ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಸಚಿವ: ಸಮಯ ಬಂದಾಗ ಶಾಸಕರನ್ನು ಕರೆದುಕೊಂಡು ಹೋಗೋಣ: ಸತೀಶ್ ಜಾರಕಿಹೊಳಿ
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಶುಕ್ರವಾರ ತಡರಾತ್ರಿ ತಮ್ಮ ಮಗನೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿತ್ತು. ಇದೀಗ ವಿದೇಶ ಪ್ರಯಾಣವನ್ನು ಮುಗಿಸಿ ಇಂದು(ನ.26) ಬೆಳಗಾವಿಗೆ ಆಗಮಿಸಿದ್ದಾರೆ.
ಬೆಳಗಾವಿ, ನ.26: ವಿದೇಶ ಪ್ರವಾಸ ಮುಗಿಸಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಇದೀಗ ವಾಪಸ್ ಆಗಿದ್ದಾರೆ. ಈ ವೇಳೆ ಬೆಳಗಾವಿ(Belagavi)ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನನ್ನ ವಿದೇಶ ಪ್ರವಾಸ ಸ್ವಂತ ಮತ್ತು ಖಾಸಗಿ ಪ್ರವಾಸವಾಗಿದೆ. ಅನ್ಯ ಕೆಲಸದ ನಿಮಿತ್ತ ಪ್ರವಾಸಕ್ಕೆ ಹೋಗಿದ್ದೆ, ಅದರಲ್ಲಿ ವಿಶೇಷವಿಲ್ಲ. ಸಮಯ ಬಂದಾಗ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ ಎಂದಿದ್ದಾರೆ.
ವಿದೇಶ ಪ್ರವಾಸ ಸ್ವಂತ ಮತ್ತು ಖಾಸಗಿ ಪ್ರವಾಸ
ಇದು ನನ್ನ ಖಾಸಗಿ ಪ್ರವಾಸವಾಗಿದ್ದು, ಬೇರೆ ಕೆಲಸವಿತ್ತು. ಅದಕ್ಕೆ ಪ್ರವಾಸಕ್ಕೆ ಹೋಗಿದ್ದೆ. ಅದರಲ್ಲಿ ಏನೂ ವಿಶೇಷವಿಲ್ಲ ಎಂದರು. ಇನ್ನು ಇದೇ ವೇಳೆ ‘ಹಾಲಿ ಮತ್ತು ಮಾಜಿ ಶಾಸಕರನ್ನ ಬಿಟ್ಟು ಹೋಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನೋಡೋಣ ಟೈಮ್ ಬಂದಾಗ ಅವರನ್ನು ಕರೆದುಕೊಂಡು ಹೋಗೋಣ ಎಂದು ನಸುನಗುತ್ತಲೇ ಉತ್ತರಿಸಿದರು.
ಇದನ್ನೂ ಓದಿ:ಬೆಳಗಾವಿ ಮಹಾನಗರ ಪಾಲಿಕೆ ಪ್ರತಿಷ್ಠೆ ಗುದ್ದಾಟ; ಸತೀಶ್ ಜಾರಕಿಹೊಳಿ ವಿರುದ್ಧ ಅಭಯ ಪಾಟೀಲ್ ಪರೋಕ್ಷ ವಾಗ್ದಾಳಿ
ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಮರ್ಜ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ‘10 ಹತ್ತು ವರ್ಷಗಳ ಹಿಂದೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಆ ರಿಫೋರ್ಟ್ ಆಧಾರದ ಮೇಲೆ ಮರ್ಜ್ ಮಾಡುತ್ತಾರೆ. ಇಲಾಖೆಗಳ ವಿಲೀನಕ್ಕೂ ಗ್ಯಾರಂಟಿ ಯೋಜನೆ ಗಳಿಗೂ ಸಂಬಂಧವಿಲ್ಲ. ಇನ್ನು ಕಾಂತರಾಜ್ ವರದಿ ಅಂಗೀಕಾರ ಮಾಡಿದ್ರೆ ಕಾಂಗ್ರೆಸ್ಗೆ ಎಫೆಕ್ಟ್ ವಿಚಾರ ‘ ಇನ್ನೂ ಕಾಂತರಾಜ್ ವರದಿ ನಮಗೆ ಕೊಡಬೇಕು. ಆ ವರದಿ ಚರ್ಚೆ ಆಗಬೇಕು, ಆಮೇಲೆ ಒಪ್ಪಿಕೊಳ್ಳುವ ಪ್ರಶ್ನೆ ಬರುತ್ತದೆ. ಕಾಂತರಾಜ್ ವರದಿ ಪ್ರಕ್ರಿಯೆಗೆ ಲಾಂಗ್ ಟೈಮ್ ಇದೆ. ಈಗಾಗಲೇ ಎರಡು ತಿಂಗಳ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಅವರು ವರದಿ ಕೊಟ್ಟ ಬಳಿಕ ಸರ್ಕಾರವಿದೆ, ಸಿಎಂ, ಡಿಸಿಎಂ ಇದ್ದಾರೆ. ಅವರು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.
ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಈಗಾಗಲೇ ಸಿದ್ಧತೆ ಆಗಿದೆ. ಡಿಸಿ, ಕಮೀಷನರ್ ಎಲ್ಲರೂ ಅಗತ್ಯ ತಯಾರಿ ಮಾಡಿದ್ದಾರೆ. ಪ್ರತಿಭಟನೆ ಮಾಡುವವರಿಗೆ ಬೇಡ ಎನ್ನುವುದಕ್ಕೆ ಆಗುವುದಿಲ್ಲ. ಅವರು ಬಂದು ಸರ್ಕಾರಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಲಿ, ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ್ರೆ ಕೊಂಚ ಸಮಾಧಾನ ಆಗುತ್ತಾರೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆ ಅಧಿವೇಶನ ವೇಳೆ ಸಭೆ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ