ಬೆಂಗಳೂರು, ಜೂನ್ 26: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ದುರಸ್ತಿ ಅಥವಾ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು (ಜೂ.26) ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಮಾದ್ಯಮ ಪ್ರಕಟಣೆ ಹೊರಡಿಸಿದೆ. ಹಾಗೆ, ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 10:30 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ರಾಮನಗರ ಮತ್ತು ಮಾಗಡಿಯಲ್ಲಿ ಬೆಳಗ್ಗೆ 10:30 ರಿಂದ 3 ಗಂಟೆಯವರೆಗೆ ಮತ್ತು ಕನಕಪುರದಲ್ಲಿ 4 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರಿನ, ಆರ್ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುವಲ್ ರಸ್ತೆ, ಕರಿಯಪ್ಪ ಲೇಔಟ್, ಆಶ್ರಮ ರಸ್ತೆ, ಆನಂದನಗರ ಮೊದಲನೇ ಬ್ಲಾಕ್, ಗುಡ್ಡಪ್ಪರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ ಮೊದಲನೇ ಬ್ಲಾಕ್, ನಂದಿದುರ್ಗ ರಸ್ತೆ, ಮರಪ್ಪ ಗಾರ್ಡನ್, ಜೆಸಿನಗರ, ಮಿಲ್ಲರ್ಸ್ ರಸ್ತೆ, ಗಂಗಾನಗರ, ಚಾಮುಂಡಿನಗರ, ದಿನ್ನುರ, ಪಿ&ಟಿ ಕಾಲೋನಿ, ಇಎಕ್ಸ್ ಸರ್ವಿಸ್ ಮೆನ್ ಕಾಲೋನಿ, ಎಮ್ಎಲ್ಎ ಲೇಔಟ್, ಗಂಗಾನಗರ, ಆರ್ಬಿವೈ ಕಾಲೋನಿ, ಹೆಚ್ಎಮ್ಟಿ ಲೇಔಟ್, ವಸಂತಪ್ಪ ಬ್ಲಾಕ್ ಇತ್ಯಾದಿ.
ಇದನ್ನೂ ಓದಿ: ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು -ಬೆಸ್ಕಾಂ ಸ್ಪಷ್ಟನೆ
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrljOB ಸಂಪರ್ಕಿಸಿ. pic.twitter.com/7Ysbrw38C9
— Namma BESCOM | ನಮ್ಮ ಬೆಸ್ಕಾಂ (@NammaBESCOM) June 25, 2024
ಮಾಗಡಿ ಉಪವಿಭಾಗ ಪ್ರದೇಶದ ಮತ್ತೀಕೆರೆ, ಹೆಲಿಗೆಹಳ್ಳಿ ಉಪವಿಭಾಗ, ಬಸಪಾನ ದೊಡ್ಡಿ, ಎಲಿಗೆಹಳ್ಳಿ, ಗೆಜ್ಜೆಗರಗುಪ್ಪೆ.
ಕನಕಪುರ: ಕೊಳ್ಳಿಗನಹಳ್ಳಿ ಪಂಚಾಯಿತಿ, ಟಿ-ಹೊಸಹಳ್ಳಿ ಪಂಚಾಯತಿ ಮತ್ತು ಚೇಳೂರು ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಟೌನ್, ಹಾರೋಹಳ್ಳಿ ಕೈಗಾರಿಗಾ ಪ್ರದೇಶ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ರಾಮನಗರ: ಹುನ್ನಾಸಹನಹಳ್ಳಿ, ಕೊನಗಲ, ಯರಬನಗರದಲ್ಲಿ ವಿದ್ಯುತ್ ಕಟ್ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Wed, 26 June 24