ಬೆಂಗಳೂರಿನ ಹಲವು ಆಸ್ಪತ್ರೆಗಳು ಆಂಟಿಬಯೋಟಿಕ್​ ನೀತಿ ಅನಷ್ಠಾನಗೊಳಿಸಿಲ್ಲ: ವರದಿ

|

Updated on: Aug 29, 2023 | 12:39 PM

Bengaluru: ಬೆಂಗಳೂರಿನ ನೂರಾರು ಆಸ್ಪತ್ರೆಗಳಲ್ಲಿ, ಕೇವಲ 80 ಆಸ್ಪತ್ರೆಗಳು ಮಾತ್ರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿವೆ. ಈ ಆಸ್ಪತ್ರೆಗಳು ಕಡ್ಡಯಾವಾಗಿ ಆಂಟಿಬಯಾಟಿಕ್​​​ ಕಾರ್ಯಕ್ರಮವನ್ನು ಅನುಸರಿಸುತ್ತಿವೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿಲ್ಲ.

ಬೆಂಗಳೂರಿನ ಹಲವು ಆಸ್ಪತ್ರೆಗಳು ಆಂಟಿಬಯೋಟಿಕ್​ ನೀತಿ ಅನಷ್ಠಾನಗೊಳಿಸಿಲ್ಲ: ವರದಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಆಂಟಿಬಯಾಟಿಕ್​​ಗಳ (Antibiotic) ಬೇಕಾಬಿಟ್ಟಿ ಬಳಕೆಯಿಂದ ರೋಗಾಣುಗಳು ಔಷಧಿ-ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಬೆಂಗಳೂರು ನಗರದ ಕೆಲ ಆಸ್ಪತ್ರೆಗಳು ಆಂಟಿಬಯಾಟಿಕ್ ಬಳಕೆ ಮೇಲೆ ತೀವ್ರ ನಿಗಾ ಇಡುವ ಕಾರ್ಯಕ್ರಮಗಳನ್ನು ಅನುಸರಿಸುತ್ತಿವೆ. ಬೆಂಗಳೂರಿನ ನೂರಾರು ಆಸ್ಪತ್ರೆಗಳಲ್ಲಿ, ಕೇವಲ 80 ಆಸ್ಪತ್ರೆಗಳು ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (NABH) ಮಾನ್ಯತೆ ಪಡೆದಿವೆ. ಈ ಆಸ್ಪತ್ರೆಗಳು ಕಡ್ಡಯಾವಾಗಿ ಈ ಕಾರ್ಯಕ್ರಮವನ್ನು ಅನುಸರಿಸುತ್ತಿವೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿಲ್ಲ.

ಈ ಕಾರ್ಯಕ್ರಮವನ್ನು ಅನುಸರಿಸುತ್ತಿರುವ ಆಸ್ಪತ್ರೆಗಳು ಕಡ್ಡಾಯವಾಗಿ ಆಂಟಿಬಯೋಟಿಕ್​ ಪಾಲಿಸಿಯನ್ನು ಹೊಂದಿರಬೇಕು. ಯಾವ ಆ್ಯಂಟಿಬಯೋಟಿಕ್‌ಗಳನ್ನು ಬಳಸಬಹುದು, ಯಾವುದನ್ನು ನಿರ್ಬಂಧಿಸಲಾಗಿದೆ ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ ಸೋಂಕು ತಡೆಗಟ್ಟಲು ಯಾವುದನ್ನು ಬಳಸಬಹುದು ಎಂಬುದನ್ನು ಪಾಲಿಸಿ ತಿಳಿಸುತ್ತದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR), ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಇತ್ಯಾದಿಗಳ ಶಿಫಾರಸುಗಳ ಆಧಾರದ ಮೇಲೆ ಅನೇಕ ಆಸ್ಪತ್ರೆಗಳು ತಮ್ಮ ಆಂಟಿಬಯಾಟಿಕ್​​ ಪಾಲಿಸಿಯನ್ನು ಅಭಿವೃದ್ಧಿಪಡಿಸುತ್ತಿವೆ. ಆದರೆ ಆಸ್ಪತ್ರೆಗಳು ತಮ್ಮದೇ ಆದ ಆಂಟಿಬಯೋಗ್ರಾಮ್ ಅನ್ನು ಆಧರಿಸಿ ಪಾಲಿಸಿಯನ್ನು ಅಭಿವೃದ್ಧಿಪಡಿಸಬೇಕೆಂದು ಎನ್​​ಎಬಿಹೆಚ್​​ ಶಿಫಾರಸು ಮಾಡಿದೆ.

ಇದನ್ನೂ ಓದಿ: ಮೂತ್ರಕೋಶದ ಕ್ಯಾನ್ಸರ್​ ಲಕ್ಷಣಗಳೇನು? ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

ನಮ್ಮ ಆಸ್ಪತ್ರೆಯಲ್ಲಿ ಶೇಕಡಾ 30 ರಷ್ಟು ರೋಗಿಗಳು ಆಂಟಿಬಯಾಟಿಕ್​ ಅನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ ನಾವು ಅದನ್ನು ಸ್ವಲ್ಪ ಸಮಯದವರೆಗೆ ಬಳಸುವುದಿಲ್ಲ. ಆದರೆ ರೋಗ ಮುಂದಿನ 48 ಗಂಟೆಗಳಲ್ಲಿ ಉಲ್ಬಣಗೊಂಡಾಗ ಆಂಟಿಬಯೋಟಿಕ್​ ನೀಡುವುದು ಅನಿವಾರ್ಯ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ ಜಾನ್ ಪಾಲ್ ಹೇಳಿದರು.

ಕೊರೊನಾ ಸಂಬಂಧಿ ಸಾವು ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಆ್ಯಂಟಿಬಯೋಟಿಕ್​ ಬಳಕೆ ಪ್ರಮಾಣ ಶೇ 1.34 ರಷ್ಟು ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Tue, 29 August 23