ಪೈಪ್​ನಲ್ಲಿ ನೀರು ಬಾರದಿದ್ರೂ ಕಟ್ಟಬೇಕು ಬಿಲ್! ಕಾವೇರಿ ನೀರಿಗಾಗಿ ಜಲಮಂಡಳಿಯ ವಿರುದ್ಧ ಜನರ ಕಿಡಿ

| Updated By: ಆಯೇಷಾ ಬಾನು

Updated on: Jan 11, 2024 | 4:10 PM

ಸುಂಕದಕಟ್ಟೆಯ ಮಹದೇಶ್ವರನಗರ ಏರಿಯಾದ ಜನರಿಗೆ ಸಮಯಕ್ಕೆ ಸರಿಯಾಗಿ ನೀರು ಬರೊಲ್ಲ, ಆದ್ರೆ ತಿಂಗಳಿಗೆ ಕರೆಕ್ಟ್ ಆಗಿ ಬಿಲ್ ಮಾತ್ರ ಬರುತ್ತೆ. ಇದರಿಂದ ಇಲ್ಲಿನ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಏನು ಪ್ರಯೋಜನವಾಗಿಲ್ಲ ಅಂತಾ ಕಿಡಿಕಾರಿದ್ದಾರೆ.

ಪೈಪ್​ನಲ್ಲಿ ನೀರು ಬಾರದಿದ್ರೂ ಕಟ್ಟಬೇಕು ಬಿಲ್! ಕಾವೇರಿ ನೀರಿಗಾಗಿ ಜಲಮಂಡಳಿಯ ವಿರುದ್ಧ ಜನರ ಕಿಡಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.11: ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅಂತಾ ಸರ್ಕಾರ ಮನೆ ಮನೆಗೆ ಕಾವೇರಿ ನೀರಿನ ಪೈಪ್ ಲೈನ್ ಮಾಡಿದೆ. ಆದರೆ ಬೆಂಗಳೂರಿನ ಸುಂಕದಕಟ್ಟೆ (Sunkadakatte) ಸಮೀಪದಲ್ಲಿರೋ ಮಹದೇಶ್ವರನಗರ ಜನರು ಪೈಪ್​ನಲ್ಲಿ ನೀರು ಬರಲಿಲ್ಲ ಅಂದ್ರು ಬಿಲ್ (Water Bill) ಕಟ್ಟಬೇಕು ಅಂತಾ ಆರೋಪ ಮಾಡ್ತಿದ್ದಾರೆ. ನೀರು ಬಾರದೇ ಇರುವುದರಿಂದ ಸುಸ್ತಾದ ಜನರು, ಜಲಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೀಟರ್ ಓಡಿಲ್ಲ, ನೀರು ಬಂದಿಲ್ಲ ಆದ್ರೂ ತಿಂಗಳು ತಿಂಗಳು ಬಿಲ್ ಕಟ್ಟೋದು ತಪ್ಪಿಲ್ಲ. ಸುಂಕದಕಟ್ಟೆಯ ಮಹದೇಶ್ವರನಗರಕ್ಕೆ ಹೋದರೆ ಅಲ್ಲಿನ ಜನರಿಂದ ಬರುವ ಮಾತುಗಳಿವು. ಈ ಏರಿಯಾದಲ್ಲಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಕೊಡೋಕೆ ಜಲಮಂಡಳಿ ಪೈಪ್ ಲೈನ್ ಮಾಡಿದೆ, ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ನೀರು ಬರ್ತಿಲ್ಲ ಅಂತಾ ಆರೋಪಿಸಿರೋ ಸ್ಥಳೀಯರು, ನೀರು ಬಾರದಿದ್ರೂ ಬಿಲ್ ಕಟ್ಟಬೇಕು ಅಂತಾ ಕಿಡಿಕಾರಿದ್ದಾರೆ.

ಇನ್ನು ಸುಂಕದಕಟ್ಟೆಯ ಮಹದೇಶ್ವರನಗರ ಏರಿಯಾದ ಜನರಿಗೆ ಸಮಯಕ್ಕೆ ಸರಿಯಾಗಿ ನೀರು ಬರೊಲ್ಲ, ಆದ್ರೆ ತಿಂಗಳಿಗೆ ಕರೆಕ್ಟ್ ಆಗಿ ಬಿಲ್ ಮಾತ್ರ ಬರುತ್ತೆ. ಇದರಿಂದ ಇಲ್ಲಿನ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಏನು ಪ್ರಯೋಜನವಾಗಿಲ್ಲ ಅಂತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೀದರ್: ಜಮೀನು ವಿಚಾರಕ್ಕೆ 2 ಕುಟುಂಬಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಇತ್ತ ಯಾಕೆ ಹೀಗೆ ಸಮಸ್ಯೆಯಾಗ್ತಿದೆ ಅಂತಾ ಜಲಮಂಡಳಿಯ ಅಧಿಕಾರಿಗಳನ್ನ ಕೇಳಿದ್ರೆ, ನಾವು ನಮ್ಮ ಪ್ರಯತ್ನ ಮೀರಿ ಕೆಲಸ ಮಾಡ್ತೀದ್ದೇವೆ. ಪೈಪ್ ಲೈನ್ ನಲ್ಲಿ ಕಲ್ಲು ಸಿಕ್ಕಿಕೊಂಡಿತ್ತು, ಬಿಬಿಎಂಪಿ ಜೊತೆ ಹೆಣಗಾಡಿ ಎಲ್ಲವನ್ನೂ ಸರಿಪಡಿಸಿದ್ದೇವೆ , ನೀರು ಸರಬರಾಜಿನಲ್ಲಿ ಏನೂ ಸಮಸ್ಯೆ ಇಲ್ಲ ಅಂತಿದ್ದಾರೆ. ನೀರು ಬಾರದಿದ್ರೂ ಬಿಲ್ ಬರ್ತಿದೆ ಅಂದ್ರೆ , ಹಾಗೇನೋ ಇಲ್ಲ ಅಂತಾ ಸಬೂಬು ನೀಡ್ತಿದ್ದಾರೆ.

ಒಟ್ಟಿನಲ್ಲಿ ನೀರಿಲ್ಲ ಅಂತಾ ಪರದಾಡೋ ಸ್ಥಿತಿ ಒಂದೆಡೆಯಾದ್ರೆ, ಮತ್ತೊಂದೆಡೆ ನೀರು ಬಾರದಿದ್ರೂ ಬಿಲ್ ಕಟ್ಟಬೇಕಾದ ಸ್ಥಿತಿ ಇರೋದರಿಂದ ನಿವಾಸಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಸದ್ಯ ಜಲಮಂಡಳಿ ಅಧಿಕಾರಿಗಳು ಸಮಸ್ಯೆ ಸರಿಪಡಿಸಿದ್ದೇವೆ ನೀರು ಬರುತ್ತೆ ಅಂತಾ ಭರವಸೆ ನೀಡ್ತಿದ್ದು, ಅಧಿಕಾರಿಗಳು ಕೊಟ್ಟ ಮಾತಿನಂತೆ ಜನರ ಸಮಸ್ಯೆ ಬಗೆಹರಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ