ಬೆಂಗಳೂರು, ಫೆ.01: ಐಎಸ್ಐಎಸ್ (ISIS) ಸಂಘಟನೆಗೆ ಬೆಂಬಲ ನೀಡುತ್ತಿದ್ದ ಉಗ್ರ(Terrorist)ಅಬೂಬ್ಬಕ್ಕರ್ ಬಾಗ್ದಾದಿ ಎಂಬಾತನಿಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ‘SAMI WITNESS’ ಎಂಬ ಟ್ವಿಟರ್ ಖಾತೆ ಹೊಂದಿದ್ದ ಉಗ್ರ ಬಾಗ್ದಾದಿ, ಅದರ ಮೂಲಕ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದ್ದ. ಇದರ ಖಚಿತ ಮಾಹಿತಿ ಬೆನ್ನಲ್ಲೇ ಆತನನ್ನು ಬಂಧಿಸಲಾಗಿತ್ತು. ಇದೀಗ ಆತನಿಗೆ ಕೋರ್ಟ್, ಶಿಕ್ಷೆ ವಿಧಿಸಿದೆ.
ಸಿಸಿಬಿ ಟೀಂ ಗಂಗಮ್ಮನಗುಡಿಯಲ್ಲಿ ಮೆಹದಿ ಮಸ್ರೂರ್ ಬಿಸ್ವಾಸ್ ಎಂಬಾತನನ್ನು ಬಂಧಿಸಿತ್ತು. ಬಂಧಿತನಾಗಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ ಕೊಟ್ಟ ಮಾಹಿತಿ ಮೇರೆಗೆ ಎನ್ಐಎ ತಂಡ 2016ರಲ್ಲಿ ಅಬ್ಬೂಬ್ಬಕರ್ ಬಾಗ್ದಾದಿಯನ್ನು ಬಂಧಿಸಿದ್ದರು. ಬಳಿಕ ತೀವ್ರ ವಿಚಾರಣೆ ನಡೆಸಲಾಯಿತು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ವಿಶೇಷ ಕೋರ್ಟ್ 10 ವರ್ಷ ಜೈಲು, 2 ಲಕ್ಷದ 15 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟ ಮಾಡಿದೆ.
ಇದನ್ನೂ ಓದಿ:ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ರಾ ಐಎಸ್ಐಎಸ್ ಉಗ್ರಗಾಮಿಗಳು? ಟಿವಿ9ಗೆ ಸಿಕ್ಕಿದೆ ಸ್ಪೋಟಕ ಅಂಶ
ಇತ್ತೀಚಿಗೆ ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ರನ್ನು ಕೊಲ್ಲುವುದಾಗಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದನು. ಗ್ಯಾಂಗ್ಸ್ಟರ್ ವಿರುದ್ಧ ಪಂಜಾಬ್ ಪೊಲೀಸರು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಿಜಿಪಿ ಗೌರವ್ ಯಾದವ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Thu, 1 February 24