ಬೆಳಗಾವಿ ಮಹಾನಗರ ಪಾಲಿಕೆಯ ಮತ್ತಿಬ್ಬರು ಬಿಜೆಪಿ ಸದಸ್ಯರಿಗೆ ಸಂಕಷ್ಟ, ಅನರ್ಹ ಭೀತಿ!

Belagavi city corporation: ಬೆಳಗಾವಿ ಪಾಲಿಕೆ ಬಿಜೆಪಿ ಸದಸ್ಯ ಬಂಧನದ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತಿಬ್ಬರು ಸದಸ್ಯರಿಗೆ ಸಂಕಷ್ಟ ಎದುರಾಗಿದೆ. ಪತ್ನಿಯರ ಹೆಸರಿನಲ್ಲಿ ಮಳಿಗೆ ಹಂಚಿಕೊಂಡಿರುವ ಆರೋಪ ಮೇಲೆ ಇಬ್ಬರು ಸದಸ್ಯರು ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ಅಷ್ಟಕ್ಕೂ ಯಾರು ಅವರು? ಏನಿದು ಪ್ರಕರಣ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಮತ್ತಿಬ್ಬರು ಬಿಜೆಪಿ ಸದಸ್ಯರಿಗೆ ಸಂಕಷ್ಟ, ಅನರ್ಹ ಭೀತಿ!
ಜಯಂತ್ ಜಾಧವ್ , ಮಂಗೇಶ ಪವಾರ್
Follow us
Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on: Nov 28, 2023 | 8:30 AM

ಬೆಳಗಾವಿ, (ನವೆಂಬರ್ 28): ಬೆಳಗಾವಿ ಮಹಾನಗರ ಪಾಲಿಕೆಯ(belagavi city corporation) ಬಿಜೆಪಿ ಸದಸ್ಯರಿಗೆ ಒಬ್ಬರಾದ ಮೇಲೆ ಒಬ್ಬರಿಗೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ನ.23ರಂದು ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ನಡೆದಿದ್ದುಮ ಈ ಪ್ರಕರಣದಲ್ಲಿ ಅಭಿಜಿತ್ ಅವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರು ಬಿಜೆಪಿ ಸದಸ್ಯರಿಗೆ ಅನರ್ಹ ಭೀತಿ ಶುರುವಾಗಿದೆ. ಸರ್ಕಾರಿ ನಿಯಮಗಳನ್ನೇ ಗಾಳಿಗೆ ತೂರಿ ತಮ್ಮ ಪತ್ನಿ ಹೆಸರಿನಲ್ಲಿ ಮಳಿಗೆ ಪಡೆದುಕೊಂಡ ಪ್ರಕರಣ ಸಂಬಂಧ ವಾರ್ಡ್ ನಂಬರ್ 23ರ ಸದಸ್ಯ ಜಯಂತ್ ಜಾಧವ್ ಹಾಗೂ ವಾರ್ಡ್ ನಂಬರ್ 41ರ ಪಾಲಿಕೆ ಸದಸ್ಯ ಮಂಗೇಶ ಪವಾರ್ ಮೇಲೆ ಅನರ್ಹ ತೂಗುಗತ್ತಿ ತೂಗುತ್ತಿದೆ.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಸವೇಶ್ವರ ವೃತ್ತದ ಬಳಿ ತಿನಿಸು ಕಟ್ಟೆ ನಿರ್ಮಾಣ ಮಾಡಲಾಗಿದ್ದು, ಈ ತಿನಿಸು ಕಟ್ಟೆಯಲ್ಲಿ ಬಡವರು, ನಿರ್ಗತಿಕರು, ಆರ್ಥಿಕವಾಗಿ ದುರ್ಬಲರಿಗೆ ಮಳಿಗೆ ನೀಡುವ ನಿಯಮವಿದೆ. ಆದ್ರೆ, ಜಯಂತ್ ಜಾಧವ್ ಮತ್ತು ಮಂಗೇಶ ಪವಾರ್ ಅವರು ತಮ್ಮ-ತಮ್ಮ ಪತ್ನಿಯರ ಹೆಸರಿನಲ್ಲಿ ಮಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಸೋನಾಲಿ ಜಯಂತ್ ಜಾಧವ್ ಹೆಸರಿನಲ್ಲಿ ತಿನಿಸು ಕಟ್ಟೆಯಲ್ಲಿ ಸಂಖ್ಯೆ 29ರ ಮಳಿಗೆ ಇದ್ದರೆ, ತಿನಿಸು ಕಟ್ಟೆಯಲ್ಲಿ ಸಂಖ್ಯೆ 28ರ ಮಳಿಗೆ ನೀತಾ ಮಂಗೇಶ ಪವಾರ್ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಬಿಜೆಪಿ ಕಾರ್ಪೊರೇಟರ್​​ ಬಂಧನ, ಮಾಹಿತಿ ಪಡೆದ ಬಿವೈ ವಿಜಯೇಂದ್ರ

ಈ ಸಂಬಂಧ ಹೋರಾಟಗಾರ ಸುಜೀತ್ ಮುಳಗುಂದ ಎನ್ನುವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದು, ಇಬ್ಬರು ಸದಸ್ಯರು ಕೆಎಂಸಿ ಕಾಯ್ದೆ 1976 ಸೆಕ್ಷನ್ 26(1)(ಕೆ) ಉಲ್ಲಂಘಿಸಿದ್ದಾರೆ. ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಇಬ್ಬರ ಸದಸ್ಯತ್ವನ್ನು ರದ್ದು ಮಾಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ದೂರು ಬೆನ್ನಲ್ಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದೀಗ ಪ್ರಾದೇಶಿಕ ಆಯುಕ್ತರ ಪತ್ರ ಉಲ್ಲೇಖಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿಗೆ ಅವರಿಗೆ ಪತ್ರ ಬರೆದಿದ್ದು, ಪ್ರಕರಣ ಸಂಬಂಧ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಸ್ಪಷ್ಟವಾದ ಅಭಿಪ್ರಾಯಗಳೊಂದಿಗೆ ವಿವಾರವಾದ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಸದಸ್ಯರಿಗೆ ಅನರ್ಹಗೊಳ್ಳು ಆತಂಕ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ