾಡಿ ಕೆಎಂಎಫ್ ಹೊಸ ಪಟ್ಟಿ ಬಿಡುಗಡೆ ಮಾಡಿದೆ.
ಕೆಎಂಎಫ್ನ ನೂತನ ದರ ಪಟ್ಟಿ ಇಲ್ಲಿದೆ
Published On - 7:46 pm, Mon, 18 July 22