Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಉತ್ತರ ಭಾಗಗಳಲ್ಲಿ ನಾಳೆ ಮಧ್ಯಾಹ್ನದ ವರೆಗೂ ಕರೆಂಟ್ ಕಟ್

ವಿದ್ಯುತ್ ಸರಬರಾಜು ಕಂಪನಿಗಳು ಕೆಲವು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ಬೆಂಗಳೂರಿನ ಉತ್ತರ ಭಾಗಗಳಲ್ಲಿ ಬುಧವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

Bengaluru Power Cut: ಬೆಂಗಳೂರಿನ ಉತ್ತರ ಭಾಗಗಳಲ್ಲಿ ನಾಳೆ ಮಧ್ಯಾಹ್ನದ ವರೆಗೂ ಕರೆಂಟ್ ಕಟ್
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Nov 28, 2023 | 8:04 AM

ಬೆಂಗಳೂರು, ನ.28: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಕೆಲವು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ಬೆಂಗಳೂರಿನ ಉತ್ತರ ಭಾಗಗಳಲ್ಲಿ ಬುಧವಾರ (ನ.29) ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ(Bengaluru Power Cut).

ನವೆಂಬರ್ 29ರ ಬುಧವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್‌ಗಳು, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯ ನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ II ಹಂತ, ವೆಂಕಟೇಶ್ವರ ನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋದಾ ನಗರ, ಗೋಪಾಲಪ್ಪ ಲೇಔಟ್, ಆರ್‌ಎಂಝಡ್ ಅಜೂರ್, ಬ್ರಿಗೇಡ್ ಕ್ಯಾಲಾಡಿಯಂ ಮತ್ತು ಅಕ್ಕಪಕ್ಕದ ಪ್ರದೇಶಗಳು.

ವಿದ್ಯುತ್ ಸರಬರಾಜು ಕಂಪನಿಗಳು ಬೆಂಗಳೂರಿನ ಉತ್ತರ ಭಾಗಗಳಲ್ಲಿ ಕೆಲವು ನಿರ್ಮಾಹಣೆಯನ್ನು ಕೈಗೆತ್ತಿಕೊಂಡಿವೆ. ವಿದ್ಯುತ್ ಕಂಬಗಳ ಅಥವಾ ಟ್ರ್ಯಾನ್ಸ್ ಫಾರ್ಮರ್ ಗಳ ಬಳಿ ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು, ಬಹು-ಗ್ರಾಮ ಯೋಜನೆಗಳ ಅಡಿಯಲ್ಲಿ ನೀರು ಸರಬರಾಜು ಸ್ಥಾಪನೆಗೆ ವಿದ್ಯುತ್ ಸರಬರಾಜುಗಳನ್ನು ಸ್ಥಾಪಿಸುವುದು, ನವೀಕರಣ, ಆಧುನೀಕರಣ, DTC ರಚನೆಗಳನ್ನು ನಿರ್ವಹಿಸುವುದು, ಕೇಬಲ್​ಗಳನ್ನು ಸರಿ ಮಾಡುವುದು, ರಿಂಗ್ ಮುಖ್ಯ ಘಟಕಗಳನ್ನು ನಿರ್ವಹಿಸುವುದು, ಮರಗಳನ್ನು ಕತ್ತರಿಸುವುದು, ದಿನದ 24 ಗಂಟೆಯೂ ಜಲಸಿರಿಗಾಗಿ ಪೂರೈಕೆ, ಮತ್ತು ಭೂಮಿಯೊಳಗಿನ ಕೇಬಲ್‌ಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸುವುದು ಸೇರಿದಂತೆ ಇತರೆ ನಿರ್ವಾಹಣ ಕಾರ್ಯಗಳನ್ನು ವಿದ್ಯುತ್ ಸಂಸ್ಥೆಗಳು ಕೈಗೊಳ್ಳಲಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಹೊತ್ತಿ ಉರಿದ ಶೂ, ಬಟ್ಟೆ ಮಳಿಗೆ

ವಿದ್ಯುತ್ ಅವಘಡ ಸಂಭವಿಸಿದರೆ 1912ಗೆ ಕರೆ ಮಾಡಿ

ವಿದ್ಯುತ್ ಕಂಬಗಳು, ಪಿಲ್ಲರ್ ಬಾಕ್ಸ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ತಂತಿಗಳು ಮತ್ತು ಬೇಲಿಗಳನ್ನು ಮುಟ್ಟುವುದಾಗಲಿ ಅಥವಾ ಹತ್ತಿರ ಹೋಗುವುದಾಗಲಿ ಮಾಡದಿರಿ. ಯಾವುದೇ ರೀತಿಯ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಬೆಸ್ಕಾಂನ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ಎಂದು ಬೆಸ್ಕಾಂ ಟ್ವೀಟ್ ಮಾಡುವ ಮೂಲಕ ಜನರನ್ನು ಎಚ್ಚರಿಸಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:29 am, Tue, 28 November 23