ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

ಉತ್ಪಾದಕರಿಂದ ನೇರವಾಗಿ ವಿದ್ಯುತ್​ ಖರೀದಿಸುವ ವಾಣಿಜ್ಯ ಸಂಸ್ಥೆಗಳು, ಐಟಿ ಪಾರ್ಕ್‌ಗಳು ಮತ್ತು ಕೈಗಾರಿಕೆಗಳಂತಹ ಬೃಹತ್ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸಿಹಿ ಸುದ್ದಿ ನೀಡಿದೆ. ಕೆಇಆರ್‌ಸಿ ಹೆಚ್ಚುವರಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ 1.40 ರೂ.ಗೆ ಇಳಿಸಿದೆ. ಪರಿಷ್ಕೃತ ಬೆಲೆಯು 2024ರ ಆರ್ಥಿಕ ವರ್ಷದಲ್ಲಿ ಜಾರಿಗೆ ಬರುತ್ತದೆ.

ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Nov 28, 2023 | 12:54 PM

ಬೆಂಗಳೂರು ನ.27: ಉತ್ಪಾದಕರಿಂದ ನೇರವಾಗಿ ವಿದ್ಯುತ್​ ಖರೀದಿಸುವ ವಾಣಿಜ್ಯ ಸಂಸ್ಥೆಗಳು, ಐಟಿ ಪಾರ್ಕ್‌ಗಳು ಮತ್ತು ಕೈಗಾರಿಕೆಗಳಂತಹ ಬೃಹತ್ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಸಿಹಿ ಸುದ್ದಿ ನೀಡಿದೆ. ವಿದ್ಯುತ್​ ಖರೀದಿ ವೇಳೆ ಪಾವತಿಸಬೇಕಾದ ಹೆಚ್ಚುವರಿ ಶುಲ್ಕದಲ್ಲಿ (ASC) 8 ಪೈಸೆಯನ್ನು ಕಡಿತಗೊಳಿಸಿದೆ.

ಇದಲ್ಲದೆ, ನಿಯಂತ್ರಣ ಸಂಸ್ಥೆಯು ಪವನ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಅನ್ನು ಸಂಗ್ರಹಿಸುವ ಸಂಸ್ಥೆಗಳಿಗೆ ಹೆಚ್ಚುವರಿ ಶುಲ್ಕಗಳಲ್ಲಿ ಶೇ 50 ಪ್ರತಿಶತ ರಿಯಾಯಿತಿಯನ್ನು ಸಹ ನೀಡಿದೆ.

2023ರ ಮೇನಲ್ಲಿ ಕೆಇಆರ್​ಸಿ ಹೆಚ್ಚುವರಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ ರೂ 1.48 ರೂ. ವಿಧಿಸಿತ್ತು. ಇದರಿಂದ ಪ್ರವೇಶ ಜಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್​ ಖರೀದಿಸುವ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಹೀಗಾಗಿ ಕೆಇಆರ್‌ಸಿಯ ಆದೇಶಗಳನ್ನು ಕೆಲವು ನವೀಕರಿಸಬಹುದಾದ ಇಂಧನ ಸಂಸ್ಥೆಗಳು ಪ್ರಶ್ನಿಸಿದವು.

ಇದನ್ನೂ ಓದಿ: ಉಚಿತ ವಿದ್ಯುತ್‌ ಕೊಟ್ಟರೆ ದುರುಪಯೋಗವಾಗುತ್ತದೆ ಎಂಬ ಮಾತಿತ್ತು, ಆದರೆ 8 ಜಿಲ್ಲೆಗಳ ಗ್ರಾಹಕರು ನಿರೀಕ್ಷೆಗೂ ಮೀರಿ ಕಡಿಮೆ ವಿದ್ಯುತ್ ಬಳಸಿದ್ದಾರೆ! ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

ಸಂಸ್ಥೆಗಳಿಂದ ಅರ್ಜಿಗಳನ್ನು ಸ್ವೀಕರಿಸಿದ ನಂತರ, ಕೆಇಆರ್‌ಸಿ ಹೆಚ್ಚುವರಿ ಶುಲ್ಕವನ್ನು ಪ್ರತಿ ಯೂನಿಟ್‌ಗೆ 1.40 ರೂ.ಗೆ ಇಳಿಸಿದೆ. ಪರಿಷ್ಕೃತ ಬೆಲೆಯು 2024ರ ಆರ್ಥಿಕ ವರ್ಷದಲ್ಲಿ ಜಾರಿಗೆ ಬರುತ್ತದೆ. ಹಾಗೆ ಶೇ 50 ರಿಯಾಯಿತಿ ಕೂಡ 2024 ಆರ್ಥಿಕ ವರ್ಷದಲ್ಲಿ ಜಾರಿಗೆ ಬರುತ್ತದೆ.

ಎಫ್‌ಕೆಸಿಸಿಐನ ಎನರ್ಜಿ ಗ್ರೂಪ್‌ನ ಸದಸ್ಯ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ವಿತರಕರ ಅಧ್ಯಕ್ಷ ರಮೇಶ್ ಶಿವಣ್ಣ ಮಾತನಾಡಿ, ಎಸ್ಕಾಮ್‌ಗಳನ್ನು ಬಿಟ್ಟು ವಿದ್ಯುತ್ ಖರೀದಿಸುವ ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಖಂಡಿತವಾಗಿಯೂ ಇದು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Tue, 28 November 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್