AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ; ಏನಿರುತ್ತೆ, ಏನಿರಲ್ಲ?

ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತರಲು ಉದ್ದೇಶಿಸಿರುವ ಕಾಯ್ದೆ ರದ್ದಿಗೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಜನವರಿ 16ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಬಂದ್ ಗೆ ಕರೆ ಕೊಟ್ಟಿದೆ.

ಜನವರಿ 16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ; ಏನಿರುತ್ತೆ, ಏನಿರಲ್ಲ?
ಸಾಂದರ್ಭಿಕ ಚಿತ್ರ
Kiran Surya
| Updated By: ಆಯೇಷಾ ಬಾನು|

Updated on: Jan 11, 2024 | 2:52 PM

Share

ಬೆಂಗಳೂರು, ಜ.11: ಕೇಂದ್ರ ಸರ್ಕಾರದ ಹಿಟ್ ಐಂಡ್ ರನ್ ಕಾನೂನು(Hit and Run Case), ನಯಾ ರೂಲ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ ವಿರುದ್ಧ ಸಿಡಿದೆದ್ದಿರೋ ಲಾರಿ ಓನರ್ಸ್ ಅಸೋಸಿಯೇಷನ್(Lorry owners association)  ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಜ.16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದ್ದಾರೆ.

ಕೇಂದ್ರದ ಹಿಟ್​​​ ಆ್ಯಂಡ್​​​ ರನ್​​​ ಕಾಯ್ದೆಯನ್ನ ನಾವು ಖಂಡಿಸ್ತಿದ್ದೇವೆ. ಈ ಕಾಯ್ದೆಯಿಂದ ಲಾರಿ ಮಾಲೀಕ, ಚಾಲಕರಿಗೆ ತೊಂದರೆ ಆಗುತ್ತೆ. ಕಾಯ್ದೆಯಡಿ ಲಕ್ಷ ಲಕ್ಷ ದಂಡ ಕಟ್ಟಲು ಚಾಲಕರಿಂದ ಅಸಾಧ್ಯ. ಮುಷ್ಕರದಿಂದ 6 ರಿಂದ 8 ಲಕ್ಷ ಲಾರಿ ಸಂಚಾರ ನಿಲ್ಲಲಿದೆ. ಅಗತ್ಯ ವಸ್ತು ಸಾಗಣೆ ಬಿಟ್ಟು ಎಲ್ಲಾ ಲಾರಿ ಸಂಚಾರ ಬಂದಾಗುತ್ತೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಹೇಳಿದರು.

ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತರಲು ಉದ್ದೇಶಿಸಿರುವ ಕಾಯ್ದೆ ರದ್ದಿಗೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಜನವರಿ 16ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಬಂದ್ ಗೆ ಕರೆ ಕೊಟ್ಟಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಯಿಂದ ಅಯೋಧ್ಯೆಗೆ 11 ವಿಶೇಷ ರೈಲು

ಯಾಕೆ ವಿರೋಧ?

ಹಿಟ್ ಅ್ಯಂಡ್ ರನ್ ಪ್ರಕರಣಗಳಿಗೆ  ಭಾರತೀಯ ನ್ಯಾಯ ಸಂಹಿತೆಯಡಿ ರೂಲ್ಸ್‌  ಜಾರಿ. ಈ ಹಿಂದೆ ಐಪಿಸಿ ಸೆಕ್ಷನ್ ಅಡಿ 2 ಯಾರಾದ್ರೂ ಸಾವನ್ನಪ್ಪಿದ್ರೆ 2 ವರ್ಷ ಜೈಲು ಶಿಕ್ಷೆ ಇತ್ತು. ಇದೀಗ ಹೊಸ ಕಾನೂನಿನಡಿ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಸೇರಿದಂತೆ  7 ಲಕ್ಷದವರೆಗೆ ದಂಡದ ಪ್ರಸ್ತಾಪ. ಅಪಘಾತದ ಬಳಿಕ ಓಡಿ ಹೋಗದೇ ಘಟನಾ ಸ್ಥಳದಲ್ಲೇ ಇದ್ದರೂ ಕೂಡಾ 5 ವರ್ಷ ಜೈಲು ಶಿಕ್ಷೆ. ಇದ್ರಿಂದ  ಲಾರಿ, ಟ್ರಕ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಲಾರಿ ಮಾಲೀಕರನ್ನಾಗಲೀ ಅಥವಾ ಈ ಉದ್ಯಮದಲ್ಲಿ ಇರುವ ಯಾರನ್ನೂ ಸಂಪರ್ಕಿಸದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಅಸೋಸಿಯೇಷನ್ ನಲ್ಲಿ 6 ಲಕ್ಷ ಜನ ಓನರ್ ಗಳಿದ್ದು, 9 ಲಕ್ಷ ವಾಹನಗಳು ರಾಜ್ಯಾದ್ಯಂತ ಇವೆ. 15 ಲಕ್ಷ ಜನ ಡ್ರೈವರ್ ಗಳಿದ್ದಾರೆ.

ಬಂದ್​ ದಿನ ಏನಿರಲ್ಲ?

ಬಂದ್ ದಿನ‌ ಸುಮಾರು 9 ರಿಂದ 10 ಲಕ್ಷ ವಾಹನ ಸಂಚಾರ ಬಂದ್ ಆಗಲಿದೆ.  ಮರಳು , ಸಿಮೆಂಟ್ ಸಪ್ಲೈ, ಇಂಡಸ್ಟ್ರಿ ಮೆಟಿರಿಯಲ್  ಬಂದ್ ಆಗಲಿದೆ.  ನೀರು, ಹಾಲು, ಪೆಟ್ರೋಲಿಯಂ, ತರಕಾರಿ ನೀರು ಮೆಡಿಸನ್ ಸರಬರಾಜು ಇರಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ