ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಬೆನ್ನಲ್ಲೆ ನಮ್ಮ ಮೆಟ್ರೋಗೆ ನೂತನ ಸಾರಥಿ ನೇಮಕ
ನಮ್ಮ ಮೆಟ್ರೋ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿಗೆ ಸಂಸದ ತೇಜಸ್ವಿ ಸುದ್ದಿಗೋಷ್ಠಿ ಮಾಡಿ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ನೂತನ ಎಂಡಿ ಆಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು, ಜನವರಿ 11: ನಮ್ಮ ಮೆಟ್ರೋ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿಗೆ ಸಂಸದ ತೇಜಸ್ವಿ (Tejasvi Surya) ಸುದ್ದಿಗೋಷ್ಠಿ ಮಾಡಿ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ನೂತನ ಎಂಡಿ ಆಗಿ ಮಹೇಶ್ವರ್ ರಾವ್ರನ್ನು ನೇಮಕ ಮಾಡಲಾಗಿದೆ.
ನಮ್ಮ ಮೆಟ್ರೋದ ಫೇಸ್-2 ಕಾಮಗಾರಿ ತುಂಬಾ ವಿಳಂಬ ಆಗುತ್ತಿದೆ. ಇದೆಕ್ಕೆಲ್ಲ BMRCLನಲ್ಲಿ ಪೂರ್ಣಾವಧಿ ಎಂಡಿ ಇಲ್ಲ ಎಂದು ಆರೋಪ ಕೇಳಿಬಂದಿತ್ತು. ರಾಜ್ಯ ಸರ್ಕಾರದಿಂದ ಸೂಕ್ತ ವ್ಯಕ್ತಿಯ ಶಿಫಾರಸು ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಕೇಳಿದ್ದರು.
ಇದನ್ನೂ ಓದಿ: ಹರ್ದೀಪ್ ಸಿಂಗ್ ಪುರಿ ಭೇಟಿ ಮಾಡಿದ ತೇಜಸ್ವಿ ಸೂರ್ಯ: ನಮ್ಮ ಮೆಟ್ರೋಗೆ ಪೂರ್ಣಾವಧಿ ಎಂಡಿ ವಿಚಾರದಲ್ಲಿ ಮಧ್ಯಸ್ಥಿಕೆಗೆ ಮನವಿ
ಕೇಂದ್ರದಿಂದ ಅನುಮತಿ ಕೊಡಿಸೋದಾಗಿ ಕೂಡ ಹೇಳಿದ್ದರು. ಹೀಗಾಗಿ ಪೂರ್ಣಾವಧಿ ಮೆಟ್ರೋ ಎಂಡಿ ನೇಮಕಕ್ಕೆ ಆಗ್ರಹಿಸಿದ್ದರು. ಸದ್ಯ ಅಂಜುಂ ಫರ್ವೇಜ್ ಜಾಗಕ್ಕೆ ಮಹೇಶ್ವರ್ ರಾವ್ರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಿದೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
Finally, #NammaMetro gets a full time MD.
I thank Hon. Minister MoHUA Sri @HardeepSPuri Ji for expediting the appointment in the interest of the city.
With the full time MD appointed, we hope our city’s top public infrastructure projects receive the attention they deserve. pic.twitter.com/FDRTFgz2ep
— Tejasvi Surya (@Tejasvi_Surya) January 11, 2024
ಈ ವಿಚಾರವನ್ನು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಕೊನೆಗೂ ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಪೂರ್ಣ ಸಮಯದ ನಿರ್ದೇಶಕರ ನೇಮಕದೊಂದಿಗೆ, ನಮ್ಮ ನಗರದ ಉನ್ನತ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಅವರ ಗಮನಕ್ಕೆ ಬರುತ್ತವೆಂದು ನಾವು ಭಾವಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Thu, 11 January 24