Covishield Vaccine: ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆ ನೋ ಸ್ಟಾಕ್: ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನರು ಪರದಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2022 | 3:45 PM

ಕೊರೊನಾ ಭೀತಿ ಹಿನ್ನೆಲೆ ಕೋವಿಶೀಲ್ಡ್​ಗೆ ಡಿಮ್ಯಾಂಡ್. ಆದರೆ ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆ ಅಭಾವ ಉಂಟಾಗಿದ್ದು, ಲಸಿಕಾ ಕೇಂದ್ರಗಳ ಬಳಿ 'ನೋ ಸ್ಟಾಕ್' ಎನ್ನಲಾಗುತ್ತಿದೆ.

Covishield Vaccine: ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆ ನೋ ಸ್ಟಾಕ್: ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನರು ಪರದಾಟ
ಪ್ರಾತಿನಿಧಿಕ ಚಿತ್ರ
Image Credit source: oneindia.com
Follow us on

ಬೆಂಗಳೂರು: ನೆರೆ ರಾಷ್ಟ್ರಗಳಲ್ಲಿ ಮಾಹಾಮಾರಿ ಕೊರೊನಾ (Coronavirus) ನರ್ತನ ಹೆಚ್ಚಾಗಿದ್ದು ರಾಜ್ಯದಲ್ಲೂ ಕೊರೊನಾ ಆತಂಕ ಹುಟ್ಟುಕೊಂಡಿದೆ. ಹೀಗಿರುವಾಗ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನರು ಪರದಾಡುವಂತ್ತಾಗಿದೆ. ಸಿಲಿಕಾನ್ ಸಿಟಿಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಇಲ್ಲ. ಕೋವಿಶಿಲ್ಡ್ ವ್ಯಾಕ್ಸಿನ್ ಲಭ್ಯ ಇಲ್ಲದ ಹಿನ್ನಲೆ ಲಸಿಕಾ ಕೇಂದ್ರಗಳು ಪರ್ಯಾಯವಾಗಿ ಕೋರ್ಬಿವ್ಯಾಕ್ಸ್ ಲಸಿಕೆ ನೀಡುತ್ತಿವೆ. ಕೋವಿಶಿಲ್ಡ್ ಪಡೆದವರು ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಶೀಲ್ಡ್​ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಆದರೆ ಲಸಿಕೆ ಮಾತ್ರ ಸಿಗುತ್ತಿಲ್ಲ. ಲಸಿಕಾ ಕೇಂದ್ರಗಳ ಬಳಿ ‘ನೋ ಸ್ಟಾಕ್’ ಬೋರ್ಡ್​ ಹಾಕಲಾಗಿದೆ. ಕೋವ್ಯಾಕ್ಸಿನ್, ಬೂಸ್ಟರ್ ಡೋಸ್ ಪಡೆವವರ ಸಂಖ್ಯೆ ಕೂಡ ಇಳಿಕೆಯಾಗಿದೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ಕೇವಲ 26 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಹಲವರು ಕೋವಿಶೀಲ್ಡ್ ಕೇಳಿ ವಾಪಸ್ ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ನೀಡಲು ಕೋವಿಶಿಲ್ಡ್ ಕೊರತೆ ಇದೆ ಎಂದ ಬಿಬಿಎಂಪಿ ಆಯುಕ್ತ, ಕೊರತೆ ಇಲ್ಲ ಎಂದ ಸಚಿವ

ಕೋವಿಶಿಲ್ಡ್ ಲಸಿಕೆ ಕೊರೆತೆಯಿದೆ: ತುಷಾರ್ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇತ್ತೀಚೆಗೆ ಮಾತನಾಡಿ, ನಮ್ಮಲ್ಲಿ ಹೆಚ್ಚಿನ ಜನರಿಗೆ ಬೂಸ್ಟರ್ ಡೋಸ್ ನೀಡಲು ಕೋವಿಶಿಲ್ಡ್ ಕೋವಿಡ್ 19 ಲಸಿಕೆ ಕೊರೆತೆಯಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಶಿಲ್ಡ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಮ್ಮಲ್ಲಿ ಕೋವಾಕ್ಸಿನ್ ಸ್ಟಾಕ್ ಇದೆ ಆದರೆ ಕೋವಿಶೀಲ್ಡ್ ಸ್ಟಾಕ್ ಇಲ್ಲ. ನಮ್ಮ ಹಿಂದಿನ ವ್ಯಾಕ್ಸಿನೇಷನ್ ಡ್ರೈವ್ ಸಮಯದಲ್ಲಿ, ಬೆಂಗಳೂರಿನಲ್ಲಿ ಶೇಕಡಾ 90 ರಷ್ಟು ಜನರು ಕೋವಿಶೀಲ್ಡ್​ನ್ನು ಪಡೆದಿದ್ದರೆ, ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ಕೋವಾಕ್ಸಿನ್ ಲಸಿಕೆಯನ್ನು ಪಡೆದಿದ್ದಾರೆ.

ಸದ್ಯ ಈಗ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅರ್ಹರಾದವರನ್ನು ಸಂಪರ್ಕಿಸಿ ಅವರಿಗೆ ಬೂಸ್ಟರ್ ಡೋಸ್ ಪಡೆಯಲು ವಿನಂತಿಸುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಹಾಗೂ ಅವರು ಜನರಿಗೆ ಕೊರೊನಾದಿಂದ ತಮ್ಮನ್ನು ಕಾಪಾಡಿಕೊಳ್ಳಲು ಫೇಸ್ ಮಾಸ್ಕನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Coronavirus Live Updates: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ; ಕೋರ್ಬಿವ್ಯಾಕ್ಸ್ ಪಡೆಯಲು ಜನರ ನಕಾರ

ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ ಎಂದ ಸುಧಾಕರ್

ಬೆಂಗಳೂರಿನ ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ ಮಾತನಾಡಿದ ಸಚಿವ ಡಾ.ಸುಧಾಕರ್​​​, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡೋಸ್​​​ ಇದೆ. ಕೊವಿಶೀಲ್ಡ್​, ಕೊವ್ಯಾಕ್ಸಿನ್​, ನೇಸಲ್​ ಲಸಿಕೆ ಇದೆ. ಇಂದು ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ಇದೆ. ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಸದ್ಯಕ್ಕೆ ಮಾಸ್ಕ್, ಕೊವಿಡ್ ಪಾಲನೆಗೆ ಸಲಹೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಕಠಿಣ ಕ್ರಮ ಜಾರಿ ಮಾಡುತ್ತೇವೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದಿದ್ದಾರೆ. ಆದ್ರೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆರೋಗ್ಯ ಸಚಿವರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಸಂಪರ್ಗ ಕೊರತೆ ಎದ್ದು ಕಾಣುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:43 pm, Wed, 28 December 22