ಮಲ್ಲೇಶ್ವರಂನಲ್ಲಿ ನಿರ್ಮಾಣವಾಗುತ್ತಿದೆ 1.11 ಕೋಟಿ ರೂ. ವೆಚ್ಚದ ನೂತನ ರಾಜೀವ್ ಗಾಂಧಿ ಪ್ರತಿಮೆ

ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ನೂತನ ರಾಜೀವ್ ಗಾಂಧಿ ಕಂಚಿನ ಪ್ರತಿಮೆಗೆ ಬರೋಬ್ಬರಿ 1.11 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ತಿಳಿದು ಬಂದಿದ್ದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ನಿರ್ಮಾಣವಾಗುತ್ತಿದೆ 1.11 ಕೋಟಿ ರೂ. ವೆಚ್ಚದ ನೂತನ ರಾಜೀವ್ ಗಾಂಧಿ ಪ್ರತಿಮೆ
ರಾಜೀವ್ ಗಾಂಧಿ

Updated on: Jan 30, 2024 | 7:10 AM

ಬೆಂಗಳೂರು, ಜ.30: ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗುತ್ತಿರುವ ಕಾಂಗ್ರೆಸ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ಕಂಚಿನ ಪ್ರತಿಮೆಗೆ ಅಂದಾಜು 1.11 ಕೋಟಿ ರೂ. ವೆಚ್ಚ ತಗುಲಲಿದೆ. ಕಾಂಕ್ರೀಟ್ ಪ್ರತಿಮೆಗೆ ಬದಲಾಗಿ ಹೊಸ ಪ್ರತಿಮೆ ನಿರ್ಮಾಣವಾಗಲಿದೆ. ಸುಭಾಷ್ ನಗರ ಜಂಕ್ಷನ್ ಅಥವಾ ರಾಜೀವ್ ಗಾಂಧಿ ಚೌಕ್ ಎಂದು ಕರೆಯಲಾಗುವ, ಈ ಸ್ಥಳವು ಗಾಂಧಿನಗರ (Gandhinagar) ವಿಧಾನಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ.

15ನೇ ಹಣಕಾಸು ಆಯೋಗದ ಕಾರ್ಯಕ್ರಮದಡಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೈಗೆತ್ತಿಕೊಂಡ 25 ಜಂಕ್ಷನ್‌ಗಳಲ್ಲಿ ಸುಭಾಷ್ ನಗರವೂ ಒಂದಾಗಿದ್ದರೆ, ಪ್ರತಿಮೆಯ ವೆಚ್ಚವನ್ನು ಬಿಬಿಎಂಪಿ ತನ್ನ ಸ್ವಂತ ಹಣವನ್ನು ಬಳಸಿ ಭರಿಸಲಿದೆ. ಈ ಹಿಂದೆ ಜಂಕ್ಷನ್‌ನಲ್ಲಿ ಸ್ಥಾಪಿಸಲಾಗಿದ್ದ ಕಾಂಕ್ರೀಟ್ ಮೂರ್ತಿಯನ್ನು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಈಗ ಕಂಚಿನ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಕೆಲಸವನ್ನು ಪಾಲಿಕೆಯ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್‌ಗೆ ವಹಿಸಲಾಗಿದೆ – ಸಿಂಗಲ್ ಬಿಡ್ಡರ್ ಆಗಿದ್ದ ಕಲ್ಯಾಣ್ ಇನ್‌ಫ್ರಾ ಪ್ರಾಜೆಕ್ಟ್ಸ್‌ಗೆ ನೀಡಲಾಗಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್‌ನಲ್ಲಿ ಈ ಕ್ರಮವನ್ನು ಟೀಕಿಸಿದ್ದಾರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಆದರೆ ನಮ್ಮ ನೆಲ ಮತ್ತು ಸಂಸ್ಕೃತಿಯನ್ನು ಅವಮಾನಿಸಿದರೂ ಅವರ ರಾಜಕೀಯ ಯಜಮಾನರನ್ನು ಮೆಚ್ಚಿಸಲು ಎಲ್ಲಾ ಹಣ ಲಭ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಅನುಮೋದಿಸಿದ ಸಂಸ್ಥೆ ಎಂದು ನಂಬಿಸಿ ಬೆಂಗಳೂರಿನ ಉದ್ಯಮಿಗೆ ಆರು ಲಕ್ಷ ವಂಚನೆ

ಮೋದಿ ಮತ್ತೊಮ್ಮೆ ಪ್ರಧಾನಿ ಆಗುವಂತೆ ಯಾಗ!

ಮೋದಿ ಮತ್ತೊಮ್ಮೆ ಪ್ರಧಾನಿ ಆಗುವಂತೆ ಬಿಜೆಪಿ ನಾಯಕರು ಮಹಾಯಾಗ ನಡೆಸಿದ್ರು. ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ‌ದಲ್ಲಿ ಕಳೆದ ನಾಲ್ಕು ದಿನಗಳಿಂದ ಅತಿರುದ್ರ ಮಾಹಾಯಾಗ ನಡೆಯಿತ್ತು. ಈ ಯಾಗದಲ್ಲಿ ಬಿಜೆಪಿ ನಾಯಕರಾದ ಬಿ.ಎಲ್. ಸಂತೋಷ್, ನಳೀನ್ ಕುಮಾರ್ ಕಟೀಲ್, ಆರಗ ಜ್ಞಾನೇಂದ್ರ, ಬಿ.ವೈ.ರಾಘವೇಂದ್ರ ಭಾಗಿಯಾಗಿದ್ರು. ನಿನ್ನೆ ಅತಿರುದ್ರ ಮಹಾಯಾಗ ಸಂಪನ್ನಗೊಳಿಸಲಾಯ್ತು.

ಬಿವೈವಿಗೆ ಬೆಳ್ಳಿ ಗದೆ ನೀಡಿ ಸನ್ಮಾನ!

ಕಲಬುರಗಿ ನಗರ, ಗ್ರಾಮಾಂತರ ಘಟಕದ ಬಿಜೆಪಿ ಅಧ್ಯಕ್ಷರ ಪದಗ್ರಹಣದಲ್ಲಿ ಬಿವೈವಿ ಭಾಗಿಯಾಗಿದ್ರು. ಈ ವೇಳೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರರನ್ನ ಅಭಿನಂದಿಸಲಾಯ್ತು. ಕಲಬುರಗಿಯ ಎನ್​ವಿ ಕಾಲೇಜು ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿವೈವಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯ್ತು. ಸಮಾರಂಭಕ್ಕೂ ಮುನ್ನ ಶರಣ ಬಸವೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮಾಡಲಾಯ್ತು. ಸಭೆಯಲ್ಲಿ ಸಂಸದ ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮೂಡ್ ಮತ್ತಿತರರು ಭಾಗಿಯಾಗಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ