ಬೆಳಗಾವಿ ಬಿಜೆಪಿ ಕಾರ್ಪೊರೇಟರ್ ಬಂಧನ, ಮಾಹಿತಿ ಪಡೆದ ಬಿವೈ ವಿಜಯೇಂದ್ರ
ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ಪಾಲಿಕೆಯ ವಾರ್ಡ್ ನಂ.42ರ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ್ನ್ನು ತಡರಾತ್ರಿ ಬಂಧಿಸಿ ಟಿಳಕವಾಡಿ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಅಧಿವೇಶನ ಒಂದು ವಾರ ಬಾಕಿ ಇರುವಾಗಲೇ ಬಿಜೆಪಿ ಕಾರ್ಪೊರೇಟರ್ ಬಂಧನವಾಗಿದ್ದು, ಖುದ್ದು ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಗಾವಿ, ನವೆಂಬರ್ 27: ಅಧಿವೇಶನ ಒಂದು ವಾರ ಬಾಕಿ ಇರುವಾಗಲೇ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯನನ್ನು ಬಂಧಿಸಲಾಗಿದೆ. ಅಭಿಜಿತ್ ಜವಳಕರ್ ಬಂಧಿತ ಅಭಿಜಿತ್ ವಾರ್ಡ್ ನಂ.42ರ ಬಿಜೆಪಿ ಕಾರ್ಪೊರೇಟರ್ (BJP Corporator). ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಡರಾತ್ರಿ ಬಂಧಿಸಿ ಹಿಂಡಲಗಾ ಜೈಲಿಗೆ ಟಿಳಕವಾಡಿ ಪೊಲೀಸರು ಕಳುಹಿಸಿದ್ದಾರೆ. ಇತ್ತ ಬಿಜೆಪಿ ಕಾರ್ಪೊರೇಟರ್ ಬಂಧನವಾಗುತ್ತಿದ್ದಂತೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಗಾವಿ ಮಹಾನಗರ ಅಧ್ಯಕ್ಷ ಅನಿಲ್ ಬೆನಕೆಗೆ ಕರೆ ಮಾಡಿರುವ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಮೇಲೆ ಯಾರು ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಪಡೆದಿದ್ದಾರೆ. ಇಂದು ಬೆಳಗ್ಗೆ ಹತ್ತು ಗಂಟೆಗೆ ನಗರ ಪೊಲೀಸ್ ಆಯುಕ್ತರನ್ನು ಜಿಲ್ಲೆಯ ಎಲ್ಲಾ ಬಿಜೆಪಿ ಮುಖಂಡರ ಜತೆಗೆ ಭೇಟಿ ಮಾಡುವಂತೆ ವಿಜಯೇಂದ್ರ ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರ ಕಿರುಕುಳ: ಕಾನೂನು ನೆರವಿಗಾಗಿ ಕಂಟ್ರೋಲ್ ರೂಂ ತೆರೆಯಲು ಚಿಂತನೆ: ವಿಜಯೇಂದ್ರ
ಪಾಲಿಕೆ ಸದಸ್ಯ ಅಭಿಜಿತ್ರನ್ನು ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಅಧಿವೇಶನ ಸಮಯದಲ್ಲೂ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಪಾಲಿಕೆ ಸದಸ್ಯನ ಬಂಧನವನ್ನೇ ಬಿಜೆಪಿ ಅಸ್ತ್ರವಾಗಿಸಿಕೊಳ್ಳುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕುಮಾರಸ್ವಾಮಿಯನ್ನ ಭೇಟಿಯಾದ ವಿಜಯೇಂದ್ರ
ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ನ.23ರಂದು ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ಆಗಿತ್ತು. ಬಳಿಕ ಇಬ್ಬರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದರು. ಹಲ್ಲೆ ಮಾಡಿದ ರಮೇಶ್ ಪಾಟೀಲ್ ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದು ರಮೇಶ್ ಪಾಟೀಲ್ನನ್ನು ಅರೆಸ್ಟ್ ಮಾಡಿದ್ದು, ಇದೀಗ ಎಂಇಎಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದು ಪಾಲಿಕೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಅರೆಸ್ಟ್ ಖಂಡಿಸಿ ಮಾಜಿ ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು, ಅಭಿಜಿತ್ ಅರೆಸ್ಟ್ ಆಗುತ್ತಿದ್ದಂತೆ ಬಿಮ್ಸ್ ಆಸ್ಪತ್ರೆ ಎದುರು ಜಮಾವಣೆಗೊಂಡು ಬಿಜೆಪಿ ಪಾಲಿಕೆ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.