ಕೆನಡಾ: ವಿಮಾನದ ಕ್ಯಾಬಿನ್ ಡೋರ್ ತೆರೆದು ಜಿಗಿದ ಪ್ರಯಾಣಿಕ
ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ಪ್ರಯಾಣಿಕನೊಬ್ಬ ಕ್ಯಾಬಿನ್ ಡೋರ್ನಿಂದ ಜಿಗಿದಿರುವ ಘಟನೆ ಕೆನಡಾದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನ್ಯೂಯಾರ್ಕ್ ಫೋಸ್ಟ್ ವರದಿ ಪ್ರಕಾರ, ಟೊರೊಂಟೊ ಪಿಯರ್ಸನ್ ಏರ್ಪೋರ್ಟ್ನಲ್ಲಿ ಜನವರಿ 8 ರಂದು ಘಟನೆ ನಡೆದಿದೆ.
ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ಪ್ರಯಾಣಿಕನೊಬ್ಬ ಕ್ಯಾಬಿನ್ ಡೋರ್ನಿಂದ ಜಿಗಿದಿರುವ ಘಟನೆ ಕೆನಡಾದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನ್ಯೂಯಾರ್ಕ್ ಫೋಸ್ಟ್ ವರದಿ ಪ್ರಕಾರ, ಟೊರೊಂಟೊ ಪಿಯರ್ಸನ್ ಏರ್ಪೋರ್ಟ್ನಲ್ಲಿ ಜನವರಿ 8 ರಂದು ಘಟನೆ ನಡೆದಿದೆ.
ಆ ವ್ಯಕ್ತಿ ವಿಮಾನದಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಳ್ಳುವ ಬದಲು ಕ್ಯಾಬಿನ್ ಬಾಗಿಲು ತೆರೆದು ಅದರಿಂದ ಹೊರಗೆ ಜಿಗಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು 20 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದರಿಂದ ಗಾಯಗಳಾಗಿವೆ ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವಿಮಾನವು ದುಬೈಗೆ ಹೊರಟಿತ್ತು ಎನ್ನಲಾಗಿದೆ.
ಏರ್ ಕೆನಡಾ ವೆಬ್ಸೈಟ್ ಪ್ರಕಾರ, ಈ ಘಟನೆ ನಡೆದ ಹಿನ್ನೆಲೆಯಲ್ಲಿ ವಿಮಾನವು 6 ಗಂಟೆ ತಡವಾಗಿ ಹಾರಿತ್ತು. ಕೆಲವು ದಿನಗಳ ಹಿಂದೆ 16 ವರ್ಷದ ಪ್ರಯಾಣಿಕರೊಬ್ಬರು ಏರ್ ಕೆನಡಾ ವಿಮಾನದಲ್ಲಿ ತನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ.
ಮತ್ತಷ್ಟು ಓದಿ:ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್, ವಿಡಿಯೋ ವೈರಲ್
ಹಾಗಾಗಿ ವಿಮಾನ ಮೂರು ಗಂಟೆ ತಡವಾಗಿ ಪ್ರಯಾಣ ಮುಂದುವರೆಸಿತು. ಸಹ ಪ್ರಯಾಣಿಕರು ಮತ್ತು ಏರ್‌ಲೈನ್ ಉದ್ಯೋಗಿಗಳು ಪ್ರಯಾಣಿಕನನ್ನು ತಡೆಯಲು ಪ್ರಯತ್ನಿಸಿದರು.
ಪ್ರಯಾಣಿಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಮತ್ತು ದಾಳಿಯ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ