ಬೆಳಗಾವಿಯಲ್ಲಿವೆ ಜೀವಕ್ಕೆ ಕುತ್ತು ತರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ
ಇತ್ತೀಚಿಗೆ ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟಿದ್ದರು. ಈ ಅವಘಡ ಸಂಭವಿಸಿದ ನಂತರವೂ ರಾಜ್ಯದ ಹೆಸ್ಕಾಂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಬೆಳಗಾವಿ ನಗರದಲ್ಲಿರುವ ಹೆಸ್ಕಾಂನ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳಿಂದ ಜೀವಕ್ಕೆ ಆಪತ್ತು ಉಂಟಾಗುವ ಸಾಧ್ಯತೆ ಇದೆ.
Updated on: Nov 26, 2023 | 10:53 AM

ಇತ್ತೀಚಿಗೆ ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟಿದ್ದರು. ಈ ಅವಘಡ ಸಂಭವಿಸಿದ ನಂತರವೂ ರಾಜ್ಯದ ಹೆಸ್ಕಾಂ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಹೌದು ಬೆಳಗಾವಿ ನಗರದಲ್ಲಿರುವ ಹೆಸ್ಕಾಂನ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಜೀವ ಬಲಿಗಾಗಿ ಕಾದು ಕುಳಿತಂತಿವೆ.

ಬೆಳಗಾವಿ ನಗರದ ಕುಮಾರಸ್ವಾಮಿ ಲೋವೋಟ್ನಲ್ಲಿನ ಆರಕ್ಕೂ ಅಧಿಕ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿವೆ.

ರಸ್ತೆ ಬದಿಯಲ್ಲಿ ಅಂಗಡಿಗಳ ಮುಂಭಾಗದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳಿದ್ದ, ಸಾರ್ವಜನಿಕರು ಜೀವ ಭಯದಲ್ಲೇ ಓಡಾಡುತ್ತಿದ್ದಾರೆ.

ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಪುಟ್ಟ ಮಕ್ಕಳ ಕೈಗೆ ಎಟಕುವಂತಿವೆ. ಆಟವಾಡುವ ಸಮಯದಲ್ಲಿ ಮಕ್ಕಳು ಮುಟ್ಟಿದರೇ ಜೀವಕ್ಕೆ ಕುತ್ತು ತರುತ್ತವೆ.

ಸುರಕ್ಷತಾ ವಾಲ್ ಕೂಡ ನಿರ್ಮಿಸದೇ ಓಪನ್ ಆಗಿಯೇ ಹೆಸ್ಕಾಂ ಬಿಟ್ಟದೆ. ಈ ಟ್ರಾನ್ಸ್ಫಾರ್ಮರ್ಗಳನ್ನು ಬೇರಡೆ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಅಪಾಯಕಾರಿ ಟ್ರಾನ್ಸ್ಫಾರ್ಮರ್ ಕಣ್ಮುಂದೆ ಇದ್ದರೂ ಸುರಕ್ಷಾ ಕ್ರಮಕ್ಕೆ ಮುಂದಾಗದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



















