ಇನ್ನೂ ಸಿಕ್ಕಿಲ್ಲ ಕೋವಿಡ್ ರಿಸ್ಕ್ ಭತ್ಯೆ; ಇಂದಿನಿಂದ ರೆಸಿಡೆಂಟ್ ವೈದ್ಯರ ಮುಷ್ಕರ; ತುರ್ತು ಸೇವೆ-ಕೊವಿಡ್ ಸೇವೆ ಇರುತ್ತದಾ?

Karnataka News: ರೆಸಿಡೆಂಟ್ ವೈದ್ಯರ ಮುಷ್ಕರದಿಂದಾಗಿ ರಾಜ್ಯ ವ್ಯಾಪಿ ಒಪಿಡಿ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಜೀವ ಪಣಕ್ಕಿಟ್ಟು ಕೆಲಸ ಮಾಡಿದ ನಿವಾಸಿ ವೈದ್ಯರಿಗೆ ಇದುವರೆಗೂ ಕೋವಿಡ್ ರಿಸ್ಕ್ ಭತ್ಯೆ ಸಿಕ್ಕಿಲ್ಲ. ಶಸ್ತ್ರ ಚಿಕಿತ್ಸೆ ಕಲಿಯದೇ ಇದ್ರೂ ಫೀಸ್ ಕಡಿತ ಮಾತ್ರ ಮಾಡ್ತಿಲ್ಲ ಸರ್ಕಾರ. ನಿವಾಸಿ ವೈದ್ಯರು ಕೋವಿಡ್ ಚಿಕಿತ್ಸೆ ನೀಡೋದ್ರಲ್ಲಿ ಒಂದೂವರೆ ವರ್ಷ ಕಳೆದಿದ್ದಾರೆ.

ಇನ್ನೂ ಸಿಕ್ಕಿಲ್ಲ ಕೋವಿಡ್ ರಿಸ್ಕ್ ಭತ್ಯೆ; ಇಂದಿನಿಂದ ರೆಸಿಡೆಂಟ್ ವೈದ್ಯರ ಮುಷ್ಕರ; ತುರ್ತು ಸೇವೆ-ಕೊವಿಡ್ ಸೇವೆ ಇರುತ್ತದಾ?
ಇನ್ನೂ ಸಿಕ್ಕಿಲ್ಲ ಕೋವಿಡ್ ರಿಸ್ಕ್ ಭತ್ಯೆ; ರಾಜ್ಯಾದ್ಯಂತ ಇಂದಿನಿಂದ ರೆಸಿಡೆಂಟ್ ವೈದ್ಯರ ಮುಷ್ಕರ; ತುರ್ತು ಸೇವೆ-ಕೊವಿಡ್ ಸೇವೆ ಇರುತ್ತದಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 29, 2021 | 11:22 AM

ಬೆಂಗಳೂರು: ದೇಶ-ವಿದೇಶ ಸೇರಿದಂತೆ ರಾಜ್ಯದಲ್ಲೂ ಕೊರೊನಾ ಮಹಾಮಾರಿಯ ಮೂರನೆಯ ಅಲೆ ಧುತ್ತನೆ ಎದುರಾಗಿದೆ. ರಾಜ್ಯ ಸರಕಾರ ಸಹ ಮೂರನೆಯ ಅಲೆಯನ್ನು ಹಿಮ್ಮೆಟ್ಟಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಆದರೆ ಈ ಮಧ್ಯೆ ರಾಜ್ಯ ಸರ್ಕಾರ ಈ ಹಿಂದೆ ಕೋವಿಡ್​ ಕಾಲದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರೆಸಿಡೆಂಟ್ ವೈದ್ಯರುಗಳಿಗೆ ಸಲ್ಲಬೇಕಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನೂ ಇನ್ನೂ ನೀಡಿಲ್ಲವಂತೆ. ಹಾಗಾಗಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ ರೆಸಿಡೆಂಟ್ ವೈದ್ಯರು (Resident Doctor) ಮುಷ್ಕರ ಹೂಡಿದ್ದಾರೆ. ತುರ್ತು ಸೇವೆ ಮತ್ತು ಕೊವಿಡ್ ಸೇವೆಯನ್ನು ಹೊರತುಪಡಿಸಿ ಆಸ್ಪತ್ರೆ ಒಪಿಡಿ ಬಂದ್ ಮಾಡಿ ರೆಸಿಡೆಂಟ್ ವೈದ್ಯರು ಮುಷ್ಕರದಲ್ಲಿ ತೊಡಗಿದ್ದಾರೆ. ಹೀಗಾಗಿ ಆಸ್ಪತ್ರೆ ಒಪಿಡಿ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆಯಿದೆ. ಕೊವಿಡ್ ಮೂರನೇ ಅಲೆಯ ಆತಂಕದ ಮಧ್ಯೆ ನಿವಾಸಿ ವೈದ್ಯರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ತಮ್ಮ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅವರು ಸರ್ಕಾರದ ವಿರುದ್ಧ ಮುಷ್ಕರ ಹೂಡಿದ್ದಾರೆ (Karnataka Resident Doctors).

ರೆಸಿಡೆಂಟ್ ವೈದ್ಯರ ಮುಷ್ಕರದಿಂದಾಗಿ ರಾಜ್ಯ ವ್ಯಾಪಿ ಒಪಿಡಿ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಜೀವ ಪಣಕ್ಕಿಟ್ಟು ಕೆಲಸ ಮಾಡಿದ ನಿವಾಸಿ ವೈದ್ಯರಿಗೆ ಇದುವರೆಗೂ ಕೋವಿಡ್ ರಿಸ್ಕ್ ಭತ್ಯೆ ಸಿಕ್ಕಿಲ್ಲ. ಶಸ್ತ್ರ ಚಿಕಿತ್ಸೆ ಕಲಿಯದೇ ಇದ್ರೂ ಫೀಸ್ ಕಡಿತ ಮಾತ್ರ ಮಾಡ್ತಿಲ್ಲ ಸರ್ಕಾರ. ನಿವಾಸಿ ವೈದ್ಯರು ಕೋವಿಡ್ ಚಿಕಿತ್ಸೆ ನೀಡೋದ್ರಲ್ಲಿ ಒಂದೂವರೆ ವರ್ಷ ಕಳೆದಿದ್ದಾರೆ. ಕೊರೋನಾ ಅವಧಿಯಲ್ಲಿ ನಿವಾಸಿ ವೈದ್ಯರು ICU ಗಳಲ್ಲಿ ದಿನನಿತ್ಯ ಕೆಲಸ ಮಾಡಿದ್ದರು. ಸರ್ಕಾರದ ಆದೇಶ ಆಗಿದ್ದರೂ ಕೋವಿಡ್ ರಿಸ್ಕ್ ಭತ್ಯೆ ನೀಡಿಲ್ಲ. ಹೀಗಾಗಿ ರಾಜ್ಯದ ಒಟ್ಟು 6 ಸಾವಿರ ನಿವಾಸಿ ವೈದ್ಯರಿಂದ ಇಂದು ಮುಷ್ಕರ ನಡೆದಿದೆ.

ಚಾಮರಾಜನಗರದ ಸಿಮ್ಸ್​ ಆಸ್ಪತ್ರೆಗೆ ಬೀಗ: ಸರ್ಕಾರ ಕಿರಿಯ ವೈದ್ಯರಿಗೆ ಗೌರವಧನ ನೀಡದ ಹಿನ್ನೆಲೆ ಕೊರೊನಾ ವೇಳೆ ಮಾಡಿದ್ದ ಸೇವೆಗೆ ಗೌರವಧನ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಕಿರಿಯ ವೈದ್ಯರಿಂದ ಪ್ರತಿಭಟನೆ ನಡೆದಿದೆ. ಚಾಮರಾಜನಗರದ ಸಿಮ್ಸ್​ ಆಸ್ಪತ್ರೆಗೆ ಬೀಗ ಹಾಕಿ, ವೈದ್ಯರು ಧರಣಿ ನಡೆಸಿದ್ದಾರೆ. 6 ತಿಂಗಳ ಗೌರವ ಧನ ನೀಡುವಂತೆ ಆಗ್ರಹಿಸಿ, 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಾಮರಾಜನಗರ ತಾಲೂಕಿನ ಯಡಪುರ ಬಳಿಯ ಆಸ್ಪತ್ರೆ ಎದುರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Published On - 10:48 am, Mon, 29 November 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?