ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ(Coronavirus) ಮತ್ತೆ ತನ್ನ ಆಟ ಶುರು ಮಾಡಿದೆ. ಧಾರವಾಡ, ಹಾಸನ, ಆನೇಕಲ್ ಸೇರಿದಂತೆ ಕೆಲ ಕಡೆ ಈಗಾಗಲೇ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ ಇದರ ನಡುವೆ ಕೊವಿಡ್ ರೂಪಾಂತರಿ ‘ಒಮಿಕ್ರಾನ್’(Omicron) ವೈರಸ್ ಆತಂಕ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್(Lockdown) ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar) ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದ ಮುಂದೆ ಯಾವುದೇ ರೀತಿಯ ಲಾಕ್‌ಡೌನ್ ಪ್ರಸ್ತಾವನೆಯಿಲ್ಲ. ಲಾಕ್‌ಡೌನ್ ಬಗ್ಗೆ ವದಂತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಜನ ಬಹಳ ನಷ್ಟ ಅನುಭವಿಸುದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಎಚ್ಚರವಹಿಸಬೇಕು. ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಿಸಬಾರದು. ಮಾಧ್ಯಮಗಳು ಎಚ್ಚರಿಕೆ, ಜಾಗೃತಿ ಕೊಡುವ ಕೆಲಸ ಮಾಡ್ತಿವೆ. ಅದನ್ನ ಮುಂದುವರೆಸಲಿ ಎಂದಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಾಳೆ ಸುದೀರ್ಘ ಸಭೆ ಇದೆ. ನಾಳೆ ಬೆಳಗ್ಗೆ 10 ಗಂಟೆಗೆ ಸಭೆ ಆರಂಭಿಸುತ್ತೇವೆ. ತಾಂತ್ರಿಕ ಸಲಹಾ ಸಮಿತಿಗೂ ಸಭೆಗೆ ಆಹ್ವಾನಿಸಿದ್ದೇವೆ. ‘ಒಮಿಕ್ರಾನ್’ ಜಿನೋಮಿಕ್ಸ್ ಸೀಕ್ವೆನ್ಸ್ ಪತ್ತೆಯಾದ ಮೇಲೆ ಸರಿಯಾದ ಮಾಹಿತಿ ಸಿಗುತ್ತದೆ. ಈಗ 12 ದೇಶಗಳಲ್ಲಿ ‘ಒಮಿಕ್ರಾನ್’ ವೈರಸ್ ಪತ್ತೆಯಾಗಿದೆ. ಕಳೆದ 12 ದಿನಗಳಲ್ಲಿ ಆಫ್ರಿಕನ್ ದೇಶಗಳಿಂದ ರಾಜ್ಯಕ್ಕೆ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ‘ಒಮಿಕ್ರಾನ್’ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಆದ್ರೆ ಇದು ಅಷ್ಟೊಂದು ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ. ನಾಡಿಬಡಿತ ಹೆಚ್ಚಾಗುವುದು, ವಾಂತಿ, ಸುಸ್ತು ಸೋಂಕಿನ ಲಕ್ಷಣವಾಗಿದೆ. ಆದ್ರೆ ಇದು ಯಾವುದೇ ವರದಿಯಲ್ಲಿರುವ ಅಂಶಗಳಲ್ಲ. ಆಫ್ರಿಕನ್ ದೇಶದಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರು ನೀಡಿರುವ ಮಾಹಿತಿ ಇದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಬ್ಬರಿಗೆ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆ
ಇನ್ನು ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 63ವರ್ಷದ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ವೈರಸ್ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯ ಲ್ಯಾಬ್ ವರದಿ ಇಂದು ಬರಲಿದೆ. ಸಂಜೆ ವರದಿ ಬಂದ ಬಳಿಕ ಮಾಹಿತಿಯನ್ನ ನೀಡುತ್ತೇನೆ. ICMR ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಇದನ್ನೂ ಓದಿ: ಹಾಸನದಲ್ಲಿ 13 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ, ಆನೇಕಲ್ ಸುತ್ತಮುತ್ತ ಸೋಂಕು ಉಲ್ಬಣ
Published On - 11:11 am, Mon, 29 November 21