Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರ್ಜೇವಾಲಾ ಇಂದು ಬೆಂಗಳೂರಿಗೆ: ನಿಗಮ ಮಂಡಳಿ ನೇಮಕಾತಿ ಫೈನಲ್, ಯಾರಿಗೆ ನಿಗಮಾಧ್ಯಕ್ಷ ಭಾಗ್ಯ?

ತೀವ್ರ ಕಗ್ಗಂಟಾಗಿ ಉಳಿದಿರುವ ನಿಗಮ ಮಂಡಳಿ ನೇಕಮಾತಿ ಅಂತಿಮ ಹಂತಕ್ಕೆ ಬಂಂದಿದೆ. ಕಳೆದ ಬಾರಿ ಲಿಸ್ಟ್ ರೆಡಿ ಮಾಡಿ ಹೋಗಿದ್ದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದು(ನವೆಂಬರ್ 28) ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದು, ನಿಗಮ ಮಂಡಳಿ ನೇಕಮಾತಿ ಫೈನಲ್ ಮಾಡಲಿದ್ದಾರೆ. ಹಾಗಾಗಿ ನಿಗಮ ಅಧ್ಯಕ್ಷ ಭಾಗ್ಯ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಸುರ್ಜೇವಾಲಾ ಇಂದು ಬೆಂಗಳೂರಿಗೆ: ನಿಗಮ ಮಂಡಳಿ ನೇಮಕಾತಿ ಫೈನಲ್, ಯಾರಿಗೆ ನಿಗಮಾಧ್ಯಕ್ಷ ಭಾಗ್ಯ?
Follow us
ರಮೇಶ್ ಬಿ. ಜವಳಗೇರಾ
|

Updated on: Nov 28, 2023 | 7:45 AM

ಬೆಂಗಳೂರು (ನವೆಂಬರ್ 29): ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧ ಮೊದಲ ಹಂತದ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಇಂದು(ನವೆಂಬರ್ 28) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ಗಂಟೆ ವರೆಗೂ ಸಭೆ ನಡೆಯಲಿದ್ದು, ಇದರಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಅಲ್ಲದೇ ಯಾರಿಗೆ ನಿಗಮ ಮಂಡಳಿ ಭಾಗ್ಯ ದೊರೆಯಲಿದೆ ಎನ್ನುವುದು ಸ್ಪಷ್ಟವಾಗಲಿದೆ. ಹೀಗಾಗಿ ಇಂದಿನ ಸಭೆ ಮಹತ್ವದ ಪಡೆದುಕೊಂಡಿದೆ.

ಸಂಭಾವ್ಯರ ಪಟ್ಟಿಯಲ್ಲಿರುವ ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಗ್ರಹಿಸಿದ್ದು, ಈ ಅಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸುರ್ಜೇವಾಲಾ ಅವರು ಅಂತಿಮ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ ಸಭೆ ಅಪೂರ್ಣ: ಸಿಎಂ, ಡಿಸಿಎಂ ಮಧ್ಯೆ ಮೂಡದ ಒಮ್ಮತ

25 ಮಂದಿ ಸಂಭಾವ್ಯರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದ್ರೆ, ಇದರಲ್ಲಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ಹುದ್ದೆ ಬೇಡ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಒಂದು ವೇಳೆ ಪಟ್ಟಿ ಬಿಡುಗಡೆ ಬಳಿಕ ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ನೇಮಕವನ್ನು ಅಲ್ಲಗಳೆದರೆ ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಇವರೆಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಅದನ್ನು ಮುಂದಿಟ್ಟುಕೊಂಡು ಇಂದು ಸಭೆ ನಡೆಯಲಿದೆ. ಬಳಿಕವಷ್ಟೇ ನೇಮಕಾತಿ ಪಟ್ಟಿ ಅಂತಿಮಗೊಳ್ಳಲಿದೆ ಎಂದು ತಿಳಿದುಬಂದಿದೆ. ಇನ್ನು ಅಂತಿಮಗೊಂಡ 25 ಸಂಭಾವ್ಯ ಪಟ್ಟಿಯಲ್ಲಿ ಕೆಲ ಬದಲಾವಣೆಗಳೂ ಆಗಬಹುದು ಎಂದು ಹೇಳಲಾಗಿದೆ.

ಇನ್ನು ಮೊದಲ ಹಂತದ ಪಟ್ಟಿಯಲ್ಲಿರುವ 25 ಮಂದಿಯೂ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ. ಇನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ 15 ಕಾರ್ಯಕರ್ತರ ಪಟ್ಟಿಯನ್ನೂ ಅಂತಿಮಗೊಳಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಮೊನ್ನೇ ಅಷ್ಟೇ ಬಂದು ಹೋಗಿರುವ ಸುರ್ಜೆವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಹಾಗೂ ಬಸವರಾಜ ರಾಯರೆಡ್ಡಿ ಜೊತೆ ಸುದೀರ್ಘವಾಗಿ ಚರ್ಚಿಸಿದ್ದರು. ತಡರಾತ್ರಿ ವರೆಗೂ ನಿಗಮ ಮಂಡಳಿಗೆ ಆಯ್ಕೆ ಬಗ್ಗೆ ಸಭೆ ಮಾಡಿದ್ದರು. ಆದ್ರೆ, ರಾಯರೆಡ್ಡಿ ನಿಗಮ ಮಂಡಳಿಯನ್ನು ನಿರಾಕರಿಸಿದ್ದು, ಸಚಿವ ಸ್ಥಾನ ಬೇಕು ಎನ್ನುವ ಬೇಡಿಕೆ ಇಟ್ಟಿದ್ದರು.

ಸಂಭಾವ್ಯರ ಪಟ್ಟಿ ಹೀಗಿದೆ

ಪಿ.ಎಂ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ಟಿ.ಡಿ ರಾಜೇಗೌಡ, ಶಿವಲಿಂಗೇಗೌಡ, ಬಿ.ಕೆ ಸಂಗಮೇಶ್, ಬಂಗಾರಪೇಟೆ ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ, ಬಿ.ಆರ್ ಪಾಟೀಲ್, ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಯಶವಂತ್ ರಾಯ್ ಗೌಡ ಪಾಟೀಲ್, ಬಿ.ಜಿ ಗೋವಿಂದಪ್ಪ. ರಾಘವೇಂದ್ರ ಹಿಟ್ನಾಳ್, ರಘುಮೂರ್ತಿ, ಭೀಮಣ್ಣ ನಾಯ್ಕ್, ಸತೀಶ್ ಸೈಲ್, ಪ್ರಸಾದ್ ಅಬ್ಬಯ್ಯ, ಜಿ.ಟಿ ಪಾಟೀಲ್ , ಡಿ.ಆರ್ ಪಾಟೀಲ್, ಬಸನಗೌಡ ತುರುವಿಹಾಳ್

ಹಾಗಾದ್ರೆ, ಯಾರಿಗೆ ನಿಗಮ ಮಂಡಳಿ ಭಾಗ್ಯ ಒಲಿದು ಬರಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ