ಐಸಿಸ್​ ನಂಟು: ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಿದ ಎನ್​ಐಎ

| Updated By: ವಿವೇಕ ಬಿರಾದಾರ

Updated on: Dec 09, 2023 | 12:01 PM

ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಶನಿವಾರ ಬೆಳ್ಳಂ ಬೆಳಿಗ್ಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನ ಪುಲಕೇಶಿ ನಗರದ ಮನೆಯೊಂದರ ಮೇಲೆ ದಾಳಿ ಮಾಡಿದ್ದು, ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ಐಸಿಸ್​ ನಂಟು: ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಿದ ಎನ್​ಐಎ
ಎನ್​ಐಎ
Follow us on

ಬೆಂಗಳೂರು, ಡಿಸೆಂಬರ್​ 09: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಂದು (ಡಿ.09) ಬೆಳ್ಳಂ ಬೆಳಿಗ್ಗೆ ಕರ್ನಾಟಕ (Karnataka) ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಎನ್​ಐಎ ಅಧಿಕಾರಿಗಳು ಬೆಂಗಳೂರಿನಲ್ಲೂ ದಾಳಿ ನಡೆಸಿದ್ದು, ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಅಲಿ ಅಬ್ಬಾಸ್ ಬಂಧಿತ ಶಂಕಿತ ಉಗ್ರ. ಶಂಕಿತ ಉಗ್ರರನು ಐಸಿಸ್​ ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್​ಐಎ ದಾಳಿ ನಡೆಸಿದೆ.

ಎನ್​ಐಎ ಅಧಿಕಾರಿಗಳು ನಸುಕಿನ ಜಾವ 5:30 ಸುಮಾರಿಗೆ ಬೆಂಗಳೂರಿನ ಪುಲಿಕೇಶಿನಗರದ ಮೋರ್ ರಸ್ತೆಯ ಬಿಲ್ಡಿಂಗ್​​ವೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್​ ಮನೆ ಮೇಲೆ ದಾಳಿ ನಡೆಸಿದರು. ಶಂಕಿತ ಉಗ್ರ ಅಲಿ ಅಬ್ಬಾಸ್​  ನಗರದಲ್ಲಿ ಉರ್ದು ಶಾಲೆ ನಡೆಸುತ್ತಿದ್ದನು. ಶಂಕಿತ ಉಗ್ರನಿಂದ 16 ಲಕ್ಷ 42 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಶಂಕಿತ ಉಗ್ರ ಬೆಂಗಳೂರಿನಲ್ಲಿ ಡಾಟಾ ಕನ್ಸಲ್‌ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದನು.

ಅಲಿ ಅಬ್ಬಾಸ್ ಮೂಲತಃ ಮುಂಬೈ ನಿವಾಸಿಯಾಗಿದ್ದಾನೆ. ನಾಲ್ಕು ವರ್ಷದ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ದಂಪತಿ ಹಾಗೂ ಮೂವರು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಲಿ ಅಬ್ಬಾಸ್​ ಡಾಟಾ ಕನ್ಸಲ್‌ಟೆಂಟ್‌ ಆಗಿ ಒಂದು ವರ್ಷದಿಂದ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಕೊರೊನಾ ಸಂದರ್ಭದಲ್ಲಿ ಅಲಿ ಅಬ್ಬಾಸ್ ಕೆಲಸ ಬಿಟ್ಟಿದ್ದನು. ಪತ್ನಿ ನ್ಯೂಟ್ರಿ ಕೇರ್ ಆಸ್ಪತ್ರೆ ನಡೆಸುತ್ತಿದ್ದಾಳೆ.

ಇದನ್ನೂ ಓದಿ: ಕರ್ನಾಟಕ, ಮಹರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್​​ಐಎ ದಾಳಿ: 13 ಜನರ ಬಂಧನ

ಅಲಿ ಅಬ್ಬಾಸ್​​ ಸ್ಥಳೀಯ ಜನರನ್ನು ಸೇರಿಸಿಕೊಂಡು ವಾಟ್ಸಪ್ ಗ್ರೂಪ್​ಗಳನ್ನು ಮಾಡಿದ್ದನು. ಈ ಗ್ರೂಪ್​​ನಲ್ಲಿ ಅಲಿ ಅಬ್ಬಾಸ್​ ಪರವಾಗಿ ಮಾತನಾಡುವವರನ್ನು ಬೇರೋಂದು ಗ್ರೂಪ್​ಗೆ ಆ್ಯಡ್ ಮಾಡುತ್ತಿದ್ದನು. ನಂತರ ಆ ಗ್ರೂಪ್​ಗಳಲ್ಲಿ ಪ್ರಚೋದನೆ ನೀಡುವ ಹೇಳಿಕೆ ಕಳುಹಿಸುತ್ತಿದ್ದನು.  ಸ್ಥಳೀಯವಾಗಿ ತೀರಾ ಹತ್ತಿರದವರಿಗೆ ವಾಟ್ಸಪ್ ಉಪಯೋಗಿಸಬೇಡಿ ಎಂದು ಹೇಳುತ್ತಿದ್ದನು. ವಾಟ್ಸಪ್​​ ಬದಲಿಗೆ ಟೆಲಿಗ್ರಾಂ ಬಳಸಿ, ಇದು ಸೇಫ್ಟಿ ಇರತ್ತೆ ಎಂದು ಸೂಚನೆ ನೀಡುತ್ತಿದ್ದನು.  ಸದ್ಯ ಎನ್​ಐಎ ಅಧಿಕಾರಿಗಳು ಅಲಿ ಅಬ್ಬಾಸ್​​ ಮನೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

ಅಲಿ ಅಬ್ಬಾಸ್ ಕುಟುಂಬ ಕಳೆದ ಮೂರು ವರ್ಷಗಳಿಂದ ಇದೇ ಬಿಲ್ಡಿಂಗ್ ನಲ್ಲಿ ವಾಸವಿದ್ದಾರೆ. ಸಾಫ್ಟ್ ಆಗಿ ಸ್ಥಳೀಯರೊಂದಿಗೆ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪುಟ್ಟ ಮಗುವಿನೊಂದಿಗೆ ರಸ್ತೆಯಲ್ಲಿ ಓಡಾಡುವಾಗ, ಮಗುವನ್ನು ಶಾಲೆಗೆ ಕಳುಹಿಸಿವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಜೊತೆ ಮಾತನಾ ಡುತ್ತಿದ್ದರು. ಅಲಿ ಅಬ್ಬಾಸ್ ಯಾವ ಕೆಲಸ ಮಾಡುತ್ತಿದ್ದರು ಅನ್ನೋದರ ಬಗ್ಗೆ ಹೇಳಿರಲಿಲ್ಲ ಎಂದು ಸ್ಥಳೀಯರಾದ ವಿಜಯಲಕ್ಷ್ಮಿ ಹೇಳಿದರು.

ಅಲಿ ಅಬ್ಬಾಸ್​ ನಮ್ಮ ಜೊತೆ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಅವರ ಪತ್ನಿ ಡಾಕ್ಟರ್, ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ನಾವು ನೋಡುತ್ತಿದ್ದೇವೆ. ಬೈಕ್ ಸರ್ವಿಸ್ ಮಾಡಿಸಲು ಒಮ್ಮೆ ತಂದಿದ್ದರು. ಆಗ ಅಬ್ಬಾಸ್ ಜೊತೆಗೆ ಮಾತನಾಡಿದ್ದೆ. ಆನಂತರ ಅವರೊಂದಿಗೆ ಮಾತನಾಡಿಲ್ಲ. ಸ್ಥಳೀಯರೊಂದಿಗೆ ಹೆಚ್ಚಾಗಿ ಅಲಿ ಮಾತನಾಡುತ್ತಿರಲಿಲ್ಲ ಎಂದು ಅಬ್ಬಾಸ್ ಮನೆ ಪಕ್ಕದಲ್ಲಿ ಬೈಕ್ ಸರ್ವಿಸ್ ಸೆಂಟರ್ ನಡೆಸುತ್ತಿರುವ ಸುರೇಶ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:09 am, Sat, 9 December 23