Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸ್ಪಂದನಾ ಕಾರ್ಯಕ್ರಮ: ಬೊಮ್ಮನಹಳ್ಳಿಯಲ್ಲೂ ಶಿವಕುಮಾರ್ ಅಶಕ್ತ ಮತ್ತು ವಿಕಲಚೇತನರಲ್ಲಿಗೆ ತಾವೇ ಹೋಗಿ ಅಹವಾಲು ಸ್ವೀಕರಿಸಿದರು

ಜನಸ್ಪಂದನಾ ಕಾರ್ಯಕ್ರಮ: ಬೊಮ್ಮನಹಳ್ಳಿಯಲ್ಲೂ ಶಿವಕುಮಾರ್ ಅಶಕ್ತ ಮತ್ತು ವಿಕಲಚೇತನರಲ್ಲಿಗೆ ತಾವೇ ಹೋಗಿ ಅಹವಾಲು ಸ್ವೀಕರಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 11, 2024 | 4:51 PM

ಸರ್ಕಾರೀ ಕಚೇರಿಗಳಲ್ಲಿ ಯಾವಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತದೆ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕಾಸು ಬಿಚ್ಚಿ ಗುಮಾಸ್ತರ, ಅಧಿಕಾರಿಗಳ ಕೈ ಬಿಸಿಮಾಡದಿದ್ದರೆ ಯಾವ ಕೆಲಸವೂ ಅಗಲ್ಲ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಚೇರಿಗಳಲ್ಲಿ ನಡೆಯುವ ಲಂಚಾವತಾರದ ಕಡೆ ಗಮನ ಹರಿಸಿದರೆ ಬಡಜನರಿಗೆ ಅಂದರೆ ಲಂಚ ಕೊಡಲಾಗದವರಿಗೆ ಅನುಕೂಲವಾಗುತ್ತದೆ.

ಬೆಂಗಳೂರು: ಒಂದೆರಡು ದಿನಗಳ ಬ್ರೇಕ್ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜನಸ್ಪಂದನಾ ಕಾರ್ಯಕ್ರಮವನ್ನು (Janaspandana Programme) ಪುನರಾರಂಭಿಸಿದ್ದಾರೆ. ಇಂದು ಬೊಮ್ಮನಹಳ್ಳಿ ವಲಯದಲ್ಲಿ (Bommanahalli zone) ಅವರು ಜನರ ಕಷ್ಟಸುಖಗಳನ್ನು ಆಲಿಸಿದರು. ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು. ಇಲ್ಲೂ ಶಿವಕುಮಾರ್ ತಾವು ಕುಳಿತಲ್ಲಿಗೆ ಹಿರಿಯ ನಾಗರಿಕರನ್ನು ಮತ್ತು ವಿಶೇಷ ಚೇತನರನ್ನು ಬರಲು ಹೇಳದೆ ತಾವೇ ಎದ್ದು ಅವರಿದ್ದಲ್ಲಿಗೆ ಹೋದರು. ಅವರು ಹಾಗೆ ಅಹವಾಲುಗಳನ್ನು ಸ್ವೀಕರಿಸುವಾಗ ಮತ್ತು ಮೌಖಿಕವಾಗಿ ಕಷ್ಟಸುಖಗಳನ್ನು ಆಲಿಸುವಾಗ ಒಬ್ಬ ಮಹಿಳೆ ತೀವ್ರ ಭಾವುಕರಾದರು. ಅವರ ನೋವು ಏನು ಅನ್ನೋದು ಗೊತ್ತಾಗಲಿಲ್ಲ, ಆದರೆ ಬಹಳ ಸಂಕಷ್ಟದಲ್ಲಿರುವ ಸಂಗತಿ ನೋಡಿದಾಕ್ಷಣ ಅರಿವಾಗುವಂತಿತ್ತು. ಸರ್ಕಾರೀ ಕಚೇರಿಗಳಲ್ಲಿ ಯಾವಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತದೆ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕಾಸು ಬಿಚ್ಚಿ ಗುಮಾಸ್ತರ, ಅಧಿಕಾರಿಗಳ ಕೈ ಬಿಸಿಮಾಡದಿದ್ದರೆ ಯಾವ ಕೆಲಸವೂ ಅಗಲ್ಲ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಚೇರಿಗಳಲ್ಲಿ ನಡೆಯುವ ಲಂಚಾವತಾರದ ಕಡೆ ಗಮನ ಹರಿಸಿದರೆ ಬಡಜನರಿಗೆ ಅಂದರೆ ಲಂಚ ಕೊಡಲಾಗದವರಿಗೆ ಅನುಕೂಲವಾಗುತ್ತದೆ. ಈ ಪೀಡೆಯನ್ನು ಬೇರಿಸಹಿತ ಕಿತ್ತುಹಾಕುವುದು ಮಾತ್ರ ಸಾಧ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ