BF.7 ಭೀತಿ: ಹೈರಿಸ್ಕ್​ ದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್​ ಕಡ್ಡಾಯ

| Updated By: ಆಯೇಷಾ ಬಾನು

Updated on: Jan 01, 2023 | 10:55 AM

ಹಾಂಗ್​ಕಾಂಗ್, ಸಿಂಗಾಪುರ, ಚೀನಾ, ಜಪಾನ್, ಥೈಲ್ಯಾಂಡ್‌, ದ.ಕೊರಿಯಾ ಸೇರಿದಂತೆ ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆ.

BF.7 ಭೀತಿ: ಹೈರಿಸ್ಕ್​ ದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್​ ಕಡ್ಡಾಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್​ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ ಹೈರಿಸ್ಕ್​ ದೇಶದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್​ ಕಡ್ಡಾಯಗೊಳಿಸಲಾಗಿದೆ. ಹಾಂಗ್​ಕಾಂಗ್, ಸಿಂಗಾಪುರ, ಚೀನಾ, ಜಪಾನ್, ಥೈಲ್ಯಾಂಡ್‌, ದ.ಕೊರಿಯಾ ಸೇರಿದಂತೆ ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆ.

ವಿದೇಶದಿಂದ ಬರುವ ಕ್ವಾರಂಟೈನ್​ಗೆ ಒಳಪಡುವವರು ಹೋಟೆಲ್​​ನಲ್ಲಿ ಉಳಿಯುವ ಪ್ರಯಾಣಿಕರು ತಾವೇ ವೆಚ್ಚ ಭರಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗುವವರ ಮೇಲೆ ಬಿಬಿಎಂಪಿ ನಿಗಾ ಇಡಲಿದೆ. ಟೆಸ್ಟ್ ವೇಳೆ ಕೊವಿಡ್​ ದೃಢಪಟ್ಟರೆ ಹೋಟೆಲ್ ಕ್ವಾರಂಟೈನ್ ಕಡ್ಡಾಯ. ಜಿನೋಮಿಕ್ ಸಿಕ್ವೆನ್ಸ್ ಕಡ್ಡಾಯ ಮಾಡಲು ಬಿಬಿಎಂಪಿ ತೀರ್ಮಾನ ಮಾಡಿದೆ.

ಇದನ್ನೂ ಓದಿ: Karnataka Covid Updates: ಬಹುದಿನಗಳ ಬಳಿಕ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆ, ಹೆಚ್ಚಿದ ಆತಂಕ

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆ, ಖಾಸಗಿ ಆಸ್ಪತ್ರೆಗಳತ್ತ ಜನರ ದೌಡು

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆ ಇರುವ ಕಾರಣ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಯಗೊಂಡಿರುವ ಜನತೆ ಬೂಸ್ಟರ್ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಹೇಗೂ ಕೊರೊನಾ ಕಡಿಮೆಯಾಗಿದೆ ಎಂದು ಬೂಸ್ಟರ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕಿದ್ದರು. ಒಂದು ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ 50-100 ಜನರು ಲಸಿಕೆ ಪಡೆಯುತ್ತಿದ್ದಾರೆ, ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ 10 ಸಾವಿರ ಲಸಿಕೆಗಳ ದಾಸ್ತಾನು ಇದೆ.

ಈಗಾಗಲೇ ಜನರು ಎರಡು ಡೋಸ್‌ಗಳನ್ನು ಪಡೆದಿದ್ದು, ಇದೀಗ ಬೂಸ್ಟರ್ ಲಸಿಕೆ ಪಡೆಯಲು ಮುಂದಾಗಿದ್ದಾರೆ. ರೂಪಾಂತರಿ BF.7 ಆತಂಕ ಹಿನ್ನೆಲೆ ಮತ್ತೆ ಬೂಸ್ಟರ್ ಡೋಸ್‌ ಪಡೆಯಲು ಜನರು ಮುಂದಾಗಿದ್ದಾರೆ. ಇಷ್ಟು ದಿನ ಕೇವಲ ಶೇ. 21ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್​ ಪಡೆದಿದ್ದರು. ಇದರಲ್ಲಿ ಅತಿ ಹೆಚ್ಚು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.

ಹೀಗಾಗಿ ಬೂಸ್ಟರ್ ಡೋಸ್‌ನಲ್ಲೂ ಕೋವಿಶೀಲ್ಡ್ ಬೇಕು ಎಂದು ಜನರು ಹೇಳುತ್ತಿದ್ದಾರೆ. ಇದೀಗ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು ರಾಜ್ಯ ಸರ್ಕಾರ ಹೇಳಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೇ ಕೋವಿಶಿಲ್ಡ್ ಹಾಗೂ ಕೋರ್ಬಿವ್ಯಾಕ್ಸ್ ಲಸಿಕೆ ಲಭ್ಯವಿಲ್ಲ. ದೇಶಕ್ಕೆ ಮತ್ತೆ ಕೊರೊನಾ(Corona) ಭೀತಿ ಎದುರಾಗಿದೆ, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 2 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಸಿದ್ಧ ಎಂದು ಸೀರಮ್ ಇನ್​ಸ್ಟಿಟ್ಯೂಟ್ ಹೇಳಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:53 am, Sun, 1 January 23