Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯದ ಸಂಭ್ರಮದಲ್ಲೇ ಮತ್ತೆ ಮುನ್ನಲೆಗೆ ಬಂದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು; ಸತೀಶ್​ ಜಾರಕಿಹೊಳಿ ಹೇಳಿದ್ದಿಷ್ಟು

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇತ್ತೀಚಿಗೆ ಬೆಳಗಾವಿ ವಿಭಜನೆ ಮಾತುಗಳನ್ನು ಆಡಿದ್ದರು. ಜಿಲ್ಲೆ ವಿಭಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲೇ ಮತ್ತೆ ಸತೀಶ್​ ಜಾರಕಿಹೊಳಿ ವಿಭಜನೆಯ ಮಾತುಗಳನ್ನು ಆಡಿದ್ದಾರೆ.

ಸ್ವಾತಂತ್ರ್ಯದ ಸಂಭ್ರಮದಲ್ಲೇ ಮತ್ತೆ ಮುನ್ನಲೆಗೆ ಬಂದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು; ಸತೀಶ್​ ಜಾರಕಿಹೊಳಿ ಹೇಳಿದ್ದಿಷ್ಟು
ಸಚಿವ ಸತೀಶ್​ ಜಾರಕಿಹೊಳಿ
Follow us
Sahadev Mane
| Updated By: ವಿವೇಕ ಬಿರಾದಾರ

Updated on:Aug 15, 2023 | 1:22 PM

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇತ್ತೀಚಿಗೆ ಬೆಳಗಾವಿ (Belagavi) ವಿಭಜನೆ ಮಾತುಗಳನ್ನು ಆಡಿದ್ದರು. ಜಿಲ್ಲೆ ವಿಭಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲೇ ಮತ್ತೆ ಸತೀಶ್​ ಜಾರಕಿಹೊಳಿ ವಿಭಜನೆಯ ಮಾತುಗಳನ್ನು ಆಡಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆ ಆಗುವ ಒತ್ತಡ ಇದೆ. ಮೊನ್ನೆ ನಡೆದ ಸಭೆಯಲ್ಲಿ ಜಿಲ್ಲೆಯನ್ನು ವಿಭಜನೆ ಮಾಡುವಂತೆ ಒತ್ತಡ ಕೇಳಿ ಬಂದಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗೋಕಾಕ್, ಚಿಕ್ಕೋಡಿ, ಬೆಳಗಾವಿ ಸೇರಿ ಮೂರು ಜಿಲ್ಲೆ ಮಾಡುವ ಒತ್ತಡ ಕೇಳಿಬಂದಿದೆ. ಈ ಬಗ್ಗೆ ನಮ್ಮದು ಕೂಡ ಜಿಲ್ಲೆ ಆಗಬೇಕು ಎಂಬ ಆಗ್ರಹವಿದೆ. ಆದಷ್ಟು ಬೇಗ ಇಬ್ಬಾಗ ಆಗುತ್ತೆ. ಬೆಳಗಾವಿ ದಕ್ಷಿಣ, ಉತ್ತರ, ಗ್ರಾಮೀಣ ಒಡೆದು ಬೇರೊಂದು ತಾಲೂಕು ರಚನೆ ಮಾಡಲಾಗುತ್ತದೆ. ಬೆಳಗಾವಿ ತಾಲೂಕು ಸಿಟಿಯಲ್ಲಿ ಇರುತ್ತೆ ತಹಶಿಲ್ದಾರ 1 ಮತ್ತು ತಹಶಿಲ್ದಾರ 2 ಇರುತ್ತೆ. ಆಡಳಿತ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವರು ಹೇಳಿದರು.

ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯಿತಿ ಹೊಂದಿರುವ ಜಿಲ್ಲೆ

ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಬಹಳ ದೊಡ್ಡ ಜಿಲ್ಲೆಯಾಗಿದೆ. 506 ಗ್ರಾಮ ಪಂಚಾಯಿತಿಗಳ ಮೂಲಕ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಹೊಂದಿದ ಜಿಲ್ಲೆಯಾಗಿದೆ. 14 ತಾಲೂಕು, 18 ವಿಧಾನಸಭಾ ಕ್ಷೇತ್ರ ಹಾಗೂ ಎರಡೂವರೆ ಲೋಕಸಭಾ ಕ್ಷೇತ್ರ (ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದ ಒಂದಿಷ್ಟು ಭಾಗ), 55 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.

1997ರಲ್ಲಿಯೇ ಚಿಕ್ಕೋಡಿ ಜಿಲ್ಲೆಯ ಶಿಫಾರಸು

1997ರಲ್ಲಿಯೇ ಚಿಕ್ಕೋಡಿ ಜಿಲ್ಲೆಯ ಶಿಫಾರಸು. ವಾಸುದೇವ ರಾವ್‌, ಹುಂಡೇಕರ್‌ ಮತ್ತು ಪಿಸಿ ಗದ್ದಿಗೌಡರ್‌ ಸಮಿತಿಗಳು 1997ರಲ್ಲಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಶಿಫಾರಸು ಮಾಡಿದವು. ಆದರೆ, ಕನ್ನಡ ಪರ ಸಂಘಟನೆಗಳಿಂದ ಭಾರೀ ಹೋರಾಟ ನಡೆದ ಹಿನ್ನೆಲೆ ಅಂದಿನ ಮುಖ್ಯಮಂತ್ರಿ ಜೆ ಹೆಚ್​​ ಪಟೇಲ್‌ ಅವರು ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:20 pm, Tue, 15 August 23