ಶಂಕಿತ ಉಗ್ರನ ಎಂಜಲು ಹಣ ತಿಂದು ಜೈಲಿನಲ್ಲಿ ಫೋನ್​ ಸಂಭಾಷಣೆಗೆ ಸಹಾಯ: ಸ್ಫೋಟಕ ಮಾಹಿತಿ ಬಯಲು, ಅಧಿಕಾರಿಗಳಿಗೆ ಸಂಕಷ್ಟ

| Updated By: ರಮೇಶ್ ಬಿ. ಜವಳಗೇರಾ

Updated on: Jul 27, 2023 | 3:01 PM

ಶಂಕಿತ ಉಗ್ರನ ಎಂಜಲು ಹಣ ತಿಂದು ಫೋನ್​ ಸಂಭಾಷಣೆಗೆ ಸಹಾಯ ಮಾಡಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗೆ ನಡುಕ ಶುರುವಾಗಿದೆ.

ಶಂಕಿತ ಉಗ್ರನ ಎಂಜಲು ಹಣ ತಿಂದು ಜೈಲಿನಲ್ಲಿ ಫೋನ್​ ಸಂಭಾಷಣೆಗೆ ಸಹಾಯ: ಸ್ಫೋಟಕ ಮಾಹಿತಿ ಬಯಲು, ಅಧಿಕಾರಿಗಳಿಗೆ ಸಂಕಷ್ಟ
ಪರಪ್ಪನ ಅಗ್ರಹಾರ ಜೈಲು
Follow us on

ಬೆಂಗಳೂರು, (ಜುಲೈ 27): ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ(suspected terrorists) ಬಂಧನಕ್ಕೆ ಪ್ರಕರಣದ ತನಿಖೆಯಲ್ಲಿ ಒಂದಾದ ಮೇಲೊಂದು ಸ್ಫೋಟಕ ಅಂಶಗಳು ಬಯಲಿಗೆ ಬರುತ್ತಿವೆ. ಎ1 ಆರೋಪಿ ನಾಸೀರ್  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Bengaluru parappana agrahara jail) ಪೋನ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು… ಜೈಲಿನಲ್ಲಿದ್ದುಕೊಂಡು ಅಕ್ರಮವಾಗಿ ಫೋನ್ ಬಳಸಿದ್ದಾನೆ ಐಎಸ್ಡಿ ತಂಡ ವಿಚಾರಣೆ ವೇಳೆ ನಾಸೀರ್ ಬಾಯ್ಬಿಟ್ಟಿದ್ದಾನೆ. ಸದ್ಯ ಐಎಸ್ಡಿ ತಂಡ ನಾಸೀರ್ ಬಳಸಿದ್ದ ಪೋನ್ ಸೀಜ್ ಮಾಡಿದ್ದು. ಇದೀಗ ಜೈಲು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ವಿದೇಶದಲ್ಲಿ ತಲೆಮರಿಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಗರ್ಲ್​ ಫ್ರೆಂಡ್ ಪತ್ತೆ ಹಚ್ಚಿ ಸಿಸಿಬಿ ಪೊಲೀಸರು

ಕಳೆದ ಕೆಲ ವರ್ಷಗಳಿಂದ ನಾಸೀರ್ ಜೈಲಿನಲ್ಲಿ ನಿತ್ಯ ಫೋನ್​ ಸಂಭಾಷಣೆ ಮಾಡಿದ್ದಾರೆ. ಜೈಲು ಅಧಿಕಾರಿಗಳೇ ಲಂಚ ಪಡೆದು ನಾಸೀರ್​ ಫೋನ್​ನಲ್ಲಿ ಮಾತನಾಡು ಸಹಾಯ ಮಾಡಿದ್ದಾರೆ. ಈತನ ಅಕ್ರಮಕ್ಕೆ ಹಣ ಪಡೆದುಕೊಂಡು ಜೈಲು ಅಧಿಕಾರಿಗಳು ಸಾಥ್ ನೀಡಿದ್ದು, ಇದೀಗ ಶಂಕಿತ ಉಗ್ರನ ಎಂಜಲು ಹಣ ತಿಂದ ಸಿಬ್ಬಂದಿಗೆ ಈಗ ನಡುಕ ಶುರುವಾಗಿದೆ.

ನಾಸೀರ್​​ಗೆ ಸಹಾಯ ಮಾಡಿದ್ದ ಹಿರಿಯ ಅಧಿಕಾರಿಗಳು, ಜೈಲರ್ಸ್ ಮತ್ತು ಸಿಬ್ಬಂದಿ ಹೆಸರುಗಳನ್ನು ಐಎಸ್ಡಿ ಪಟ್ಟಿ ಮಾಡಿದ್ದು, ಸದ್ಯದಲ್ಲೇ ಅಷ್ಟು ಮಂದಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. ಅಷ್ಟು ಮಂದಿ ಸೇರಿ ನಾಸೀರ್ ನಿಂದ ಲಕ್ಷ ಲಕ್ಷ ರೂ. ಹಣ ಪೀಕಿದ್ದು, ಇದೀಗ ಈಗ ಹಣ ಪಡೆದಕೊಂಡ ಅಧಿಕಾರಿಗಳ ಬಂಡವಾಳ ಬಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ